"ದೇವಲೋಕಕ್ಕೆ ಒಬ್ಬನೇ ಇಂದ್ರ.. ಚಿತ್ರರಂಗಕ್ಕೆ ಒಬ್ಬರೇ ಉಪೇಂದ್ರ"; ಟ್ವಿಟರ್‌ನಲ್ಲಿ ಮಸ್ತ್ ಮಸ್ತ್ ಕಾಮೆಂಟ್ಸ್

1999ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ರಿಯಲ್ ಸ್ಟಾರ್ ನಟಿಸಿದ 'ಉಪೇಂದ್ರ' ಸಿನಿಮಾ ಟ್ರೆಂಡ್ ಹುಟ್ಟಾಕಿತ್ತು. ಉಪ್ಪಿ ತನ್ನ ಫಿಲಾಸಫಿಯನ್ನು ತೆರೆಮೇಲೆ ತಂದಿದ್ದರು. ಇದು ಪ್ರೇಕ್ಷಕರಿಗೆ ಮೊದಲ ಬಾರಿ ನೋಡಿದ್ದಾಗ ಅರ್ಥ ಆಗಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಇದು ರೆಗ್ಯೂಲರ್ ಸಿನಿಮಾ ಅಲ್ಲ ಅನ್ನೋದಂತೂ ಗೊತ್ತಾಗಿತ್ತು.

ಹೆಚ್ಚು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ 'ಉಪೇಂದ್ರ' ಸಿನಿಮಾವನ್ನು ಶಿಲ್ಪಾ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಆಗಿನ ಕಾಲಕ್ಕೆ ಇದು ಮೂವತ್ತು ಕೋಟಿಗೆ ಸಮ ಅನ್ನಬಹುದೇನೋ. 'ಉಪೇಂದ್ರ' ಸಿನಿಮಾ ಇದೇ 25 ವರ್ಷಗಳ ಹಿಂದೆ ತೆರೆಕಂಡಾಗ 20 ವರ್ಷ ಮುಂದೆ ಹೇಳಬೇಕಿದ್ದ ಕತೆಯನ್ನು ಈಗ ಹೇಳಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು.

Prema Raveena Tandon Upendra Movie Re Release in Karnataka here is twitter reaction

ಉಪೇಂದ್ರ ಹಾಡುಗಳು ಹಿಟ್ ಆಗಿದ್ವು. ಡೈಲಾಗ್‌ಗಳಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಉಪ್ಪಿ ನಡೆ, ಕಾಸ್ಟ್ಯೂಮ್, ಮ್ಯಾನರಿಸಂ ಬಗ್ಗೆ ಎಲ್ಲಾ ಚರ್ಚೆಯಾಗುವುದಕ್ಕೆ ಶುರುವಾಗಿತ್ತು. ಕೆಲವರಂತೂ ಉಪ್ಪಿ ಅವತಾರವನ್ನೇ ತಾಳಿ ರಸ್ತೆಯಲ್ಲಿ ಓಡಾಡುವುದಕ್ಕೂ ಶುರು ಮಾಡಿದ್ದರು. ಈ ಹಂತದಲ್ಲಿ ಸಿನಿಮಾ ವಿವಾದಕ್ಕೂ ಸಿಕ್ಕಿಕೊಂಡಿತ್ತು. ಆದ್ರೀಗ 25 ವರ್ಷಗಳಾದ್ಮೇಲೆ ಮತ್ತೆ ರಿಲೀಸ್‌ಗೆ ರೆಡಿಯಾಗಿದೆ. ಆದರೆ, ಕ್ರೇಜ್ ಮಾತ್ರ ಒಂದೇ ಒಂದು ಚೂರು ಕಮ್ಮಿಯಾಗಿಲ್ಲ.

