"ಈ ಸುದೀಪ್ ನಮ್ಮ ಅಫೀಸ್ ಮುಂದೆ ಚಾಪೆ ಹಾಕೊಂಡು ಮಲ್ಕೊಂಡಿದ್ರು"; ಕನಕಪುರ ಶ್ರೀನಿವಾಸ್ ಆಕ್ರೋಶ
ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಸ್ಟಾರ್ ನಟರ ವಿರುದ್ಧ ತಿರುಗಿಬಿದ್ದಿದ್ದಾರೆ. ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಶ್ರೀಮುರಳಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಹಿಂದೆ ಸಿನಿಮಾ ಮಾಡುವುದಕ್ಕೆಂದು ಅಡ್ವಾನ್ಸ್ ಹಣವನ್ನು ಸುದೀಪ್, ಶಿವಣ್ಣ ಸೇರಿದಂತೆ ಕೆಲವು ನಟರಿಗೆ ಕೊಟ್ಟಿದ್ದು, ಅವರ ಬಳಿ ವಾಪಾಸ್ ಕೇಳಿದರೆ ಹಿಂತಿರುಗಿಸುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಕಿಚ್ಚ ಸುದೀಪ್, ಶಿವಣ್ಣ, ಶ್ರೀಮುರಳಿ ವಿರುದ್ಧ ನಿರ್ಮಾಪಕ ಕನಕಪುರ ಶ್ರೀನಿವಾಸ್ ಆಕ್ರೋಶ ಹೊರ ಹಾಕುತ್ತಿದ್ದಂತೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಕನಕಪುರ ಶ್ರೀನಿವಾಸ್ ಫೋನ್ ಎತ್ತುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಈ ಮಧ್ಯೆ ಕೆಲವು ಯೂಟ್ಯೂಬ್ ಚಾನೆಲ್‌ಗಳಲಿಗೆ ಸಂದರ್ಶನ ನೀಡಿದ್ದು, ಅದರಲ್ಲೂ ಮತ್ತೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

"ಸುದೀಪ್ ಇರಬಹುದು, ಮುರಳಿ ಇರಬಹುದು, ಧ್ರುವ ಸರ್ಜಾ ಇರಬಹುದು ಯಾರೇ ಆರ್ಟಿಸ್ಟ್ ಇರಬಹುದು. ಆಗಿನ ಕಾಲದಲ್ಲಿ ಅವರನ್ನು ಕಷ್ಟಪಟ್ಟು ಸಿನಿಮಾ ಮಾಡಿ ಗೆಲ್ಲಿಸಿದ್ದೇವೆ." ಎಂದು ಕನಕಪುರ ಶ್ರೀನಿವಾಸ್ ಸ್ಪೀಡ್ ಫಿಲ್ಮಿ ಸುದ್ದಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಹಾಗೇ ಸುದೀಪ್ ನಮ್ಮ ಆಫೀಸ್ ಮುಂದೆ ಚಾಪೆ ಹಾಕೊಂಡು ಮಲಗಿದ್ದರು ಎಂದು ಹೇಳಿಕೊಟ್ಟಿದ್ದಾರೆ. ಅದರ ಝಲಕ್ ಇಲ್ಲದೆ.
"ಅವರಿಗೇನು ಕೊಂಬು ಬಂದಿಲ್ಲ"
ಕನಕಪುರ ಶ್ರೀನಿವಾಸ್ ಈ ಹಿಂದೆ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಸುದೀಪ್, ಶಿವಣ್ಣ, ಶ್ರೀಮುರಳಿ, ಧ್ರುವ ಸರ್ಜಾ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಈಗ ಅವರು ಕಾಲ್‌ಶೀಟ್ ಕೊಡುತ್ತಿಲ್ಲ. ಫೋನ್ ಕಾಲ್‌ಗಳನ್ನು ರಿಸೀವ್ ಮಾಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. "ಅವರಿಗೇನು ಕೊಂಬು ಬಂದಿಲ್ಲ. ಕೊಂಬು ಹಾಕಿಸಿರುವುದು ನಿರ್ಮಾಪಕರು. ಆಗ ಲಕ್ಷ ಲಕ್ಷ ಹಣವನ್ನು ಕೊಟ್ಟಿರೋರು ನಾವು. ಅದಕ್ಕೆ ನಾವು ಹೀಗೆ ಮಾತಾಡುತ್ತೇವೆ. ಅವರು ಕಾಲ್‌ಶೀಟ್ ಕೊಡುತ್ತಾರೋ ಬಿಡುತ್ತಾರೋ ನನಗೆ ಬೇಡ. ಈಗ ಹೀರೋ ದುಡ್ಡಿನ ಮದ ನೋಡಿದ್ದಾರೆ. ಆಗಿನ ಕಾಲವೇ ಬೇರೆ. ಈಗಿನ ಕಾಲವೇ ಬೇರೆ. ಹೂಂ ಅಂದರೂ ಟಿವಿಯವರು ಕಾಸು ಕೊಡ್ತಾರೆ, ಊಹೂಂ ಕಾಸು ಕೊಡುತ್ತಾರೆ. ನಾವು ಅವತ್ತು ಸಿನಿಮಾ ಮಾಡಿದ್ದಕ್ಕೆ ಈಗ ಹಾಗಿದ್ದಾರೆ." ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.

