"ಬಾಷಾ ಪಿಕ್ಚರ್.. ಕೋಟಿಗೊಬ್ಬ ನೋಡವ್ನಾ? ಅದ್ರಲ್ಲಿ ಕೆ.ಮಂಜು ಫ್ಲ್ಯಾಶ್ ಬ್ಯಾಕ್ ಇದೆ" ಚಂದ್ರಚೂಡ್‌ಗೆ ಕೆ.ಮಂಜು ಎಚ್ಚರಿಕೆ

ಹಿರಿಯ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ನಿರ್ಮಾಪಕರ ಬಗ್ಗೆ ಆಡಿದ ಮಾತುಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸ್ಟಾರ್‌ಗಳ ಮನೆಗಳಿಗೆ ನಿರ್ಮಾಪಕರು ಕಾಂಡೋಮ್ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆ ಈ ನಿರ್ಮಾಪಕ ಕಣ್ಣುಗಳನ್ನು ಕೆಂಪು ಮಾಡಿದೆ. ಅದರಲ್ಲೂ ಕೆ.ಮಂಜು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಇವರಿಬ್ಬರ ನಡುವೆ ಈಗ ವಾಗ್ಯುದ್ಧ ನಡೆಯುತ್ತಿದೆ.

ವಿವಾದ ತಾರಕ್ಕೇರಿತ್ತಿದ್ದಂತೆ ಚಕ್ರವರ್ತಿ ಚಂದ್ರಚೂಡ್ ಸಮಜಾಯಿಷಿ ಕೊಡುವುದಕ್ಕೆ ಮುಂದಾಗಿದ್ದರು. ತಾನು ಹೇಳಿದ್ದು ಕನ್ನಡದ ನಿರ್ಮಾಪಕರಿಗೆ ಅಲ್ಲ. ತಮಿಳು ನಿರ್ಮಾಪಕರಿಗೆ ಎಂದು ಹೇಳಿದ್ದರು. ಆದರೆ, ಈ ಕಾರಣಗಳನ್ನು ಕೆ.ಮಂಜು ಸೇರಿದಂತೆ ಕನ್ನಡದ ನಿರ್ಮಾಪಕರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ನಿರ್ಮಾಪಕರು ಕಾಂಡೋಮ್ ಸಪ್ಲೈ ಮಾಡುತ್ತಾರೆ ಅನ್ನೋದು ಅವರ ಆತ್ಮ ಗೌರವಕ್ಕೆ ಧಕ್ಕೆಯಾಗಿದ್ದು ಕಿಡಿ ಕಾರುತ್ತಿದ್ದಾರೆ.

Producer K Manju warned journalist Chakravarthy Chandrachood filed Rs 5 cr defamation case

ಇಷ್ಟೇ ಅಲ್ಲದೆ, ಕೆ.ಮಂಜು ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಚಕ್ರವರ್ತಿ ಚಂದ್ರಚೂಡ್ ಎಚ್ಚರಿಕೆ ನೀಡಿದ್ದಾರೆ. "ಅವನು ಬ್ಯಾಡ್‌ ಅಂತೆ.. ನಾನು ವೆರಿ ಬ್ಯಾಡ್.. ನಾನೇನು ಆರ್ಡಿನರಿ ಅಲ್ಲ" ಎಂದು ಕೆ.ಮಂಜು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು, ₹5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾಗಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಕ್ರವರ್ತಿ ಚಂದ್ರಚೂಡ್ ಬಗ್ಗೆ ಏನು ಹೇಳಿದ್ದಾರೆ? ಅನ್ನೋದರ ಝಲಕ್ ಇಲ್ಲಿದೆ.

"ನನ್ನ ಮಕ್ಕಳಿಗೆ ನಾನು ಒಳ್ಳೆಯ ತಂದೆ"