"ಚಿತ್ರರಂಗಕ್ಕೊಬ್ಬರೇ ಉಪೇಂದ್ರ"

'ಉಪೇಂದ್ರ' ಸಿನಿಮಾ ತೆರೆಕಂಡು 25 ವರ್ಷಗಳಾಗುತ್ತಿರುವ ಈ ಸಂಭ್ರಮದಲ್ಲಿ ಮತ್ತೆ ರೀ ರಿಲೀಸ್ ಮಾಡಲಾಗಿದೆ. ಇಷ್ಟು ವರ್ಷಗಳಲ್ಲಿ ಅದೆಷ್ಟೋ ಬಾರಿ ಕಿರುತೆರೆಯಲ್ಲಿ ಪ್ರಸಾರ ಆಗಿದೆ. ಹೀಗಿದ್ದರೂ, ಥಿಯೇಟರ್‌ನಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಸಿನಿಮಾದ ಬಳಿಕ ತಮ್ಮ ಎಕ್ಸ್‌ (ಟ್ವಿಟರ್) ಖಾತೆಯಲ್ಲಿ ಉಪ್ಪಿ ಶೈಲಿಯಲ್ಲಿಯೇ ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ಸಿನಿಮಾ ನೋಡಿ "ದೇವಲೋಕಕ್ಕೆ ಒಬ್ಬನೇ ಇಂದ್ರ.. ನಮ್ಮ ಚಂದನವನಕೆ ಒಬ್ಬರೇ ಉಪೇಂದ್ರ" ಎಂದು ಡೈಲಾಗ್ ಬಿಟ್ಟಿದ್ದಾರೆ.

"ವಿ ಲವ್ ಯು ಬಾ ಸಿಂಕ್ ಆಗ್ತಿಲ್ಲ"

ಉಪೇಂದ್ರ ಸಿನಿಮಾ ಒಂದೊಂದು ಹಾಡು, ಡೈಲಾಗ್‌ನಲ್ಲಿ ಏನಾದರೂ ಗೊಂದಲ ಆಗುವಂತಹ ಪದಗಳನ್ನು ಇಟ್ಟಿದ್ದರು. ಕಳೆದ 25 ವರ್ಷಗಳಿಂದ ಅಭಿಮಾನಿಗಳಿಗೆ ಉಪ್ಪಿಗಿಂತ ರುಚಿ ಬೇರೆ ಇಲ್ಲ ಹಾಡಿನಲ್ಲಿ ಬರುವ ಒಂದು ಸಾಲನ್ನು ಇದೂವರೆಗೂ ಅರಗಿಸಿಕೊಳ್ಳುವುದಕ್ಕೆ ಆಗಿಲ್ಲ. "ಉಪ್ಪಿಗಿಂತ ರುಚಿ ಬೇರೆ ಇಲ್ಲ.. ಬಾ ವಿ ಲವ್ ಯು ಬಾ" ಅನ್ನೋದು ಅಭಿಮಾನಿಗಳಿಗೆ "ಬಾ.. ನಿನ್ **ನ್ ಬಾ" ಅಂತಲೇ ಕೇಳಿಸುತ್ತಿತ್ತು. ಅದಕ್ಕೆ ಉಪ್ಪಿನೇ ಕ್ಲಾರಿಟಿ ಕೊಟ್ಟಿದ್ದರೂ ಅಭಿಮಾನಿಗಳು ಮಾತ್ರ " ಬಾ ವಿ ಲವ್ ಯು ಬಾ ಅನ್ನೋ ಸಿಂಕ್ ಆಗುತ್ತಿಲ್ಲ. ಅದು ನನಗೆ ಯಾವಾಗಲೂ ಬಾ ನಿನ್ **ನ್ ಬಾ ಅಂತಲೇ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಟ್ವಿಟರ್ ಡೈಲಾಗ್ ಮಯ