"ಸುದೀಪ್ ಚಾಪೆ ಹಾಕೊಂಡು ಮಲಗಿದ್ರು"
"ಈ ಸುದೀಪ್ ನಮ್ಮ ಅಫೀಸ್ ಮುಂದೆ ಚಾಪೆ ಹಾಕೊಂಡು ಮಲ್ಕೊಂಡಿದ್ರು. ನಾಳೆ ನೀವು ಕೇಳಿದರೆ, ನನ್ನ ಹತ್ತಿರ ಫೋಟೊಗಳು ಇವೆ. ನಮ್ಮ ಕನಕಪುರದಲ್ಲೇ ಧಮ್ ಅಂತಹ ಸಿನಿಮಾ ಮಾಡಿದ್ದು. ಚಾಪೆ ಹಾಕಿಕೊಂಡು ಮಲಗಿದ್ದಾರೆ. ಅದನ್ನು ಮರೆತು ಬಿಟ್ಟರೆ ಹೇಗೆ? ಈಗ ಅವರು ಬೆಳೆದಿರಬಹುದು. ನಾವು ಸೋತಿರಬಹುದು. ಚಾಪೆ ಹಾಕಿಕೊಂಡು ಮಲಗಿದ್ರಲ್ಲ. ಅವತ್ತಿಂದು ಯೋಚನೆ ಮಾಡಬೇಕು." ಎಂದು ಕನಕಪುರ ಶ್ರೀನಿವಾಸ್ ಆಕ್ರೋಶ ಹೊರ ಹಾಕಿದ್ದಾರೆ.
ಧಮ್ ಇದ್ದರೆ ಉತ್ತರ ಕೊಡಿ
"ಎಂಎಸ್ ರಮೇಶ್ ಮೆಗಾ ರೈಟರ್, ಮೆಗಾ ಡೈರೆಕ್ಷನ್ ಮಾಡಿದವರು. ಅವರು ಸೂಪರ್ ವ್ಯಕ್ತಿ. ಅವರಿಗೆ ಇವತ್ತು ಕೆಲಸವಿಲ್ಲ. ಅವರ ಆರೋಗ್ಯ ಹೋಗಿಬಿಟ್ಟಿದೆ. ಅವರಿಗೆ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಶ್ರೀರಾಮ್ ಅಂತ ಶಿವರಾಜ್‌ಕುಮಾರ್ ಸಿನಿಮಾ ಸಂತೋಷ್ ಥಿಯೇಟರ್‌ನಲ್ಲಿ ನೂರು ದಿನ ಓಡಿತ್ತು. ಇಂತಹ ಡೈರೆಕ್ಟರ್‌ಗೆ ಕೆಲಸವಿಲ್ಲ. ಅವರಿಗೆ ಯಾಕೆ ಡೇಟ್ ಕೊಡುವುದಿಲ್ಲ. ಅವರ ಕಷ್ಟವನ್ನು ನೀವು ಯಾಕೆ ವಿಚಾರಿಸುತ್ತಿಲ್ಲ. ನಿಮಗೆ ಧಮ್ ಇದ್ದರೆ ಉತ್ತರ ಕೊಡಿ." ಎಂದು ಸವಾಲೆಸೆದಿದ್ದಾರೆ.
ಇದೇ ವೇಳೆ ಚಿತ್ರರಂಗಕ್ಕೆ ಬಂದು 30 ವರ್ಷ ಆಗಿದ್ದು, 21 ಸಿನಿಮಾಗಳನ್ನು ಮಾಡಿರುವ ಕನಕಪುರ ಶ್ರೀನಿವಾಸ್ ಈಗಾಗಲೇ 2 ಸಿನಿಮಾಗಳನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ. ಉಪೇಂದ್ರ, ರವಿಚಂದ್ರನ್ ನಟಿಸುತ್ತಿರುವ ತ್ರಿಶುಲಂ ಸಿನಿಮಾ ₹30 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದು, ಉಪ್ಪಿ ಬರ್ತ್‌ಡೇಗೆ ರಿಲೀಸ್ ಮಾಡುವ ಪ್ಲಾನ್ ಇಟ್ಟುಕೊಂಡಿದ್ದಾರೆ.


Click it and Unblock the Notifications











