'ಲವ್ ಮಾಕ್ಟೆಲ್ 2' ಗಳಿಕೆ ಹೇಗಿದೆ? ನಿರ್ಮಾಪಕಿ ಮಿಲನಾ ಹೇಳಿದ್ದೇನು?

'ಲವ್ ಮಾಕ್ಟೆಲ್ 2' ಸಿನಿಮಾ ಇಂದು ಬಿಡುಗಡೆ ಆಗಿದ್ದು, ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಹಲವೆಡೆ ಹೌಸ್‌ಫುಲ್ ಆಗಿದ್ದು, ಬೆಂಗಳೂರಿನಲ್ಲಿ ಇಂದು ಸಿನಿಮಾದ ನಾಯಕ-ನಾಯಕಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರಿಗೇ ಸೀಟು ಸಿಗಲಿಲ್ಲವಂತೆ.

ತಮಗೆ ಸೀಟು ಸಿಗದ ಬಗ್ಗೆ ಬಹಳ ಖುಷಿಯಿಂದಲೇ ಮಾತನಾಡಿದ ನಟಿ ಹಾಗೂ ಈ ಸಿನಿಮಾದ ನಿರ್ಮಾಪಕಿಯೂ ಆಗಿರುವ ಮಿಲನಾ ನಾಗರಾಜ್ ಮೊದಲ ದಿನ ಜನರ ಪ್ರತಿಕ್ರಿಯೆ ನೋಡಿ ಖುಷಿಯಾಗಿದ್ದರು.

ಈ ಸಮಯದಲ್ಲಿ ಮಾಧ್ಯಮದರೊಡನೆ ಮಾತನಾಡಿದ ಮಿಲನಾ ನಾಗರಾಜ್, ''ನಿನ್ನೆ ರಾತ್ರಿ 22 ಪ್ರೀಮಿಯರ್ ಶೋಗಳನ್ನು ಹಾಕಿದ್ದೇವು. ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಅದೇ ನಮಗೆ ಪಾಸಿಟಿವ್ ಎನರ್ಜಿ ತುಂಬಿತ್ತು. ಇಂದು ಬೆಳಿಗ್ಗೆಯಿಂದಂತೂ ಎಲ್ಲೆಡೆ ಚಿತ್ರಮಂದಿರಗಳು ಫುಲ್ ಆಗಿವೆ. ನಮಗೆ ಸೀಟು ಸಿಗಲಿಲ್ಲ, ಗಾಂಧಿ ಕ್ಲಾಸ್‌ನಲ್ಲಿ ಕುಳಿತು ಸಿನಿಮಾ ನೋಡಿದೆವು ಇದು ಬಹಳ ದೊಡ್ಡ ವಿಷಯ'' ಎಂದು ಖುಷಿ ವ್ಯಕ್ತಪಡಿಸಿದರು ಮಿಲನಾ ನಾಗರಾಜ್.

Producer, Actress Milana Nagaraj Talked About Love Mocktail 2 Movie Collections
''ನಿನ್ನೆ ಮೊದಲಾರ್ಧದ ಬಳಿಕ ಜನ ಏನು ಹೇಳುತ್ತಾರೆ ಎಂದು ಟೆನ್ಶನ್ ಆಗಿತ್ತು. ಆದರೆ ಮೊದಲಾರ್ಧ ಮುಗಿದ ಕೂಡಲೆ ಜನ ಸಿನಿಮಾ ಬಗ್ಗೆ ಧನಾತ್ಮಕವಾಗಿ ಹೇಳಿದರು. ಆಗ ಸ್ವಲ್ಪ ನಿರಾಳಳಾದೆ. ಎರಡನೇ ಅರ್ಧ ಖಂಡಿತ ಇಷ್ಟವಾಗುತ್ತೆ ಎಂಬ ನಂಬಿಕೆ ನನಗೆ ಇತ್ತು. ಕೃಷ್ಣಗೆ ಮೊದಲಿನಂತೆಯೇ ಅವರಿಗೆ ಸಿನಿಮಾ ಬಗ್ಗೆ ಬಹಳ ಭರವಸೆ ಇತ್ತು. ಹಾಗೆಯೇ ಸಿನಿಮಾವನ್ನು ಬಹಳ ಜನ ಇಷ್ಟಪಟ್ಟಿದ್ದಾರೆ. 'ಲವ್ ಮಾಕ್ಟೆಲ್' ಗಿಂತಲೂ 'ಲವ್ ಮಾಕ್ಟೆಲ್ 2' ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ ಅದಂತೂ ಬಹಳ ದೊಡ್ಡ ಹೊಗಳಿಕೆ ನಮಗೆ'' ಎಂದರು ಮಿಲನಾ.

