'ಮಲ್ಲ' ಹಾಡಿನಲ್ಲಿ ಪ್ರಿಯಾಂಕಾ ಉಪೇಂದ್ರ ಎಕ್ಸ್‌ಪೋಸ್ ಮಾಡಿದ್ರಾ? "ಬಾಂಗಡಿ ಮೀನು" ಸಾಂಗ್‌ಗೆ ಕತ್ರಿ ಹಾಕಿದ್ರಾ?
Priyanka Upendra:ರವಿಚಂದ್ರನ್ ಹಾಗೂ ಪ್ರಿಯಾಂಕಾ ಉಪೇಂದ್ರ ನಟಿಸಿದ್ದ 'ಮಲ್ಲ' ಇಂದಿಗೂ ಚರ್ಚೆಯಲ್ಲಿರುವ ಸೂಪರ್ ಹಿಟ್ ಸಿನಿಮಾ. ಸೋಲುಗಳಿಂದ ಕಂಗೆಟ್ಟಿದ್ದ ಕ್ರೇಜಿಸ್ಟಾರ್‌ಗೆ ಈ ಸಿನಿಮಾ ಮರುಜೀವ ಕೊಟ್ಟಿತ್ತು. ಹಾಗೇ ಈ ಸಿನಿಮಾದ ಹಾಡುಗಳು ಕೂಡ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಪ್ರಿಯಾಂಕಾ ಉಪೇಂದ್ರ ಅವರನ್ನು ಗ್ಲಾಮರಸ್ ಆಗಿ ತೋರಿಸಿದ್ದಕ್ಕೆ ಉಪೇಂದ್ರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಚಿತ್ರರಂಗದಲ್ಲಿಯೂ ಮಲ್ಲ ಹಾಡುಗಳ ಸುತ್ತ ಕೆಲವು ಸುದ್ದಿಗಳು ಕೂಡ ಹಬ್ಬಿದ್ದವು. ಪ್ರಿಯಾಂಕಾ ಸಾಂಗ್‌ನಲ್ಲಿ ಬೋಲ್ಡ್ ಆಗಿ ನಟಿಸಿದ್ದು ಉಪೇಂದ್ರಗೆ ಇಷ್ಟವಿರಲಿಲ್ಲ. ಹೀಗಾಗಿ ಈ ಸಿನಿಮಾಗಾಗಿಯೇ ಕಂಪೋಸ್ ಮಾಡಿದ್ದ "ಬಾಂಗಡಿ ಮೀನು ಬಳುಕಿದಾಗ" ಅನ್ನುವ ಹಾಡನ್ನು ತೆಗೆದು ಹಾಕುವಂತೆ ಕೇಳಿಕೊಂಡಿದ್ದರು. ಆ ಕಾರಣಕ್ಕೆ ಅದೇ ಹಾಡನ್ನು ಬೇರೊಂದು ಸಿನಿಮಾಗೆ ಬಳಸಿಕೊಳ್ಳಲಾಗಿದೆ ಎಂಬ ಸುದ್ದಿ ಹಬ್ಬಿತ್ತು.

ಅಂದ ಹಾಗೆ "ಬಾಂಗಡಿ ಮೀನು ಬಳುಕಿದಾಗ.." ಹಾಡನ್ನು ಕ್ರೇಜಿ ಸ್ಟಾರ್ 'ಪಾಂಡು ರಂಗ ವಿಠಲ' ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ಈ ಹಾಡಿನಲ್ಲಿ ರವಿಚಂದ್ರನ್ ಜೊತೆ ರಂಭಾ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಆದರೆ, ಅಂದು ಹರಿದಾಡಿದ್ದ ಈ ಹಾಡಿನ ವಿವಾದದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಪ್ರಿಯಾಂಕಾ ಉಪೇಂದ್ರ ಓಪನ್ ಆಗಿ ಮಾತಾಡಿದ್ದಾರೆ. ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ.
'ಮಲ್ಲ' ಸಿನಿಮಾ ಶೂಟಿಂಗ್ ಮಾಡುವಾಗಲೇ ಉಪೇಂದ್ರ ಹಾಗೂ ಪ್ರಿಯಾಂಕಾ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಕನ್ನಡದ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ಪ್ರಿಯಾಂಕಾ ಗೆ ಕ್ರೇಜಿಸ್ಟಾರ್ 'ಮಲ್ಲ' ಸಿನಿಮಾದಲ್ಲಿ ನಟಿಸಲು ಆಫರ್ ಕೊಟ್ಟಿದ್ದರು. ಈ ಸಿನಿಮಾ ಮುಗಿಸಿ ಅದು ರಿಲೀಸ್ ಆಗುವ ಗ್ಯಾಪ್‌ನಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಮದುವೆ ನಡೆದು ಹೋಗಿತ್ತು. ಆದರೆ, ಪ್ರಿಯಾಂಕಾ ಅವರಿಗೆ ಮದುವೆ ಬಳಿಕೆ ಈ ಸಿನಿಮಾ ರಿಲೀಸ್ ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. 'ಮಲ್ಲ' ಬಿಡುಗಡೆಯಾಗುತ್ತಿದ್ದಂತೆ ವಿವಾದಕ್ಕೆ ಗುರಿಯಾಗಬೇಕಾಗಿ ಬಂದಿತ್ತು.