ಉಪೇಂದ್ರ ಸಿನಿಮಾ ನೋಡಿದ ಬಳಿಕ ಅಭಿಮಾನಿಗಳು ಆ ಡೈಲಾಗ್‌ಗಳನ್ನು ಟ್ವಿಟರ್‌ನಲ್ಲಿ ತುಂಬಿಸಿಬಿಟ್ಟಿದ್ದಾರೆ. "ಹೇ ತಗಡು.. ಜೀವನದಲ್ಲಿ ಸಂಪಾದನೆ ಮಾಡಿ ಮುಂದೆ ಬಾ.. ಇಂತಹ ಒಬ್ಬಳಲ್ಲ.. ಸಾವಿರ ಹುಡ್ಗೀರು ನಿನ್ನ ಹಿಂದೆ ಬೀಳ್ತಾರೆ" ಅಂತ ಒಬ್ಬರು ಬರೆದು ಪೋಸ್ಟ್ ಮಾಡಿದ್ದಾರೆ."

ತೆಲುಗು ಮಂದಿಯ ಮನಗೆದ್ದ 'ಉಪೇಂದ್ರ'

'ಉಪೇಂದ್ರ' ಹಾಗೂ 'ಎ' ಸಿನಿಮಾಗಳು ಗೆದ್ದಾಗ ತೆಲುಗು ಚಿತ್ರರಂಗದಲ್ಲೂ ಕ್ರೇಜ್ ಇತ್ತು. ಉಪೇಂದ್ರ ಸಿನಿಮಾ ನೋಡಿ ತೆಲುಗು ಮಂದಿನೂ ಫಿದಾ ಆಗಿದ್ದರು. ತೆಲುಗು ಅಭಿಮಾನಿಯೊಬ್ಬರು "ಉಪೇಂದ್ರ ನಿರ್ದೇಶಿಸಿದಂತಹ ಸಿನಿಮಾಗಳನ್ನು ಬಹುಶಃ ಬೇರೆ ಯಾರೂ ಮಾಡಲಾರರು.." ಎಂದಿದ್ದರೆ, ಇನ್ನೊಬ್ಬರು "ಉಪ್ಪಿ ಮಾಸ್ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಿದ್ದೀರಾ?" ಅಂತ ಕುತೂಹಲದಿಂದ ಕೇಳಿದ್ದಾರೆ."

ಎಂಡ್ ಕಾರ್ಡ್‌ನದ್ದೇ ಕ್ರೇಜ್

" ಸಿನಿಮಾ ಬಗ್ಗೆ ಒಂದೇ ಒಂದು ಪದವೂ ಇಲ್ಲ. ಈ ಸಿನಿಮಾ ನಿಜವಾಗಿಯೂ ಅದ್ಭುತವಾಗಿತ್ತು. ಇದು ಗ್ರೇಟ್ ಸಿನಿಮಾ. ಯಾವಾಗಲೂ ಗ್ರೇಟ್ ಆಗಿಯೇ ಇರುತ್ತೆ." ಎಂದು ಉಪೇಂದ್ರ ಸಿನಿಮಾ ಎಂಡ್‌ ಕಾರ್ಡ್ ಅನ್ನು ಶೇರ್ ಮಾಡಿದ್ದಾರೆ. ಇದರಲ್ಲಿ "ನೀವು ಉಪೇಂದ್ರನನ್ನು ಹಾಗೂ ನಿಮ್ಮನ್ನು ನೀವೆ ನೋಡಿಕೊಳ್ಳಬೇಕು ಅಂದರೆ, ಈ ಸಿನಿಮಾವನ್ನು ಮತ್ತೊಮ್ಮೆ ಕುಲಂಕುಶವಾಗಿ ನೋಡಿ. ಇದು 2 ಡಿ ಚಿತ್ರ ಎಂದು ಉಪೇಂದ್ರ ಬರೆದಿದ್ದರು.

More from Filmibeat

English summary
Prema Raveena Tandon Upendra Movie Re Release in Karnataka here is twitter reaction:
Read more about: upendra prema filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X