Sanjay Dutt: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಧೀರ.. 'ಪ್ರೇಮ್ಸ್ ಬೆಸ್ಟ್ ಡೈರೆಕ್ಟರ್' ಎಂದು ಸಂಜೂ ಬಾಬಾ

ಬಾಲಿವುಡ್ ನಟಿ ಸಂಜಯ್ ದತ್ ಕನ್ನಡದ ಮತ್ತೊಂದು ಸಿನಿಮಾ ನಟಿಸುತ್ತಿರೋದು ಗೊತ್ತೇ ಇದೆ. ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'KD' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ 'ಕೆಜಿಎಫ್ 2'ನ ಅಧೀರ ನಟಿಸುತ್ತಿದ್ದಾರೆ.

'ಕೆಜಿಎಫ್‌ 2'ಗಾಗಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದೇ ಇಟ್ಟಿದ್ದು, ಸಂಜಯ್ ದತ್‌ಗೆ ಸೌತ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಸದ್ಯ ಧ್ರುವ ಸರ್ಜಾ ನಟಿಸುತ್ತಿರುವ 'KD' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿರುವ ಸಂಜಯ್ ದತ್ ಮೈಸೂರಿನಲ್ಲಿರುವ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದಿದ್ದಾರೆ.

Sanjay Dutt, Chamundeshwari Temple, Mysore

ಚಾಮುಂಡಿ ತಾಯಿಯ ದರ್ಶನದ ಬಳಿಕ ಸಂಜಯ್ ದತ್ ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ. ಈ ವೇಳೆ ಚಾಮುಂಡೇಶ್ವರಿ ತಾಯಿ, ಪ್ರೇಮ್ ನಿರ್ದೇಶನದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ.

ದೇವಿಯೇ ಕರೆಸಿಕೊಂಡಿದ್ದಾಳೆ

ಸಂಜಯ್ ದತ್‌ಗೆ ಮೈಸೂರು ಹೊಸದೇನು ಅಲ್ಲ. ಆದರೆ, ಚಾಮುಂಡೇಶ್ವರಿ ದರ್ಶನ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಚಾಮುಂಡಿ ತಾಯಿಯ ದರ್ಶನ ಪಡೆದು ಬಂದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತಾಡಿ ದೇವಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

Sanjay Dutt, Chamundeshwari Temple, Mysore

"ನಾನು ಎಷ್ಟು ಬಾರಿ ಮೈಸೂರಿಗೆ ಬಂದಿದ್ದೇನೆ. ದೇವಿ ನನ್ನನ್ನು ಕರೆಸಿಕೊಂಡಿರಲಿಲ್ಲ. ಇಂದು ನನಗೆ ಬರುವಂತೆ ಆಜ್ಞೆ ಮಾಡಿದ್ದಾರೆ. ನನಗೆ ತುಂಬಾನೇ ಖುಷಿ ಆಗುತ್ತಿದೆ. ನಾನಿಲ್ಲಿ ದೇವಿಯ ದರ್ಶನ ಮಾಡುವುದಕ್ಕೆ ಬಂದಿದ್ದೇನೆ." ಎಂದು ಸಂಜಯ್ ದತ್ ಹೇಳಿದ್ದಾರೆ.

ಪ್ರೇಮ್ ಬೆಸ್ಟ್ ಡೈರೆಕ್ಟರ್

ಸಂಜಯ್ ದತ್ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬರುತ್ತಿದ್ದಾರೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ದಕ್ಷಿಣ ಭಾರತದ ಸಿನಿಮಾ ಹಾಗೂ ಪ್ರೇಮ್ ನಿರ್ದೇಶನದ ಬಗ್ಗೆ ಸಂಜಯ್ ದತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

"ಪ್ರೇಮ್ಸ್ ಜೊತೆ ಕೆಡಿ ಶೂಟಿಂಗ್ ಮಾಡುತ್ತಿದ್ದೇನೆ. ನನಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಖುಷಿ ಕೊಡುತ್ತಿದೆ. ಕೆಜಿಎಫ್ ಜೊತೆ ಕೆಲಸ ಮಾಡಿದ್ದು ಖುಷಿ. ಪ್ರೇಮ್ ಸರ್ ಜೊತೆ ಕೆಲಸ ಮಾಡುತ್ತಿರೋದು ಖುಷಿಯಿದೆ. ಪ್ರೇಮ್ ಬೆಸ್ಟ್ ಡೈರೆಕ್ಟರ್." ಎಂದು ಸಂಜಯ್ ಜೋಗಿ ಪ್ರೇಮ್ ನಿರ್ದೇಶನವನ್ನು ಹಾಡಿ ಹೊಗಳಿದ್ದಾರೆ.

ದಕ್ಷಿಣ ಭಾರತದಲ್ಲಿ ಸಂಜಯ್ ದತ್ ಬ್ಯುಸಿ

ಸಂಜಯ್ ದತ್ 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಆಫರ್‌ಗಳು ಹೆಚ್ಚಾಗಿ ಬರುತ್ತಿದೆ. ತಮಿಳು ಹಾಗೂ ತೆಲುಗು ಸಿನಿಮಾಗಳ ಆಫರ್‌ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಕನ್ನಡದಲ್ಲಿಯೇ 'ಕೆಡಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಂದ್ಹಾಗೆ 'ಕೆಡಿ' ಸಿನಿಮಾದಲ್ಲಿ ಸಂಜಯ್ ದತ್ ಜೊತೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಶೆಟ್ಟಿ ಸೇರಿದಂತೆ ದಿಗ್ಗಜರೇ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಶೂಟಿಂಗ್ ವೇಗವಾಗಿ ನಡೆಯುತ್ತಿದೆ.

More from Filmibeat

English summary
Prem is Best Director Says Sanjay Dutt after Chamundeswari temple visit in Mysore, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X