Padma Awards 2025: ರಾಷ್ಟ್ರಪತಿ ದ್ರೌಪತಿ ಮುರ್ಮು ಕೈಯಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿದ ಬಾಲಕೃಷ್ಣ, ಅಜಿತ್

ಭಾರತ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮ ಪ್ರಶಸ್ತಿ 2025 ಅನ್ನು ಇಂದು (ಏಪ್ರಿಲ್ 28) ಪ್ರದಾನ ಮಾಡಲಾಯಿತು. ಕಲೆ, ಶಿಕ್ಷಣ, ಸಮಾಜ ಸೇವೆ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಪ್ರಶಸ್ತಿಯನ್ನು ಗೆದ್ದ ಗಣ್ಯರನ್ನು ದೆಹಲಿಗೆ ಕರೆಸಿ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಗಣ್ಯರಿಗೆ 2025ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಈ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ಸಚಿವರು ಭಾಗವಹಿಸಿದ್ದರು. ಜನವರಿಯಲ್ಲಿ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಇಂದು ಆ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ನೀಡಿ ಗೌರವಿಸಲಾಗಿದೆ. ಈ ವೇಳೆ ಚಿತ್ರರಂಗ ಹಾಗೂ ಕ್ರೀಡಾ ಲೋಕ ಸೇರಿದಂತೆ ಪ್ರಶಸ್ತಿ ವಿಜೇತ ಗಣ್ಯರು ಗಮನ ಸೆಳೆದರು.

President Murmu presents Padma Awards 2025 to Ajith Kumar Balakrishna

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್, ತೆಲುಗಿನ ದಿಗ್ಗಜ ಬಾಲಕೃಷ್ಣ, ಕ್ರೀಡಾ ಕ್ಷೇತ್ರದಿಂದ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಜಿತ್ ಕುಮಾರ್ ಕಪ್ಪು ಬಣ್ಣದ ಸೂಟ್ ಧರಿಸಿ ರಾಷ್ಟ್ರಪತಿಯವರಿಂದ ಪ್ರಶಸ್ತಿಯನ್ನು ಪಡೆದರೆ, ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಸಂಪ್ರದಾಯಿಕ ಉಡುಗೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ದಶಕಗಳಿಂದ ಸಾಧನೆ ಹಾಗೂ ಸೇವೆಯನ್ನು ಮಾಡಿದವರಿಗೆ ಈ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತವೆ. ತಮಿಳು ನಟ ಅಜಿತ್ ಕುಮಾರ್, ತೆಲುಗು ನಟ ಬಾಲಕೃಷ್ಣ ಜೊತೆಗೆ ಸಿನಿಮಾದಲ್ಲಿದಲ್ಲಿ ಶೇಖರ್ ಕಪೂರ್, ಶೋಭನಾ ಅವರಿಗೂ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೇ ಬಾಲಿವುಡ್‌ ಗಜಲ್ ಗಾಯಕ ದಿವಂಗತ ಪಂಕಜ್ ಉದಾಸ್ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಈ ಪ್ರಶಸ್ತಿಯನ್ನು ಅವರ ಪತ್ನಿ ರಾಷ್ಟ್ರಪತಿಗಳಿಂದ ಸ್ವೀಕರಿಸಿದ್ದಾರೆ.

ಪದ್ಮಭೂಷಣದ ಜೊತೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಗಾಯಕ ಅರಿಜಿತ್ ಸಿಂಗ್, ಹಾಗೂ ರಿಕ್ಕಿ ಕೇಜ್ ಸ್ವೀಕರಿಸಿದ್ದಾರೆ. ಕೇವಲ ಕಲೆಯಷ್ಟೇ ಅಲ್ಲದೆ, ಕ್ರೀಡೆ, ವೈದ್ಯಕೀಯ, ಉದ್ಯಮ, ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರದ ಗಣ್ಯರನ್ನು ಈ ಪ್ರಶಸ್ತಿ ಸಮಾರಂಭದಲ್ಲಿ ಗೌರವಿಸಲಾಗಿದೆ. ಜನವರಿಯಲ್ಲಿ 139 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಇಂದು (ಏಪ್ರಿಲ್ 28) ಮೊದಲೇ ಹಂತದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಇದರಲ್ಲಿ 71 ಮಂದಿಗೆ ಪ್ರಶಸ್ತಿಯನ್ನು ಗೌರವಿಸಲಾಗಿದೆ. ಉಳಿದ ಸಾಧಕರಿಗೆ ಎರಡನೇ ಹಂತದ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತೆ.