"ಕೆ ಮಂಜು ಏನು ಅಂತ ನನಗೆ ಗೊತ್ತು. ನನ್ನ ಮಕ್ಕಳಿಗೆ ಒಳ್ಳೆಯ ತಂದೆ. ಚಿತ್ರರಂಗದಲ್ಲಿ ಕೆ.ಮಂಜುಗೆ ಒಳ್ಳೆಯ ಸಂಬಂಧವಿದೆ. ಚಿತ್ರರಂಗಕ್ಕೆ ಒಳ್ಳೆಯ ನಿರ್ಮಾಪಕ. ಅವನೇನು ಅಂತ ಅವನ ಇತಿಹಾಸವನ್ನು ತೆಗೆದುಕೊಳ್ಳಿ. ಅದು ಅವನ ವೈಯಕ್ತಿಕ ಕೇಳುವುದಕ್ಕೆ ಹೋಗುವುದಿಲ್ಲ. ಆ ಮೇಲೆ ಅವನ ಮೇಲೆ ಹಗುರವಾಗಿ ಏನಾದರೂ ಮಾತಾಡಿದ್ದೇವಾ? ಪರ್ಸನಲ್ ಆಗಿ ಏನಾದರೂ ಮಾತಾಡಿದ್ದರೆ. ಯಾಕೆ ಎಂದು ಕೇಳುವುದರಲ್ಲಿ ಅರ್ಥವಿದೆ. ನಮಗೆ ಬೇಕಿಲ್ಲದ ವಿಷಯ. ನಮ್ಮ ಚಿತ್ರೋದ್ಯಮದ ಬಗ್ಗೆ ಮಾತಾಡಿದ್ದಕ್ಕೆ ಮಾತಾಡಿದ್ದೇನೆ." ಎಂದು ಕೆ.ಮಂಜು ಆಕ್ರೋಶ ಹೊರ ಹಾಕಿದ್ದಾರೆ.

ಟೆಕ್ನಿಷಿಯನ್‌ಗೆ ಕಾಸು ಕೊಟ್ಟಿಲ್ಲ ಅನ್ನೋದನ್ನು ನೋಡಿದ್ದಾನಾ?

"ಇವತ್ತು ಯಾವ ಪ್ರಡ್ಯೂಸರ್ ಇವತ್ತು ದುಡ್ಡು ತೆಗೆದುಕೊಂಡು ಹೋಗಿದ್ದಾರೆ. ಅದು ನಮ್ಮ ಹಣೆಬರಹ. ನಾವು ಯಾರಿಗೂ ಏನನ್ನೂ ಹೇಳುವುದಕ್ಕೆ ಹೋಗಿಲ್ಲ. ನಮ್ಮನ್ನು ಯಾರಾದರೂ ಬಂದು ಸಿನಿಮಾ ಮಾಡಿ ಅಂತ ಕೇಳಿದ್ರಾ? ಇಲ್ಲ ಖಂಡಿತಾ ಯಾರೂ ಕೇಳಿಲ್ಲ. ನಿರ್ಮಾಪಕರಾಗಿ ನಾನು ಎತ್ತೆಚ್ಚಿಕೊಳ್ಳುವುದು ನಮ್ಮ ಧರ್ಮ. ನಾವು ಮತ್ತೆ ಬೇರೆ ಯಾರಿಗಾದರೂ ಮೋಸ ಮಾಡಿದ್ದೇವಾ? ಟೆಕ್ನಿಷಿಯನ್‌ಗೆ ಕಾಸು ಕೊಟ್ಟಿಲ್ಲ ಅನ್ನೋದನ್ನು ಇವನು ನೋಡಿದ್ದಾನಾ? ಟೆಕ್ನಿಷಿಯನ್ 50 ಸಾವಿರ ಕೊಡುವುದಕ್ಕೆ ಹೋಗಿರೋದು 25 ಸಾವಿರ ಕೊಟ್ಟಿದ್ದಾರಲ್ಲ. ಅದೇ ಆ ನಿರ್ಮಾಪಕನಿಗೆ 25 ರೂಪಾಯಿ ಬಂದಿರೋದಿಲ್ಲ" ಎಂದು ಕಿಡಿಕಾರಿದ್ದಾರೆ.

ಎಲ್ಲರ ಹತ್ತಿರ ಟೋಕನ್‌ಗಳನ್ನು ಹಾಕಿಕೊಳ್ತೀಯಾ?

"ನಾನು ಕನ್ನಡ ನಿರ್ಮಾಪಕರಿಗೆ ಹೇಳಿಲ್ಲ. ತಮಿಳು ನಿರ್ಮಾಪಕರಿಗೆ ಹೇಳಿದ್ದು ಅಂತಾನೆ. ತಮಿಳು ನಿರ್ಮಾಪಕರೂ ನಿರ್ಮಾಪಕರೇ ಅಲ್ಲವೇ? ಇವತ್ತು ಪ್ಯಾನ್ ಇಂಡಿಯಾ ಸಿನಿಮಾ ಅಂತಿರುವಾಗ ತಮಿಳು, ತೆಲುಗು ಮಲಯಾಳಂ ಅಂತ ಯಾಕೆ ಬರುತ್ತೆ? ನಾವು ನಾಡು, ನುಡಿ ಭಾಷೆ ವಿಚಾರಕ್ಕೆ ಬಂದಾಗ ನಾವು ಕನ್ನಡಿಗರು ಅದರಲ್ಲಿ ಎರಡು ಮಾತಿಲ್ಲ. ನೀನೇನು ನಾರಾಯಣ ಗೌಡನ ಹಾಗೆ ಕನ್ನಡಕ್ಕೆ ಹೋರಾಡಿದ್ದೀಯಾ? ಕನ್ನಡ ಉಳಿಸುತ್ತಿರೋ ಆ ಸಂಘಗಳು. ನೀನು ಯಾವ ಹೋರಾಟ ಮಾಡಿದ್ದೀಯಾ? ಎಲ್ಲರ ಹತ್ತಿರ ಟೋಕನ್‌ಗಳನ್ನು ಹಾಕಿಕೊಂಡು ಏನು ಮಾತಾಡುತ್ತಿದ್ದೀಯಾ?" ಎಂದು ಕೆ.ಮಂಜು ಗರಂ ಆಗಿದ್ದಾರೆ.

