'ಜೋಗಿ' ಸಿನಿಮಾ ಮಾಡಿದವನನ್ನೇ ನಾಶ ಮಾಡಿಬಿಟ್ಟ ಜೋಗಿ ಪ್ರೇಮ್.. ಎಪಿ ಅರ್ಜನ್, ಸತ್ಯ ಹೆಗ್ಡೆ ವಿರುದ್ಧವೂ ಆರೋಪ
ಕನ್ನಡ ಚಿತ್ರರಂಗದ ವಿವಾದಾತ್ಮಕ ನಿರ್ಮಾಪಕ ಕನಕಪುರ ಶ್ರೀನಿವಾಸ್. ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣದ ಜೊತೆಗೆ ವಿತರಣೆಯನ್ನೂ ಮಾಡಿದ್ದಾರೆ. ಇಂತಹ ನಿರ್ಮಾಪಕ ಇಂದು ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಇತ್ತೀಚೆಗೆ ಅವರು ಆಡುತ್ತಿರುವ ಮಾತುಗಳೇ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಚಿತ್ರರಂಗದ ಹೀರೋಗಳು, ನಿರ್ದೇಶಕರು ಹಾಗೂ ತಂತ್ರಜ್ಞರ ಮೇಲೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.
'ಕಾಟನ್‌ಪೇಟೆ' ಅನ್ನೋ ಸಿನಿಮಾಗಳನ್ನು ಮಾಡಿರುವ ಕನಕಪುರ ಶ್ರೀನಿವಾಸ್ ಬಿಡುಗಡೆ ಒದ್ದಾಡುತ್ತಿದ್ದಾರೆ. ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಕನಕಪುರ ಶ್ರೀನಿವಾಸ್ ಈ ಹಿಂದೆ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ, ಸ್ಟಾರ್ ನಿರ್ದೇಶಕರಿಗೆ, ತಂತ್ರಜ್ಞರಿಗೆ ಮುಂಗಡ ಹಣವನ್ನು ಕೊಟ್ಟಿದ್ದು, ಅದನ್ನು ಹಿಂತಿರುಗಿಸುತ್ತಿಲ್ಲವೆಂದು ಗಂಭೀರ ಆರೋಪ ಮಾಡಿದ್ದರು.

ಇಂದು (ಫೆಬ್ರವರಿ 5) 'ಕಾಟನ್‌ಪೇಟೆ' ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಪುನೀತ್ ರಾಜ್‌ಕುಮಾರ್‌ರಿಂದ ಹಿಡಿದು ಜೋಗಿ ಪ್ರೇಮ್, ಎಪಿ ಅರ್ಜುನ್, ಸತ್ಯ ಹೆಗ್ಡೆ ವಿರುದ್ಧ ಹಣ ಪಡೆದಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಅದರಲ್ಲೂ ಜೋಗಿ ಪ್ರೇಮ್ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಜೋಗಿ ಪ್ರೇಮ್ ಸಿನಿಮಾ ಮಾಡಿದ ನಿರ್ಮಾಪಕರೆಲ್ಲರೂ ಕಳೆದು ಹೋಗಿದ್ದಾರೆಂದು ಆರೋಪಿಸಿದ್ದಾರೆ. ಜೋಗಿ ಪ್ರೇಮ್, ಎಪಿ ಆರ್ಜುನ್ ಹಾಗೂ ಸತ್ಯ ಹೆಗ್ಡೆ ಬಗ್ಗೆ ಏನು ಹೇಳಿದ್ದಾರೆ ಅನ್ನೋದರ ಝಲಕ್ ಇಲ್ಲಿದೆ.
"ಎಪಿ ಅರ್ಜುನ್ ನಾಯಿ ಬಿಡ್ತಾನೆ"
"ಅವನು ಎಪಿ ಅರ್ಜುನ್ ದುಡ್ಡು ಕೇಳುವುದಕ್ಕೆ ಹೋದರೆ, ನಾಯಿ ಬಿಡುತ್ತಾನೆ. ಅವನ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವುದಕ್ಕೆ 25 ಲಕ್ಷ ರೂಪಾಯಿ ಕೊಟ್ಟೆ. ಎಷ್ಟು ಸಿನಿಮಾ ಮಾಡಿದ್ದಾನೆ. ಫೋನ್ ತೆಗಿಯೋ ನೀನು" ಎಂದು ಕನಕಪುರ ಶ್ರೀನಿವಾಸ್ ಕಿಡಿ ಕಾರಿದ್ದಾರೆ.