ಮಿಲನಾ ಮುಖ ನೆನಪಾಗಿ ಬದುಕುವ ನಿರ್ಧಾರ ಮಾಡಿದೆ: ಡಾರ್ಲಿಂಗ್ ಕೃಷ್ಣ ಭಾವುಕ
''ನಿರ್ಮಾಪಕಿಯಾಗಿ ನಾನು ಸಿನಿಮಾ ಬಿಡುಗಡೆ ಆಗುವ ಮುನ್ನವೇ ಸೇಫ್ ಆಗಿದ್ದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಒಳ್ಳೆಯ ಬೆಲೆಗೆ ಸಿನಿಮಾವನ್ನು ಮಾರಾಟ ಮಾಡಿದ್ದೇವೆ. ಒಟಿಟಿಗೆ ನೇರವಾಗಿ ಬಿಡುಗಡೆ ಮಾಡಲು ಬಹಳ ಒಳ್ಳೆಯ, ದೊಡ್ಡ ಆಫರ್‌ ಬಂದಿತ್ತು. ಆದರೆ ಚಿತ್ರಮಂದಿರದಲ್ಲಿಯೇ ಗೆಲ್ಲಬೇಕು ಎಂಬುದು ನಮ್ಮ ಹಠವಾಗಿತ್ತು. ಹಾಗಾಗಿ ಒಟಿಟಿ ಆಫರ್‌ ನಿರಾಕರಿಸಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದೆವು. ಮೊದಲ ದಿನವೇ ಇಷ್ಟು ಜನ ಬಂದಿರುವುದು ನೋಡಿ ಗೆದ್ದಂತೆ ಎನಿಸುತ್ತಿದೆ'' ಎಂದರು ಮಿಲನಾ.

'''ಲವ್ ಮಾಕ್ಟೆಲ್' ಸಿನಿಮಾದಲ್ಲಿ ನಾವು ಬಹಳ ಕಷ್ಟ ಅನುಭವಿಸಿದೆವು. ಮೊದಲ ವಾರದ ಬಳಿಕ 33 ಚಿತ್ರಮಂದಿರಗಳನ್ನು ಕಿತ್ತುಕೊಂಡರು. ಹಲವು ಹೊಸ ಸಿನಿಮಾಗಳು ಬಿಡುಗಡೆ ಆದವು. ಸಿನಿಮಾ ಸೋತೇ ಹೋಯಿತು ಎಂದುಕೊಂಡಿದ್ದೆವು. ಆ ಬಳಿಕ ಸಿನಿಮಾಕ್ಕೆ ಜನ ಬರಲು ಆರಂಭಿಸಿದರು. ಆದರೆ 43 ನೇ ದಿನಕ್ಕೆ ಸರಿಯಾಗಿ ಲಾಕ್‌ಡೌನ್ ಆಗಿ ಆಗ ಮತ್ತೆ ಹಣ ಕಳೆದುಕೊಂಡೆವು'' ಎಂದು 'ಲವ್ ಮಾಕ್ಟೆಲ್' ಸಿನಿಮಾದ ಕಷ್ಟ ನೆನಪಿಸಿಕೊಂಡರು ಮಿಲನಾ.

''ಆದರೆ ಈ ಸಿನಿಮಾಕ್ಕೆ ಮೊದಲ ದಿನ ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವುದು ಮೊದಲಿನಷ್ಟು ಕಷ್ಟವಾಗಲಿಲ್ಲ. 'ಲವ್ ಮಾಕ್ಟೆಲ್' ಜನರಿಗೆ ಇಷ್ಟವಾಗಿತ್ತಾದ್ದರಿಂದ ಈ ಸಿನಿಮಾದ ಕತೆ ಏನಿರಬಹುದು ಎಂಬ ಸಹಜ ಕುತೂಹಲದಿಂದ ಜನ ಚಿತ್ರಮಂದಿರಗಳಿಗೆ ಆಗಮಿಸಿದರು. ಸ್ವತಃ ಅವರಿಗೇ ಸಿನಿಮಾ ಬಗ್ಗೆ ಕುತೂಹಲ ಇತ್ತು. ನಾವು ಹೆಚ್ಚು ಶ್ರಮ ಪಡುವ ಅಗತ್ಯವೇ ಬರಲಿಲ್ಲ'' ಎಂದಿದ್ದಾರೆ ಮಿಲನಾ.

More from Filmibeat

English summary
Producer, actress Milana Nagaraj talked about Love Mocktail 2 movie collections. She said as a producer I am safe before the movie release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X