Producer K Manju warned journalist Chakravarthy Chandrachood filed Rs 5 cr defamation case

"ಹೌದು ನಾನು ವಿದ್ಯಾವಂತ ಅಲ್ಲ"

"ಕೊಬ್ಬರಿ ಮಂಜಂಗೆ ಕನ್ನಡ ಬರಲ್ಲ, ಇಂಗ್ಲಿಷ್ ಬರಲ್ಲ ಅಂತ ಹೇಳಿದ್ದಾನೆ. ಹೌದು ನಾನು ವಿದ್ಯಾವಂತ ಅಲ್ಲ. ನಾನು ವಿದ್ಯಾವಂತ ಆಗಿದ್ದರೆ, ನಿನ್ನ ಹಾಗೆ ಕೂತ್ಕೊಂಡು, ಪೆನ್ನು ತೆಗೆದುಕೊಂಡು ಯಾರಿಗೋ ಯಾಮಾರಿಸಿ ದುಡ್ಡು ಕಿತ್ತುಕೊಳ್ಳುತ್ತಿದ್ದೆ. ನಾನು ವಿದ್ಯಾವಂತ ಅಲ್ಲ. ನಾನೊಬ್ಬ ರೈತನ ಮಗ. ರೈತನ ಮಗನಾಗಿ ಬಂದು ನಾನು ಎಲ್ಲಿದ್ದೀನಿ ಇವತ್ತು. ನಿನ್ನನ್ನು ಎಲ್ಲಿ ಇಟ್ಟಿದ್ದಾನೆ? ನಾನು ವೀರ, ಶೂರ ಅಂದರೆ ಏನು.. ವಿವೇಕ ಇರಬೇಕು. ಅವಿವೇಕಿತರ ಮಾತಾಡಬಾರದು." ಎಂದು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಕೆ ಮಂಜು ಕಿಡಿಕಾರಿದ್ದಾರೆ.

ಬಾಷಾ ಪಿಕ್ಚರ್ ನೋಡವ್ನಾ?

"ಅವನು ಬ್ಯಾಡ್‌ ಅಂತೆ.. ನಾನು ವೆರಿ ಬ್ಯಾಡ್.. ನಾನೇನು ಆರ್ಡಿನರಿ ಅಲ್ಲ. ಬಾಷಾ ಪಿಕ್ಚರ್ ನೋಡವ್ನಾ? ಕೋಟಿಗೊಬ್ಬ ನೋಡವ್ನಾ? ಅದರಲ್ಲಿ ಕೆ.ಮಂಜುದು ಫ್ಲ್ಯಾಶ್ ಬ್ಯಾಕ್ ಇದೆ. ನಾನು ಚಿತ್ರರಂಗಕ್ಕೆ ಬಂದಾಗ ವಿಷ್ಣುವರ್ಧನ್ ಅವರು ಒಂದೇ ಮಾತು ಹೇಳಿದ್ದು ಕೈ, ಬಾಯಿ ಚೆನ್ನಾಗಿರಲಿ ಚಿನ್ನಾ.. ನೀನು ಬ್ಯಾಡ್ ಆದರೆ, ಐಯಾಮ್ ಯುವರ್ ಡ್ಯಾಡ್. ನಾನು ಗೌರವ, ಬೆಲೆ ತೂಕಕ್ಕೆ ಇದ್ದೀನಿ. ನೀನು ನನಗೆ ಕೌಂಟ್‌ಗೆ ಇರೋದಿಲ್ಲ." ಎಂದು ಕೆ.ಮಂಜು ಕೆಂಡಕಾರಿದ್ದಾರೆ.

More from Filmibeat

English summary
Producer K Manju warned journalist Chakravarthy Chandrachood filed Rs.5 cr defamation case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X