'ವೆಡ್ಡಿಂಗ್ ಗಿಫ್ಟ್' ಟ್ರೈಲರ್: ಪ್ರಸ್ತುತ ಸಾಂಸಾರಿಕ ಸ್ಥಿತಿಗತಿಯ ಅನಾವರಣ!
ಅರಿವಿರುತ್ತದೆ. ಈ ಕಾಯ್ದೆ ಇರುವುದು ಹೆಣ್ಣುಮಕ್ಕಳ ರಕ್ಷಣೆ ವಿಚಾರವಾಗಿ. ಆದರೆ ಮದುವೆಯಾಗಿ, ಸುಳ್ಳು ಸುಳ್ಳು ದೌರ್ಜನ್ಯಕ್ಕೊಳಗಾದ ಗಂಡು ಮಕ್ಕಳಿಗೆ ಇದರ ಅನುಭವ ಗಟ್ಟಿಯಾಗಿಯೇ ನೆನಪಿರುತ್ತದೆ. ಇದೇನಿದು ಈಗ್ಯಾಕೆ ಈ ಕಾಯ್ದೆ ಬಗ್ಗೆ ಮಾತಾಡ್ತಾ ಇದ್ದಾರೆ ಎಂಬ ಅನುಮಾನ ನಿಮ್ಮನ್ನು ಕಾಡಬಹುದು. ಇದಕ್ಕೆಲ್ಲಾ ಕಾರಣ 'ವೆಡ್ಡಿಂಗ್ ಗಿಫ್ಟ್' ಟ್ರೈಲರ್.
'ವೆಡ್ಡಿಂಗ್ ಗಿಫ್ಟ್' ಎಂಬ ಕ್ಯಾಚಿ ಟೈಟಲ್ ಇಟ್ಟು ಯಾವ ಉಡುಗೊರೆ ಬಗ್ಗೆ ಹೇಳಲು ಹೊರಟಿದ್ದಾರೆಂಬ ಗಾಢತೆ ಟ್ರೈಲರ್‌ನಲ್ಲಿ ಸ್ಪಷ್ಟವಾಗಿದೆ. ವಿಕ್ರಂ ಪ್ರಭು ಸ್ಯಾಂಡಲ್‌ವುಡ್ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ನಿರ್ದೆಶನದಲ್ಲಿ ಜನರ ಮನಸ್ಸನ್ನು ಗೆಲ್ಲುವ ಪರೀಕ್ಷೆಗೆ ತಮ್ಮನ್ನು ತಾವೂ ಒಡ್ಡಿಕೊಳ್ಳುತ್ತಿದ್ದಾರೆ. ಅದು ಪ್ರೂವ್ ಆಗಬೇಕಿದ್ದಿದ್ದು ಸಿನಿಮಾ ರಿಲೀಸ್ ಆದ ಮೇಲೆ. ಆದರೆ ತುಂಬಾ ಬೇಗನೆ ಒಳ್ಳೆ ನಿರ್ದೇಶಕನ ಲಿಸ್ಟ್‌ಗೆ ಸೇರುವ ಭರವಸೆ ಕಾಣುತ್ತಿದೆ. ಅದು ಟ್ರೈಲರ್‌ನಲ್ಲಿ ವ್ಯಕ್ತವಾಗಿದೆ.
'ವೆಡ್ಡಿಂಗ್ ಗಿಫ್ಟ್' ಸಿನಿಮಾದ ಟೀಂ ಸ್ವಲ್ಪ ದಿನಗಳ ಹಿಂದೆಯೇ ಟೀಸರ್ ಝಲಕ್ ಒಂದನ್ನು ತೋರಿಸಿತ್ತು. ಆ ಮೂಲಕ ಸಿನಿಮಾ ಒಳಾರ್ಥವನ್ನು ಬಯಲು ಮಾಡಿತ್ತು. ಇದೀಗ ಟ್ರೈಲರ್‌ನಲ್ಲಿ ಗಾಢವಾದ ಸಮಸ್ಯೆಯೊಂದನ್ನು ತಿಳಿಸಲು ಹೊರಟಿದೆ. ಪ್ರೀತಿ, ಮದುವೆ, ಸಾವಿರ ಕನಸುಗಳು, ಯಾವುದೋ ವೈಮನಸ್ಸು, ಪ್ರೀತಿ ಇರಬೇಕಾದ ಕಡೆ ಜಗಳ-ದ್ವೇಷ, ಕಡೆಗೆ ಹಣ ಮುಖ್ಯವಾಗುತ್ತೆ. ಗಂಡನಾದವನನ್ನು ಜೈಲಿಗಟ್ಟುವ ಗುರಿ ಮುಖ್ಯವಾಗುತ್ತದೆ. ಇದರ ನಡುವೆ ಸುಳ್ಳಿನ ಸರಮಾಲೆಗಳು, ವಕೀಲರ ಕೈಗೆ ತಮ್ಮ ಬುದ್ದಿ ಕೊಟ್ಟು, ಎದುರುಗಡೆ ಅಪರಾಧಿಯಾಗಿ ನಿಂತವನು ತನಗೇನಾಗಬೇಕು ಎಂಬುದನ್ನು ಮರೆತು ಗುರಿ ಸಾಧಿಸುವುದು.

ಹೆಣ್ಣು ಹೇಳಿದ ಆ ಒಂದು ಮಾತೇ ಮೀಡಿಯಾಗೆ ವೇದವಾಕ್ಯ. ಗಂಡು ಎಂಬ ಪ್ರಾಣಿ ತಪ್ಪು ಮಾಡದೆ ಇದ್ದರೂ ಬಲಿಯಾಗುತ್ತೆ. ಒಂದು ಕ್ಷಣ ಟ್ರೈಲರ್ ಮಂತ್ರಮಗ್ಧವಾಗುವಂತೆ ಮಾಡಿಬಿಡುತ್ತದೆ. ಹಲವು ಹುಳುಕುಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಇದು 'ವೆಡ್ಡಿಂಗ್ ಗಿಫ್ಟ್'ನ ಜಸ್ಟ್ ಟ್ರೈಲರ್ ಅಷ್ಟೇ. ಪಿಕ್ಚರ್ ಜುಲೈ 8ಕ್ಕೆ ತೆರೆಗೆ ಬರಲಿದೆ.

ಗಾಂಧಿನಗರದ ಹಲವು ಪ್ರತಿಭಾವಂತ ನಿರ್ದೇಶಕರ ಬಳಿ ಪಳಗಿರುವ ವಿಕ್ರಂ ಪ್ರಭು ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸೋನುಗೌಡ ನಾಯಕಿಯಾಗಿ, ನಿಶಾನ್ ನಾಯಕನಾಗಿ ನಟಿಸಿದರೆ, ಪ್ರೇಮಾ ಲಾಯರ್ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಅಚ್ಯುತ್ ಕುಮಾರ್ ಸುಳ್ಳಿನ ಪರ ವಾದ ಮಂಡಿಸುವ ವಕೀಲರಾಗಿದ್ದಾರೆ.


Click it and Unblock the Notifications