"ತುಂಬಾ ಕಡೆ ವಿವಾದ ಆಗಿತ್ತು. ಕೆಲವು ಕಡೆ ಡ್ರೆಸ್ ಬಗ್ಗೆ ಬರೆದಿದ್ದರು. ಅದೆಲ್ಲ ಏನೂ ಮ್ಯಾಟರ್ ಅಲ್ಲ. ಯಾಕಂದ್ರೆ ಸಮಯ ಎಲ್ಲವನ್ನೂ ಸಾಬೀತು ಮಾಡುತ್ತೆ. ನನ್ನ ಜೀವನದಲ್ಲಿ ಏನನ್ನು ಆಯ್ಕೆ ಮಾಡುತ್ತೇನೋ ಅದಕ್ಕೆ ನಾನು ಬದ್ಧವಾಗಿದ್ದೇನೆ. ಯಾರೋ ಫೋರ್ಸ್ ಮಾಡಿ ಹೀಗೆ ಮಾಡಿಸಿದ್ದಾರೆ ಅಂತ ಹೇಳಿದ್ದರು. ಹಾಗಂತ ನಾನೇನು ಬಲಿಪಶು ಆಗಿರಲಿಲ್ಲ. ನನಗೆ ಏನು ತಪ್ಪು ಅನಿಸಿದೆಯೋ ಅದನ್ನು ನಾನು ಮಾಡಿಲ್ಲ. ಯಾವುದು ಸರಿ ಅನಿಸಿದೆಯೋ ಅದನ್ನು ಮಾಡಿದ್ದೇನೆ" ಎಂದು ಫಿಲ್ಮಿಬೀಟ್ ಕನ್ನಡಕ್ಕೆ ಉಪೇಂದ್ರ ಹೇಳಿದ್ದಾರೆ.
ಇನ್ನು ಪ್ರಿಯಾಂಕಾ ಉಪೇಂದ್ರ "ಬಾಂಗಡಿ ಮೀನು.." ಹಾಡಿನಲ್ಲಿ ಸಿಕ್ಕಾಪಟ್ಟೆ ಎಕ್ಸ್‌ಪೋಸ್ ಮಾಡಿದ್ದಾರೆ. ಆ ಕಾರಣಕ್ಕೆ ತೆಗೆದು ಹಾಕಿದ್ದರು ಎನ್ನುವುದಕ್ಕೂ ಪ್ರತಿಕ್ರಿಯಿಸಿದ್ದಾರೆ. "ಮಲ್ಲ ಹಾಡು ಬಂದಾಗ ದೊಡ್ಡದಾಗಿ ಏನೋ ಸುದ್ದಿಯಾಗಿತ್ತು. ಆ ಪಾತ್ರ ಗ್ಲಾಮರಸ್ ಆಗಿತ್ತು. ಅದಕ್ಕೆ ನಾನು ಹಾಗೆ ನಟಿಸಿದೆ. ಎಲ್ಲಾ ಹಾಡುಗಳು ಇತ್ತಲ್ಲ. ನನ್ನ ಜೊತೆ ಶೂಟ್ ಮಾಡಿದ ಎಲ್ಲ ಹಾಡುಗಳು ಇತ್ತು. ಯಾವ ಸಾಂಗ್ ಅನ್ನೂ ಸಿನಿಮಾದಿಂದ ತೆಗೆದು ಹಾಕಿರಲಿಲ್ಲ. ಅವರು ಯಾಕೆ ಹಾಗೆ ಮಾಡುತ್ತಾರೆ."
ಇದೇ ಸಂದರ್ಶನದಲ್ಲಿ ಮದುವೆ ಬಳಿಕ 'ಮಲ್ಲ' ಸಿನಿಮಾ ಬಿಡುಗಡೆಯಾಗಿದ್ದರಿಂದ ಇಷ್ಟೆಲ್ಲ ವಿವಾದ ಆಗಿರಬಹುದೆಂದು ಹೇಳಿದ್ದಾರೆ. "ಬಹುಶ: ಮದುವೆ ಆದ್ಮೇಲೆ ಆ ಸಿನಿಮಾ ರಿಲೀಸ್ ಆಗಿತ್ತು. ಅದಕ್ಕೆ ಹಾಗೆ ಅನಿಸಿತೋ ಏನೋ ಗೊತ್ತಿಲ್ಲ. ನನಗೆ ಏನು ಸರಿ ಅನಿಸಿತ್ತೋ ಅದನ್ನು ನಾನು ಮಾಡಿದ್ದೇನೆ ಅಷ್ಟೇ. ನನಗೆ ಬಯೋಪಿಕ್ ಸಿನಿಮಾ ಮಾಡಬೇಕು ಅಂತ ಆಸೆಯಿದೆ. ಆದರೆ ಯಾವುದೂ ಇನ್ನೂ ನಿರ್ಧಾರ ಆಗಿಲ್ಲ. ಒಂದಿಷ್ಟು ಆಫರ್‌ಗಳು ಬಂದಿವೆ. ಮುಂದೆ ನೋಡೋಣ." ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.


Click it and Unblock the Notifications