ಮೊದಲ ಹಂತದಲ್ಲಿ ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.

ಪದ್ಮಭೂಷಣ ಪ್ರಶಸ್ತಿ

ಡಾ. ಎಲ್. ಸುಬ್ರಮಣಿಯಂ - ಕರ್ನಾಟಕ- ಆರ್ಟ್
ಎಂ. ಟಿ. ವಾಸುದೇವನ್ ನಾಯರ್ (ಮರಣೋತ್ತರ) - ಕೇರಳ - ಸಾಹಿತ್ಯ & ಸಿನಿಮಾ
ನಂದಮೂರಿ ಬಾಲಕೃಷ್ಣ - ಆಂಧ್ರ ಪ್ರದೇಶ - ಸಿನಿಮಾ
ಅಜಿತ್ ಕುಮಾರ್ - ತಮಿಳುನಾಡು- ಸಿನಿಮಾ
ಶೇಖರ್ ಕಪೂರ್ - ಮಹಾರಾಷ್ಟ್ರ- ಸಿನಿಮಾ
ಒಸಾಮು ಸುಜುಕಿ (ಮರಣೋತ್ತರ) - ಜಪಾನ್ - ಉದ್ಯಮ & ಕೈಗಾರಿಕೆ
ಡಾ. ಡಿ. ನಾಗೇಶ್ವರ ರೆಡ್ಡಿ- ತೆಲಂಗಾಣ - ವೈದ್ಯಕೀಯ
ಪಂಕಜ್ ಆರ್. ಪಟೇಲ್ - ಗುಜರಾತ್- ಉದ್ಯಮ & ಕೈಗಾರಿಕೆ
ಡಾ. ಎ. ಎ. ಸೂರ್ಯ ಪ್ರಕಾಶ್ - ಕರ್ನಾಟಕ- ಸಾಹಿತ್ಯ & ಶಿಕ್ಷಣ
ವಿನೋದ್ ಕುಮಾರ್ ಧಾಮ್ - ಅಮೆರಿಕ - ವಿಜ್ಞಾನ & ಎಂಜಿನಿಯರಿಂಗ್
ಡಾ. ಜೋಸ್ ಚಾಕೊ ಪೆರಿಯಪ್ಪುರಂ - ಕೇರಳ - ಮೆಡಿಸಿನ್
ಶ್ರೀಜೇಶ್ ಪಿ.ಆರ್ - ಕೇರಳ- ಕ್ರೀಡೆ
ಸುಶೀಲ್ ಕುಮಾರ್ ಮೋದಿ (ಮರಣೋತ್ತರ) - ಬಿಹಾರ - ಸಾರ್ವಜನಿಕ ವ್ಯವಹಾರಗಳು
ಪಂಕಜ್ ಕೇಶುಭಾಯಿ ಉದಾಸ್ (ಮರಣೋತ್ತರ) - ಮಹಾರಾಷ್ಟ್ರ- ಸಂಗೀತ

ಪದ್ಮಶ್ರೀ ಪ್ರಶಸ್ತಿ

ಹಾಸನ ರಘು -ಕರ್ನಾಟಕ
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ -ಕರ್ನಾಟಕ
ಗೋಕುಲ್ ಚಂದ್ರ ದಾಸ್ -ಪಶ್ಚಿಮ ಬಂಗಾಳ
ನಿರ್ಮಲಾ ದೇವಿ -ಬಿಹಾರ
ಅದ್ವೈತ ಚರಣ್ ಗಡನಾಯಕ್-ಒಡಿಶಾ
ಪ್ರೊ. ಭರತ್ ಗುಪ್ತ್-ದೆಹಲಿ
ನರೇನ್ ಗುರುಂಗ್ -ಸಿಕ್ಕಿಂ
ಡಾ. ಶ್ಯಾಮ್ ಬಿಹಾರಿ ಅಗರವಾಲ್ -ಉತ್ತರ ಪ್ರದೇಶ
ಡಾ. ಕೆ. ಓಮನಕುಟ್ಟಿ ಅಮ್ಮ-ಕೇರಳ
ಮಿರಿಯಾಲ ಅಪ್ಪರಾವ್ (ಮರಣೋತ್ತರ) -ಆಂಧ್ರ ಪ್ರದೇಶ
ಜೋಯ್ನಾಚರಣ್ ಬತಾರಿ -ಅಸ್ಸಾಂ
ಬೇಗಂ ಬಟೂಲ್ -ರಾಜಸ್ಥಾನ
ಭೇರು ಸಿಂಗ್ ಚೌಹಾಣ್ -ಮಧ್ಯಪ್ರದೇಶ
ವಾಸುದೇವ ತಾರಾನಾಥ್ ಕಾಮತ್-ಮಹಾರಾಷ್ಟ್ರ
ಡಾ. ಜಸ್ಪಿಂದರ್ ನರುಲಾ ಕೌಲ್ -ಮಹಾರಾಷ್ಟ್ರ
ಪಂ. ರೋನು ಮಜುಂದಾರ್ -ಮಹಾರಾಷ್ಟ್ರ
ಪಂ. ತೇಜೇಂದ್ರ ನಾರಾಯಣ ಮಜುಂದಾರ್-ಪಶ್ಚಿಮ ಬಂಗಾಳ
ಡಾ. ಮಡುಗುಲ ನಾಗಫಣಿ ಶರ್ಮ -ಆಂಧ್ರ ಪ್ರದೇಶ
ದುರ್ಗಾ ಚರಣ್ ರಣಬೀರ್ -ಒಡಿಶಾ
ಅರಿಜಿತ್ ಸಿಂಗ್ -ಪಶ್ಚಿಮ ಬಂಗಾಳ
ಭಾಯಿ ಹರ್ಜಿಂದರ್ ಸಿಂಗ್ ಜಿ -ಪಂಜಾಬ್
ರಾಧಾಕೃಷ್ಣನ್ ದೇವಸೇನಾಪತಿ ಸ್ಥಪತಿ -ತಮಿಳುನಾಡು
ಪ್ರೊ. ರತನ್ ಕುಮಾರ್ ಪರಿಮೂ -ಗುಜರಾತ್
ಡಾ. ಲಕ್ಷ್ಮೀಪತಿ ರಾಮಸುಬ್ಬಯ್ಯರ್ -ತಮಿಳುನಾಡು
ಪ್ರೊ. ಅರುಣೋದಯ ಸಹಾ -ತ್ರಿಪುರ
ಡಾ. ಪ್ರತಿವಾ ಸತ್ಪತಿ -ಒಡಿಶಾ
ಪ್ರೊ. (ಡಾ.) ಚಂದ್ರಕಾಂತ್ ತ್ರಿಕಮಲಾಲ್ ಶೇಟ್ (ಮರಣೋತ್ತರ) -ಗುಜರಾತ್
ತುಷಾರ್ ದುರ್ಗೇಶಭಾಯ್ ಶುಕ್ಲಾ-ಗುಜರಾತ್
ಪ್ರೊ. ಡೇವಿಡ್ ಆರ್. ಸಿಯೆಮ್ಲೀಹ್-ಮೇಘಾಲಯ
ಪ್ರೊ. ಅನಿಲ್ ಕುಮಾರ್ ಬೊರೊ-ಅಸ್ಸಾಂ
ಮಾರುತಿ ಭುಜಂಗರಾವ್ ಚಿಟಂಪಲ್ಲಿ -ಮಹಾರಾಷ್ಟ್ರ
ಹೃದಯ ನಾರಾಯಣ ದೀಕ್ಷಿತ್ -ಉತ್ತರ ಪ್ರದೇಶ
ಗಣೇಶ್ವರ ಶಾಸ್ತ್ರಿ ದ್ರಾವಿಡ್ -ಉತ್ತರ ಪ್ರದೇಶ
ಸ್ಟೀಫನ್ ನ್ಯಾಪ್ -ಅಮೆರಿಕ
ಶೀನ್ ಕಾಫ್ ನಿಜಾಮ್ -ರಾಜಸ್ಥಾನ
ಪ್ರೊ. ನಿತಿನ್ ನೊಹ್ರಿಯಾ - ಅಮೆರಿಕ
ಅರುಂಧತಿ ಭಟ್ಟಾಚಾರ್ಯ, ಆರ್.ಜಿ. ಚಂದ್ರಮೊಗನ್, ಪವನ್ ಗೋಯೆಂಕಾ -ವ್ಯಾಪಾರ & ಕೈಗಾರಿಕೆ
ರವಿಚಂದ್ರನ್ ಅಶ್ವಿನ್ (ಕ್ರಿಕೆಟ್), ಡಾ.ಸತ್ಯಪಾಲ್ ಸಿಂಗ್ (ಪ್ಯಾರಾ ಅಥ್ಲೆಟಿಕ್ ಕೋಚ್) -ಕ್ರೀಡೆ
ಲಿಬಿಯಾ ಲೋಬೋ ಸರ್ದೇಸಾಯಿ, ವಿನಾಯಕ್ ಲೋಹಾನಿ -ಸೋಶಿಯಲ್ ವರ್ಕ್
ಸಿ.ಎಸ್.ವೈದ್ಯನಾಥನ್-ಸಾರ್ವಜನಿಕ ವ್ಯವಹಾರ
ಡಾ.ವಿಜಯಲಕ್ಷ್ಮಿ ದೇಶಮಾನೆ, ಡಾ.ಎ.ಕೆ.ಮಹಾಪಾತ್ರ - ಮೆಡಿಸಿನ್
ಡಾ. ಕೆ. ದಾಮೋದರನ್, ಶೈಖಾ ಅಲಿ ಜಬರ್ ಅಲ್-ಸಬಾ- ಇತರೆ

2025ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಯನ್ನು ಅನಂತ್‌ನಾಗ್ ಅವರಿಗೂ ಘೋಷಣೆ ಮಾಡಲಾಗಿದೆ. ಆದರೆ, ಮೊದಲನೇ ಹಂತದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅನಂತ್‌ನಾಗ್ ಕಾಣಿಸಿಕೊಂಡಿಲ್ಲ. ಎರಡನೇ ಹಂತದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅನಂತ್‌ನಾಗ್ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಸುಮಾರು ಐದು ದಶಕಗಳಿಗೂ ಅಧಿಕ ಕಾಲ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಕನ್ನಡದ ಹಿರಿಯ ನಟನಿಗೆ ಪದ್ಮಭೂಷಣ ಘೋಷಣೆಯಾಗಿತ್ತು. ಈ ಪ್ರಶಸ್ತಿಯನ್ನು ಅನಂತ್‌ನಾಗ್ ಕನ್ನಡಿಗರು ಅರ್ಪಿಸಿದ್ದರು.

ಅನಂತ್‌ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಗಬೇಕು ಎಂದು ಕನ್ನಡಿಗರು ಹಾಗೂ ಕನ್ನಡ ಚಿತ್ರರಂಗ ತಾರೆಯರು ಅಭಿಯಾನವನ್ನು ಆರಂಭಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ನಿರಂತರವಾಗಿ ಅಭಿಯಾನವನ್ನು ಮಾಡಿದ್ದರು. ಆದರೆ, ಅನಂತ್‌ನಾಗ್ ಅವರ ಮನವಿಯ ಮೇರೆಗೆ ಪದ್ಮ ಪ್ರಶಸ್ತಿಯ ಅಭಿಯಾನವನ್ನು ಕೈ ಬಿಟ್ಟಿದ್ದರು. ಕೊನೆಗೂ ಕೇಂದ್ರ ಸರ್ಕಾರ ಅನಂತ್‌ನಾಗ್ ಅವರ ಸಾಧನೆ ಹಾಗೂ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದರು. ಎರಡನೇ ಹಂತದ ಪ್ರಶಸ್ತಿ ಸಮಾರಂಭದಲ್ಲಿ ಇತರ ವಿಜೇತರೊಂದಿಗೆ ಅನಂತ್‌ನಾಗ್ ಕೂಡ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಮೊದಲನೇ ಹಂತದ ಪ್ರಶಸ್ತಿ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದ ತಾರೆಯರು ಪ್ರಮುಖ ಆಕರ್ಷಣೆಯಾಗಿದ್ದರು. ತಮಿಳುನಾಡಿನ ಸ್ಟಾರ್ ನಟ ಅಜಿತ್ ಕುಮಾರ್, ಬಾಲಕೃಷ್ಣ ಪ್ರಶಸ್ತಿ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು.

More from Filmibeat

English summary
President Murmu presents Padma Awards 2025 to Ajith Kumar, Balakrishna.
Read more about: padmabhushan actor anant nag
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X