»   » ಇಂದಿರಾ ಕ್ಯಾಂಟೀನ್ ನಲ್ಲಿ ಕಾಣಿಸಿಕೊಂಡ 'ಬಿಗ್ ಬಾಸ್' ಪ್ರಥಮ್

ಇಂದಿರಾ ಕ್ಯಾಂಟೀನ್ ನಲ್ಲಿ ಕಾಣಿಸಿಕೊಂಡ 'ಬಿಗ್ ಬಾಸ್' ಪ್ರಥಮ್

Posted By:
Subscribe to Filmibeat Kannada

'ಬಿಗ್ ಬಾಸ್' ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ತಮ್ಮ ತಮಾಷೆ ಜೊತೆಗೆ ಸಿನಿಮಾಗಳ ವಿಷಯ ಏನೇ ಇದ್ದರೂ ಪ್ರಥಮ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇದೀಗ ಇಂದಿರಾ ಕ್ಯಾಂಟೀನ್ ಮುಂದೆ ಇರುವ ಫೋಟೋವೊಂದನ್ನು ಪ್ರಥಮ್ ಶೇರ್ ಮಾಡಿದ್ದಾರೆ.

'ತಾರಕ್' ಚಿತ್ರ ನೋಡಿ 'ಒಳ್ಳೆ ಹುಡುಗ' ಪ್ರಥಮ್ ನೀಡಿರುವ ವಿಮರ್ಶೆ ಇದು..

''ನನಗೆ ಹೊಟ್ಟೆ ಹಸಿವಾದರೆ ಎಲ್ಲಿ ಸಿಕ್ಕರೂ ಶಿವಾ ಅನ್ಸದೆ'' ಎಂದು ತಮ್ಮ ಸ್ಟೈಲ್ ನಲ್ಲಿ ಬರೆದು ಇಂದಿರಾ ಕ್ಯಾಂಟೀನ್ ಎದುರು ತಿಂಡಿ ತಿನ್ನುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಗೆಳೆಯನ ಹುಟ್ಟುಹಬ್ಬದ ದಿನ ಅವರ ಜೊತೆ ಪ್ರಥಮ್ ಇಂದಿರಾ ಕ್ಯಾಂಟೀನ್ ಗೆ ಹೋಗಿರುವುದು ಮತ್ತೊಂದು ವಿಶೇಷ.

Pratham posted indira canteen photo

'ಬಿಗ್ ಬಾಸ್' ಮನೆಯಿಂದ ಬಂದ ಮೇಲೆ ಪ್ರಥಮ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ 'ದೇವ್ರಂಥ ಮನುಷ್ಯ' ಚಿತ್ರದ ಸದ್ಯಲ್ಲಿಯೇ ತೆರೆಗೆ ಬರಲಿದೆ.

English summary
'Bigg Boss Kannada 4' winner Pratham has taken his facebook account to post Indira Canteen photo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada