»   » 'ತಾರಕ್' ಚಿತ್ರ ನೋಡಿ 'ಒಳ್ಳೆ ಹುಡುಗ' ಪ್ರಥಮ್ ನೀಡಿರುವ ವಿಮರ್ಶೆ ಇದು..

'ತಾರಕ್' ಚಿತ್ರ ನೋಡಿ 'ಒಳ್ಳೆ ಹುಡುಗ' ಪ್ರಥಮ್ ನೀಡಿರುವ ವಿಮರ್ಶೆ ಇದು..

Posted By:
Subscribe to Filmibeat Kannada
Pratham Talks About Darshan Tarak Movie | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಪ್ಪಟ ಫ್ಯಾಮಿಲಿ ಎಂಟರ್ ಟೇನರ್ ಸಿನಿಮಾ 'ತಾರಕ್'ಗೆ ಉತ್ತಮ ಪ್ರತಿಕ್ರಿಯೆ ಕೂಡ ಲಭ್ಯವಾಗಿದೆ.

'ದಾಸ' ದರ್ಶನ್ ಗೆ ಹೊಸ ಇಮೇಜ್ ನೀಡಿರುವ 'ತಾರಕ್' 'ಸೂಪರ್ರೋ ಸೂಪರ್' ಅಂತ 'ಒಳ್ಳೆ ಹುಡುಗ' ಪ್ರಥಮ್ ಕೂಡ ಹಾಡಿ ಹೊಗಳಿದ್ದಾರೆ.

Pratham lauds Darshan starrer Kannada Movie 'Tarak'

''ಎರಡನೇ ಬಾರಿ 'ತಾರಕ್' ವೀಕ್ಷಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನಗೆ ಸಖತ್ ಖುಷಿ ಕೊಟ್ಟಂತಹ ಸಿನಿಮಾ. ಕುರಿ ಪ್ರತಾಪ್ ಬಹಳ ಇಷ್ಟ ಆಗೋದ್ರು. ನಿಜವಾಗಿಯೂ ನನ್ನ ಮನಸ್ಸಿಗೆ ತುಂಬಾ ಹಿಡಿಸಿದ ಸಿನಿಮಾ, ನಗು ಹಾಗೂ ಭಾವನಾತ್ಮಕವಾಗಿ ಕಾಡುವ ಸಿನಿಮಾ. ದರ್ಶನ್ ತೂಗುದೀಪ ರವರು, ಪ್ರಕಾಶ್ ಸರ್, ಶಾನ್ವಿ, ಶ್ರುತಿ ಹರಿಹರನ್ ಜೊತೆಗೆ ನನ್ನ ಪ್ರೀತಿಯ ಸಹೋದರ ಮಿತ್ರರಾದ ಕುರಿ ಪ್ರತಾಪ್ ಸೂಪರ್ರೋ ಸೂಪರ್. ಮಿಸ್ ಮಾಡದೆ ನೋಡಿ ತಾರಕೋತ್ಸವವನ್ನು'' ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ.ಅಂದ್ಹಾಗೆ, ನಟ ದರ್ಶನ್ ಅಭಿನಯದ 49ನೇ ಸಿನಿಮಾ 'ತಾರಕ್'. ತಾತ ಹಾಗೂ ಮೊಮ್ಮಗನ ನಡುವಿನ ಬಾಂಧವ್ಯದ ಕಥೆ ಹೊಂದಿರುವ 'ತಾರಕ್' ಚಿತ್ರಕ್ಕೆ 'ಮಿಲನ' ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ. 'ತಾರಕ್' ಚಿತ್ರದ ವಿಮರ್ಶೆ ಓದಲು ಈ ಲಿಂಕ್ ಕ್ಲಿಕ್ ಮಾಡಿ... ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

English summary
'Olle Huduga' Pratham lauds Darshan starrer Kannada Movie 'Tarak'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada