ದೇವರಾಜ್‌ ಜೊತೆ ಮೊದಲ ಸಿನಿಮಾ.. ಮಗ ಪ್ರಜ್ವಲ್‌ಗೆ ಕೊನೆ ಸಿನಿಮಾ: ಇದು ಕೋಟಿ ರಾಮು ಸಿನಿಮಾ ಜರ್ನಿ

ಸ್ಯಾಂಡಲ್‌ವುಡ್‌ನಲ್ಲಿ ಶ್ರೀಮಂತ ನಿರ್ಮಾಪಕ ಅಂತಲೇ ಹೆಸರುವಾಸಿಯಾಗಿದ್ದು ಕೋಟಿ ರಾಮು. 90ರ ದಶಕದಲ್ಲಿ ಕೋಟಿ ಹಣ ಹೂಡಿ ಕನ್ನಡ ಸಿನಿಮಾ ನಿರ್ಮಾಣ ಆಗುತ್ತಿದ್ದದ್ದು ತೀರಾ ವಿರಳ. ಇಂತಹ ಸಂದರ್ಭದಲ್ಲೂ ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ ರಾಮು ಕೋಟಿ ರೂಪಾಯಿಯಲ್ಲೇ ಸಿನಿಮಾ ನಿರ್ಮಾಣ ಮಾಡಿದ್ದರು. ಆಗಲೇ ಈ ನಿರ್ಮಾಪಕನಿಗೆ ಚಿತ್ರರಂಗ ಕೋಟಿ ರಾಮು ಅಂತ ಬಿರುದು ನೀಡಿತ್ತು.

ನಿರ್ಮಾಪಕ ರಾಮುರದ್ದು ಮೃದು ಸ್ವಭಾವ, ಹಿತಮಿತವಾದ ಮಾತು. ಆದರೂ ಸಿನಿಮಾ ತೆಗೆಯುವ ವಿಚಾರದಲ್ಲಿ ಇವರು ತೋರುತ್ತಿದ್ದ ಧೈರ್ಯ ಮಾತ್ರ ಅಸಾಧಾರಣ. ಇಷ್ಟು ಮೃದು ಸ್ವಭಾವದ ನಿರ್ಮಾಪಕ ಬರೀ ಮಾಸ್ ಸಿನಿಮಾಗಳನ್ನೇ ನಿರ್ಮಿಸಿದ್ದರು ಹೇಗೆ? ಅನ್ನುವ ಪ್ರಶ್ನೆ ಕಾಡದೇ ಇರುವುದಿಲ್ಲ. ಈಗ ರಾಮು ನಿರ್ಮಿಸಿದ ಕೊನೆಯ ಸಿನಿಮಾ ಅರ್ಜುನ್ ಗೌಡ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ರಾಮು ದೇವರಾಜ್‌ಗೆ ಮೊದಲ ನಿರ್ಮಿಸಿದರೆ, ಕೊನೆಯ ಸಿನಿಮಾ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್‌ಗೆ ಪ್ರೊಡ್ಯೂಸ್ ಮಾಡಿರುವುದು ಗಮನಿಸಬೇಕಾದ ಅಂಶ. ರಾಮು ನಿರ್ಮಿಸಿದ ಮೊದಲ ಸಿನಿಮಾ ಹಾಗೂ ಕೊನೆಯ ಸಿನಿಮಾದ ಇಂಟ್ರೆಸ್ಟಿಂಗ್ ಜರ್ನಿ ಹೇಗಿದೆ ನೋಡಿ.

ದೇವರಾಜ್‌ ನಟನೆಯ 'ಗೋಲಿಬಾರ್' ರಾಮು ನಿರ್ಮಿಸಿದ ಮೊದಲ ಸಿನಿಮಾ

ದೇವರಾಜ್‌ ನಟನೆಯ 'ಗೋಲಿಬಾರ್' ರಾಮು ನಿರ್ಮಿಸಿದ ಮೊದಲ ಸಿನಿಮಾ

ರಾಮು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಅವರಿಗೆ ವಯಸ್ಸು ಕೇವಲ 21 ವರ್ಷ. ಮೊದಲ ಸಿನಿಮಾವೇ ಮಾಸ್ ಸಿನಿಮಾ. ಆಕ್ಷನ್ ಹೀರೋ ದೇವರಾಜ್ ನಟಿಸಿದ 'ಗೋಲಿಬಾರ್' ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಅದ್ಧೂರಿ ಆಕ್ಷನ್ ಸಿನಿಮಾಗಳಿಗೆ ಪರೋಕ್ಷವಾಗಿ ಮುನ್ನುಡಿ ಬರೆದ ಸಿನಿಮಾ ಆಗಿತ್ತು. ಇಲ್ಲಿಂದ ಕೋಟಿ ರಾಮು ಅಸಲಿ ಸಿನಿಮಾ ಪಯಣ ಆರಂಭ. ಪೊಲೀಸ್ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ದೇವರಾಜ್‌ 93ರಲ್ಲಿ ರಾಮು ನಿರ್ಮಿಸಿದ್ದ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಡೈನಾಮಿಕ್ ಕುಟುಂಬದೊಂದಿಗೆ ನಿರ್ಮಾಪಕ ರಾಮು ಸಂಬಂಧ ಹಾಗೇ ಮುಂದುವರೆದಿತ್ತು.

