ಶಿವಣ್ಣ-ಧನಂಜಯ್ ಸಿನಿಮಾಗೆ 'ಸರಿಪೋದ ಶನಿವಾರಂ' ನಟಿ; '666 ಆಪರೇಷನ್ ಡ್ರೀಮ್ ಥಿಯೇಟರ್'ಗೆ ಎಂಟ್ರಿ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಕಾಂಬಿನೇಷನ್‌ನಲ್ಲಿ ಚಿತ್ರೀಕರಣ ನಡೆಯುತ್ತಿರುವ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್'. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಿರ್ದೇಶಕ ಹೇಮಂತ್ ಎಂ ರಾವ್ ಇದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಆದರೆ, ಸಿನಿಮಾದ ನಾಯಕಿ ಬಗ್ಗೆ ಸುಳಿವನ್ನು ಬಿಟ್ಟು ಕೊಟ್ಟಿರಲಿಲ್ಲ. ಅದೀಗ ರಿವೀಲ್ ಆಗಿದೆ.
ಕೆಲವು ದಿನಗಳ ಹಿಂದಷ್ಟೇ '666 ಆಪರೇಷನ್ ಡ್ರೀಮ್ ಥಿಯೇಟರ್' ನಾಯಕಿಯ ಹೆಸರನ್ನು ರಿವೀಲ್ ಮಾಡುವುದಾಗಿ ಟ್ವಿಸ್ಟ್ ಕೊಟ್ಟಿತ್ತು. ಅದಕ್ಕೀಗ ಚಿತ್ರತಂಡ ತೆರೆ ಎಳೆದಿದೆ. ಇಲ್ಲಿವರೆಗೂ ಶಿವಣ್ಣ ಹಾಗೂ ಡಾಲಿ ಧನಂಜಯ್ ಲುಕ್, ಮ್ಯಾನರಿಸಂನ ಝಲಕ್ ಅಷ್ಟೇ ರಿವೀಲ್ ಮಾಡಲಾಗಿತ್ತು. ಈಗ ನಾಯಕಿ ಯಾರು? ಅನ್ನೋ ಗುಟ್ಟನ್ನು ಚಿತ್ರತಂಡ ಬಿಟ್ಟು ಕೊಟ್ಟಿದೆ.

'666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾಗೆ ಫಿಮೇಲ್ ಲೀಡ್ ಆಗಿ ಆಯ್ಕೆಯಾಗಿರೋದು ಪ್ರಿಯಾಂಕಾ ಮೋಹನ್. ಈಗಾಗಲೇ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಈಗ ಶಿವಣ್ಣ-ಡಾಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ತನ್ನ ಮೊದಲ ಸಿನಿಮಾದ ಬಗ್ಗೆ ಪ್ರಿಯಾಂಕಾ ಮೋಹನ್ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಪ್ರಿಯಾಂಕಾ ಮೋಹನ್ ಕರ್ನಾಟಕದ ಹುಡುಗಿಯೇ. ಶಿಕ್ಷಣವನ್ನೆಲ್ಲ ಮುಗಿಸಿದ್ದು ಇಲ್ಲಿಯೇ. ಅತ್ಯಂತ ಸ್ಪಷ್ಟವಾಗಿ ಕನ್ನಡ ಮಾತಾಡಬಲ್ಲರು. ಇತ್ತೀಚೆಗೆ ಕರ್ನಾಟಕ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಅದರ ವೇದಿಕೆ ಮೇಲೆ ಸ್ಪಷ್ಟವಾಗಿ ಕನ್ನಡದಲ್ಲಿ ಮಾತಾಡಿ ಕನ್ನಡಿಗರ ಮನಗೆದ್ದಿದ್ದರು. ಅದೇ ನಟಿಯೀಗ '666 ಆಪರೇಷನ್ ಡ್ರೀಮ್ ಥಿಯೇಟರ್' ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.
ಈಗಾಗಲೇ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್, ನಾನಿ, ಧನುಷ್ ಹಾಗೂ ಶಿವಕಾರ್ತಿಕೇಯನ್ ಅಂತಹ ದಿಗ್ಗಜರ ಸಿನಿಮಾದಲ್ಲಿ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ನಟಿಸಿದ್ದಾರೆ. ಈ ಹೇಮಂತ್ ಎಂ ರಾವ್ ನಿರ್ದೇಶನದ 80ರ ದಶಕದ ಡಾ.ರಾಜ್‌ಕುಮಾರ್ ನಟಿಸಿದ ಬಾಂಡ್-ಸ್ಪೈಲ್‌ನ ಕಥೆಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಗ್ಗೆ ಪ್ರಿಯಾಂಕಾ ಸಿಕ್ಕಾಪಟ್ಟೆ ಖುಷಿಯಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

"ನಾನು ಡಾ.ಶಿವರಾಜ್ ಕುಮಾರ್ ಸರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಭಾಗವಾಗಿರುವುದು ನನ್ನ ಕನಸನ್ನು ನನಸು ಮಾಡಿದೆ. ಹಾಗೇ ಪ್ರತಿಭಾನ್ವಿತ ನಟ ಧನಂಜಯ ಜೊತೆ ಕೆಲಸ ಮಾಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ. ಹೇಮಂತ್ ಎಂ ರಾವ್ ಅವರೊಂದಿಗೆ ಕೆಲಸ ಮಾಡುವ ಆಸೆಯನ್ನು ನಾನು ವ್ಯಕ್ತಪಡಿಸಿದ್ದೆ. ಆದರೆ, ಅದು ಇಷ್ಟು ಬೇಗ ಈಡೇರುತ್ತದೆಯಂದು ನಾನು ಭಾವಿಸಿರಲಿಲ್ಲ" ಎಂದು ಪ್ರಿಯಾಂಕಾ ಮೋಹನ್ ಹೇಳಿದ್ದಾರೆ.
ಪ್ರಿಯಾಂಕಾ ಮೋಹನ್ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾಗೂ ಮುನ್ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನ 'ಗ್ಯಾಂಗ್ ಲೀಡರ್', 'ಸರಿಪೋದ ಶನಿವಾರಂ', ತಮಿಳಿನ 'ಡಾಕ್ಟರ್', 'ಟಿಕ್ ಟಾಕ್', 'ಕ್ಯಾಪ್ಟನ್ ಮಿಲ್ಲರ್', 'ಬ್ರದರ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ. ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಡಾ.ವೈಶಾಕ್ ಜೆ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಎರಡು ಹಂತದ ಶೂಟಿಂಗ್ ಮುಗಿದಿದ್ದು, ಡಿಸೆಂಬರ್ ಮೊದಲ ವಾರದಿಂದ ಮೂರನೇ ಹಂತದ ಶೂಟಿಂಗ್ ಆರಂಭ ಆಗುತ್ತಿದೆ.


Click it and Unblock the Notifications











