'ಏಕ್ ಲವ್ ಯಾ' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ
ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ನಾಳೆ (ಫೆ 24) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್, ರಾಣಾ ಹಾಗೂ ರೀಷ್ಮಾ ನಾಣಯ್ಯ ಅಭಿನಯದ ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಅರ್ಜುನ್ ಜನ್ಯ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಿದ್ದು, ಒಂದು ದಿನ ಮುನ್ನ ಗಣ್ಯರಿಗಾಗಿ ಪ್ರೀಮಿಯರ್ ಇಟ್ಟುಕೊಂಡಿತ್ತು ಚಿತ್ರತಂಡ.
ಪ್ರೇಮ್ ಹಾಗೂ ರಕ್ಷಿತಾ ಇಬ್ಬರೂ ರಾಜಕೀಯ ಮುಖಂಡರಿಗೆ ಹಾಗೂ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಿದ್ದರು. ಅಲ್ಲದೆ ಸಾರ್ವಜನಿಕರಿಗೂ ಈ ಸಿನಿಮಾವನ್ನು ವಿಶೇಷವಾಗಿ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಪ್ರೇಮ್ ನೀಡಿದ ಆಹ್ವಾನದ ಮೇರೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಇಂದು (ಫೆ 23) ಏಕ್ ಲವ್ ಯಾ ಸಿನಿಮಾವನ್ನು ವೀಕ್ಷಿಸಿದ್ದಾರೆ.

ಏಕ್ ಲವ್ ಯಾ ಸಿನಿಮಾಗೆ ಶುಭ ಕೋರಿದ ಸಿದ್ಧರಾಮಯ್ಯ
ನಟಿ ರಕ್ಷಿತಾ ಸಹೋದರ ರಾಣಾ ಅಭಿನಯದ 'ಏಕ್ ಲವ್ ಯಾ' ನಾಳೆ (ಫೆ 23) ರಾಜ್ಯಾದ್ಯಂತ ನಾಳೆ ಬಿಡುಗಡೆಯಾಗುತ್ತದ್ದು, ಸಿನಿಮಾ ವೀಕ್ಷಿಸಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಚಿತ್ರಕ್ಕೆ ಶುಭ ಹಾರೈಸಿದ್ದು, ಪ್ರೇಮ್ ಹಾಗೂ ಅವರ ತಂಡವನ್ನು ಅಭಿನಂದಿಸಿದ್ದಾರೆ. ಏಕ್ ಲವ್ ಯಾ ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸಿದ್ದಾರೆ.
'ಏಕ್ ಲವ್ ಯಾ' ಸಿನಿಮಾ ವೀಕ್ಷಿಸಿದ ರೇಣುಕಾಚಾರ್ಯ
ಏಕ್ ಲವ್ ಯಾ ಪ್ರೀಮಿಯರ್ ಶೋಗೆ ರಾಜಕೀಯ ಮುಖಂಡರಿಗೆ ಮೊದಲೇ ಪ್ರೇಮ್ ಆಹ್ವಾನ ನೀಡಿದ್ದರು. ಸಿದ್ಧರಾಮಯ್ಯ ಜೊತೆ ರೇಣುಕಾಚಾರ್ಯ ಕೂಡ ಸಿನಿಮಾ ವೀಕ್ಷಿಸಿದ್ದಾರೆ. ಪ್ರೇಮ್ ಆಹ್ವಾನದ ಮೇರೆಗೆ ಆಗಮಿಸಿದ್ದ ರೇಣುಕಾಚಾರ್ಯ ಗಣ್ಯರೊಂದಿಗೆ ಕೂತು 'ಏಕ್ ಲವ್ ಯಾ' ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.


Click it and Unblock the Notifications