"ಜೋಗಿ ಪ್ರೇಮ್ ಗಂಡಸಾದ್ರೆ ಎದುರಿಗೆ ಬಾ"
"ಜೋಗಿ ಪ್ರೇಮ್.. ಅವನಿಂದ ಯಾರು ಉದ್ದಾರ ಆಗಿದ್ದಾರೆ. ನನ್ನ ಹತ್ತಿರ 10 ಲಕ್ಷ ರೂಪಾಯಿ ತೆಗೆದುಕೊಂಡು 18 ವರ್ಷ ಆಯ್ತು. ಎಷ್ಟು ಉಗೀತೀರ. ಜೋಗಿ ಪ್ರೇಮ್ ಸಿನಿಮಾ ಮಾಡಿದ ಒಬ್ಬ ನಿರ್ಮಾಪಕ ಉಳಿದಿಲ್ಲ. ಅವನು ಮಾತ್ರ ಚೆನ್ನಾಗಿ ಇದ್ದಾನೆ. ನೂರಾರು ಕೋಟಿ ದುಡ್ಡು ಇಟ್ಕೊಂಡು ಆರಾಮಾಗಿದ್ದಾನೆ. ಪೋನ್ ಮಾಡಿದರೆ ತೆಗೆಯೋದಿಲ್ಲ. ನೀನು ಗಂಡಸಾದ್ರೆ ಎದುರಿಗೆ ಬಾ. ಅವುಚಿಕೊಂಡು ಓಡಾಡುತ್ತಿಯಲ್ಲೋ" ಎಂದು ಜೋಗಿ ಪ್ರೇಮ್ ವಿರುದ್ಧ ನಿರ್ಮಾಪಕ ಕನಕಪುರ ಶ್ರೀನಿವಾಸ್ ಆಕ್ರೋಶ ಹೊರ ಹಾಕಿದ್ದಾರೆ.
ಯಾವ ನಿರ್ಮಾಪಕರನ್ನು ಉದ್ಧಾರ ಮಾಡಿದ್ದೀಯಾ?
"ನೀನು ಊರಿನಲ್ಲಿ ಎಮ್ಮೆ ಮೇಯಿಸುತ್ತಿದ್ದಿದ್ದು, ಕುರಿ ಮೇಯಿಸುತ್ತಿದ್ದಿದ್ದು ಎಲ್ಲಾ ಗೊತ್ತು. ಜೋಗಿ ಅಂತಹ ಸಿನಿಮಾ ಮಾಡಿದವನನ್ನೇ ನಾಶ ಮಾಡಿಬಿಟ್ಟೆ ನೀನು. ಎಕ್ಸ್‌ಕ್ಯೂಸ್ ಮೀ ಅಂತ ಸಿನಿಮಾ ಮಾಡಿದವನಿಗೆ ನಾಶ ಮಾಡಿಬಿಟ್ಟೆ ನೀನು. ಯಾರನ್ನು ಉದ್ದಾರ ಮಾಡಿದ್ದೀಯ. ಕರಿಯಾ ಅಂತ ಸಿನಿಮಾ ಮಾಡಿದವನು ಸತ್ತೇ ಹೋದ. ನೀವೆಲ್ಲ ಒಬ್ಬ ಡೈರೆಕ್ಟರ್? ನಿಮಗೆ ನಾಚಿಕೆ-ಹೇಸಿಗೆ ಏನಿಲ್ಲ." ಎಂದು ಜೋಗಿ ಪ್ರೇಮ್‌ಗೆ ತರಾಟೆ ತೆಗೆದುಕೊಂಡಿದ್ದಾರೆ.
ಸತ್ಯ ಹೆಗ್ಡೆ ಮೇಲೂ ಕಿಡಿ
"ಕನ್ನಡದಲ್ಲಿ ಆರ್ಟಿಸ್ಟ್‌ಗಳು, ಡೈರೆಕ್ಟರ್‌ಗಳು ಮಾಡುವ ಎಲ್ಲೂ ಮಾಡಲ್ಲ. ಕ್ಯಾಮರಾಮ್ಯಾನ್ ಸತ್ಯ ಹೆಗ್ಡೆ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವುದಕ್ಕೆ 10 ಲಕ್ಷ ಕೊಟ್ಟೆ. ಇದೇ ಮಯೂರ ಪಿಕ್ಚರ್‌ಗೆ ನಾಲ್ಕು ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದ. ಈಗ ಡೈರೆಕ್ಟರ್ ಇಲ್ಲ. ಅಪ್ಪುನೂ ಇಲ್ಲ. ಮೊನ್ನೆ ನಿಮ್ಮ ಮನೆಯಲ್ಲಿ ಯಾರಾದರೂ ಸತ್ತೋಗ್ತಾರೆ ಹೋಗು ಅಂದೆ. ಅವರ ತಮ್ಮ ಸತ್ತು ಹೋದ. ಶಾಪ ಇರಬಾರದಂತೆ.. ಯಾರೂ ಉಳಿಯೋದಿಲ್ಲ.. ಯಾಕೀ ಬಾಳು ಬಾಳಬೇಕು. ಯಾರು ಬರೋದಿಲ್ಲ. ಬೇರೆಯವರು ಬರೋದಕ್ಕೆ ಹೆದರುತ್ತಾರೆ." ಎಂದು ಕನಕಪುರ ಶ್ರೀನಿವಾಸ್ ಆರೋಪಿಸಿದ್ದಾರೆ.


Click it and Unblock the Notifications











