ಅಮೆರಿಕದ ಯುನಿವರ್ಸಿಟಿಯಿಂದ ಪಿಆರ್‌ಓ ವೆಂಕಟೇಶ್‌ಗೆ ಗೌರವ ಡಾಕ್ಟರೇಟ್‍; ಮಂತ್ರಾಲಯದಲ್ಲಿ ಪ್ರಶಸ್ತಿ ಪ್ರದಾನ

ಕನ್ನಡ ಚಿತ್ರರಂಗದ ಜನಪ್ರಿಯ ಪಿಆರ್‌ಓ ಸುಧೀಂದ್ರ ವೆಂಕಟೇಶ್‍. ಇವರು ಹಲವು ವರ್ಷಗಳಿಂದ ಕನ್ನಡ ಸಿನಿಮಾಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಘವೇಂದ್ರ ಚಿತ್ರವಾಣಿಯಿಂದ ಸಾವಿರಾರು ಸಿನಿಮಾಗಳ ಪ್ರಚಾರವನ್ನು ಮಾಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕನ್ನಡ ಚಿತ್ರರಂಗದ ಪ್ರಥಮ ಪಿಆರ್‌ಓ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರ ಹಾದಿಯಲ್ಲಿ ಸುಧೀಂದ್ರ ವೆಂಕಟೇಶ್ ನಡೆಯುತ್ತಿದ್ದಾರೆ. ಡಿ.ವಿ.ಸುಧೀಂದ್ರ ಅವರು ಸ್ಥಾಪಿಸಿದ್ದ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಕಳೆದ 50 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು ಮಾಡಿದೆ. ಈ ಮೂಲಕ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಾಗಿ ನಿಂತು ಕಾರ್ಯನಿರ್ವಹಿಸುತ್ತಿದೆ.

PRO Sudheendra Venkatesh has been awarded Honorary Doctorate from USA based Yoga-Samskrutham University

ಕನ್ನಡ ಚಿತ್ರರಂಗದಲ್ಲಿ ಕಳೆದ ಐದು ದಶಕಗಳಿಂದ ಶ್ರೀ ರಾಘವೇಂದ್ರ ಚಿತ್ರವಾಣಿಯ ಮೂಲಕ ಸುಧೀಂದ್ರ ವೆಂಕಟೇಶ್ ಕೆಲಸ ಮಾಡುತ್ತಾ ಬಂದಿದ್ದಾರೆ. ಇನ್ನೂ ಈ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಧೀಂದ್ರ ವೆಂಕಟೇಶ್ ಅವರ ಮುಂದಾಳತ್ವದಲ್ಲಿ ಈ ಸಂಸ್ಥೆ ಹೆಜ್ಜೆ ಹಾಕುತ್ತಿದೆ. ಇಲ್ಲಿವರೆಗೂ ಮಾಡಿರುವ ಈ ಸಾಧನೆಯನ್ನು ಪರಿಗಣಿಸಿ, ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ.

ಸುಧೀಂದ್ರ ವೆಂಕಟೇಶ್ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅಮೆರಿಕಾದ ಫ್ಲೋರಿಡಾದಲ್ಲಿರುವ ಯೋಗ -ಸಂಸ್ಕೃತಂ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‍ ನೀಡಿ ಗೌರವಿಸಿದೆ. ಇದು ಸುಧೀಂದ್ರ ವೆಂಕಟೇಶ್ ಅವರ ಕಲಾ ಸೇವೆಗೆ ಸಂದಿರುವ ಗೌರವ. ಈ ಸಂಬಂಧ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಮಂತ್ರಾಯಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸ್ವೀಕರಿಸಿದ್ದಾರೆ.

ಸೋಮವಾರ (ಫೆಬ್ರವರಿ 23) ಮಂತ್ರಾಲಯದಲ್ಲಿ ಸುಧೀಂದ್ರ ವೆಂಕಟೇಶ್‍ ಅವರಿಗೆ ಗೌರವ ಡಾಕ್ಟರೇಟ್‍ ಪ್ರದಾನವಾಗಿದೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರು ಈ ಗೌರವ ಡಾಕ್ಟರೇಟ್‍ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸುಧೀಂದ್ರ ವೆಂಟಕೇಶ್‍ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್‍ ನೀಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಸಿನಿಮಾಗಳನ್ನು ಪ್ರಚಾರ ಮಾಡಿದ್ದಾರೆ. ಇದರೊಂದಿಗೆ ಕನ್ನಡದ ಪ್ರತಿಷ್ಠಿತ ಸಂಸ್ಥೆಗಳಾದ ಈಶ್ವರಿ ಪ್ರೊಡಕ್ಷನ್ಸ್, ಕೆ.ಸಿ.ಎನ್‍ ಎಂಟರ್‌ಪ್ರೈಸಸ್, ರಾಕ್‍ಲೈನ್‍ ಪ್ರೊಡಕ್ಷನ್ಸ್, ಹೊಂಬಾಳೆ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್‍, ರಿಷಭ್‍ ಶೆಟ್ಟಿ ಫಿಲ್ಮ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ವೆಂಕಟೇಶ್‍ ಕೆಲಸ ಮಾಡಿದ್ದಾರೆ. ಕಳೆದ 35ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪಿಆರ್‌ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಧೀಂದ್ರ ಅವರ ನಿಧನದ ಬಳಿಕ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

More from Filmibeat

English summary
PRO Sudheendra Venkatesh has been awarded Honorary Doctorate from USA based Yoga-Samskrutham University.
Read more about: venkatesh pro doctorate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X