ಪ್ರಜ್ವಲ್ ದೇವರಾಜ್‌ಗೆ ರಾಮು ಕೊನೆಯ ಸಿನಿಮಾ

ಪ್ರಜ್ವಲ್ ದೇವರಾಜ್‌ಗೆ ರಾಮು ಕೊನೆಯ ಸಿನಿಮಾ

ದೇವರಾಜ್‌ಗೆ ಮೊದಲ ಸಿನಿಮಾ ನಿರ್ಮಾಣ ಮಾಡಿದ್ದರೆ, ಅವರ ಪುತ್ರ ಪ್ರಜ್ವಲ್ ದೇವರಾಜ್‌ಗೆ ಕೊನೆಯ ಸಿನಿಮಾ ನಿರ್ಮಿಸಿರುವುದು ಕಾಕತಾಳೀಯ. 'ಅರ್ಜುನ್ ಗೌಡ' ಸಿನಿಮಾ ರಾಮು ನಿರ್ಮಾಣದ ಕೊನೆಯ ಸಿನಿಮಾ. ಇದು ಕೂಡ ಮಾಸ್ ಸಿನಿಮಾ ಅನ್ನುವುದು ವಿಶೇಷ. ಕೊರೊನಾ ಹಾವಳಿ ಇರದೇ ಹೋಗಿದ್ದರೆ, ನಿರ್ಮಾಪಕ ರಾಮು 'ಅರ್ಜುನ್ ಗೌಡ' ಸಿನಿಮಾವನ್ನು ಈ ವರ್ಷದ ಆರಂಭದಲ್ಲಿಯೇ ಬಿಡುಗಡೆ ಮಾಡಿ ಬಿಡುತ್ತಿದ್ದರು. ಆದರೆ, ವಿಧಿ ಅವರಿಗೆ ಈ ಸಿನಿಮಾ ರಿಲೀಸ್ ಮಾಡುವುದಕ್ಕೆ ಅವಕಾಶವೇ ನೀಡಿರಲಿಲ್ಲ.

ಅಪ್ಪು ಮತ್ತು ಮಗನಿಗೆ ತಲಾ ಮೂರು ಸಿನಿಮಾ ನಿರ್ಮಾಣ

ಅಪ್ಪು ಮತ್ತು ಮಗನಿಗೆ ತಲಾ ಮೂರು ಸಿನಿಮಾ ನಿರ್ಮಾಣ

ತಂದೆ ದೇವರಾಜ್‌ ಹಾಗೂ ಪುತ್ರ ಪ್ರಜ್ವಲ್ ದೇವರಾಜ್‌ಗೆ ನಿರ್ಮಾಪಕ ರಾಮು ತಲಾ ಮೂರು ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ದೇವರಾಜ್‌ಗೆ ರಾಮು ತನ್ನ ಮೊದಲ ಸಿನಿಮಾ ಗೋಲಿಬಾರ್ ನಿರ್ಮಿಸಿದ್ದರೆ, ಎರಡನೇ ಸಿನಿಮಾ ಲಾಕಪ್‌ಡೆತ್‌ನಲ್ಲೂ ದೇವರಾಜ್‌ ನಟಿಸಿದ್ದರು. ಹಾಗೇ ಮಾಲಾಶ್ರೀ ಹಾಗೂ ದೇವರಾಜ್ ನಟಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ರಾಮು ಹಾಗೂ ದೇವರಾಜ್ ಕಾಂಬಿನೇಷನ್‌ನಲ್ಲಿ ಬಂದ ಮೂರನೇ ಸಿನಿಮಾ. ಹಾಗೆನೇ ಪುತ್ರ ಪ್ರಜ್ವಲ್‌ಗೂ ಮೂರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗುಲಾಮ, ಸಾಗರ್ ಹಾಗೂ ಬಿಡುಗಡೆಗೆ ಸಜ್ಜಾಗಿರುವ ಅರ್ಜುನ್ ಗೌಡ ಮೂರನೇ ಸಿನಿಮಾ.

 'ಅರ್ಜುನ್ ಗೌಡ' ಡಿಸೆಂಬರ್ ರಿಲೀಸ್

'ಅರ್ಜುನ್ ಗೌಡ' ಡಿಸೆಂಬರ್ ರಿಲೀಸ್

ಪತಿ ರಾಮು ನಿರ್ಮಿಸಿದ ಕೊನೆಯ ಸಿನಿಮಾ 'ಅರ್ಜುನ್ ಗೌಡ' ಸಿನಿಮಾವನ್ನು ಪತ್ನಿ ಮಾಲಾಶ್ರೀ ಬಿಡುಗಡೆ ಮಾಡುತ್ತಿದ್ದಾರೆ. ಡಿಸೆಂಬರ್ 31ರಂದು ಈ ಸಿನಿಮಾ ಬಿಡುಗಡೆಯಾಗಿದ್ದು, ಸ್ವತಃ" ಮಾಲಾಶ್ರೀ ಅವರೇ ಮುಂದೆ ನಿಂತ ಪತಿಯ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ. ಬಿಡುಗಡೆಗೂ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಕೂಡ ನಡೆಯುತ್ತಿದೆ.

More from Filmibeat

English summary
Producer Ramu first movie Golibar with Devaraj and last movie Arjun Gowda with Prajwal Devaraj. 1993 Ramu entered film industry with Golibar movie and his last movie is with son Prajwal Devaraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X