ರಾಕ್‌ಲೈನ್‌ ವೆಂಕಟೇಶ್‌ ಮೊಮ್ಮಗನ ವಿಶಿಷ್ಟ ಸಾಧನೆ; ರೂಬಿಕ್ಸ್ ಕ್ಯೂಬ್‌ನಲ್ಲಿ ವಿಶ್ವ ದಾಖಲೆ ಬರೆದ ಶಿವತೇಜ ವೈ

ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್. ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಗಳಿಗಾಗಿ ಶ್ರಮಿಸುತ್ತಿದ್ದಾರೆ. ಚಿತ್ರರಂಗವನ್ನು ತನ್ನ ಕುಟುಂಬದಂತೆ ಕಾಣುವ ರಾಕ್‌ಲೈನ್ ಎಲ್ಲರ ಮನೆಯ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಇವರು ಕನ್ನಡ ಚಿತ್ರರಂಗದ ಅಪರೂಪದ ನಿರ್ಮಾಪಕ.

ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಂಭ್ರಮ ಮೂಡಿನಲ್ಲಿ ಇದ್ದಾರೆ. ಸಿನಿಮಾ ಗೆದ್ದಾಗ ಖುಷಿ ಪಡುತ್ತಿದ್ದ ನಿರ್ಮಾಪಕ ತನ್ನ ಕುಟುಂಬದ ಸದಸ್ಯನ ಸಾಧನೆಯ ಖುಷಿಯಲ್ಲಿದ್ದಾರೆ. ಹೌದು, ಅವರ ಮೊಮ್ಮಗ ವಿಶಿಷ್ಠ ಸಾಧನೆಯನ್ನು ಮಾಡಿ ರಾಕ್‌ಲೈನ್ ಕುಟುಂಬಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಅದೇ ಖುಷಿಯನ್ನು ರಾಕ್‌ಲೈನ್ ವೆಂಕಟೇಶ್ ಹಂಚಿಕೊಂಡಿದ್ದಾರೆ.

Producer Rockline Venkatesh Grand son Shivateja Y create world record in rubik s cube

ರಾಕ್‌ಲೈನ್ ವೆಂಕಟೇಶ್ ಅವರ 14 ವರ್ಷದ ಮೊಮ್ಮಗ ಶಿವತೇಜ ವೈ ಮಿಕ್ಸ್‌ಡ್ 'ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್' ಬಿಡಿಸುವಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವ ಮೂಲಕ ಮೂರು ವಿಶ್ವ ದಾಖಲೆ ನಿರ್ಮಿಸಿ ರಾಕ್‌ಲೈನ್‌ ವೆಂಕಟೇಶ್ ಅವರ ಕುಟುಂಬಕ್ಕೆ ಹೆಮ್ಮೆಯನ್ನು ತಂದಿದ್ದಾರೆ.

ಮೊಮ್ಮಗನ ಈ ಅಪರೂಪದ ಸಾಧನೆಯನ್ನು ಸಂಭ್ರಮಿಸಲು ಭಾನುವಾರ (ಮಾರ್ಚ್ 15) ಬೆಂಗಳೂರಿನ ದಿ ಕಾನ್ರಾಡ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಇದರಲ್ಲಿ ಅವರ ಪುತ್ರ ಯತೀಶ್ ವೆಂಕಟೇಶ್ ಸೇರಿದಂತೆ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ ಮೊಮ್ಮಗನ ಸಾಧನೆಯ ಬಗ್ಗೆ ರಾಕ್‌ಲೈನ್ ವೆಂಕಟೇಶ್ ಹೆಮ್ಮೆಯ ಮಾತುಗಳನ್ನು ಹಂಚಿಕೊಂಡರು.

ಸಿನಿಮಾದಿಂದ ಹೊರಗಿನ ಸಾಧನೆ

ಈ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ತಮ್ಮ ಮೊಮ್ಮಗನ ವಿಶಿಷ್ಠ ಸಾಧನೆ ಬಗ್ಗೆ ಮಾತಾಡಿದ್ದಾರೆ. "ನಾವು ಸದಾ ಸಿನಿಮಾಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿರುತ್ತೇವೆ. ಹಾಗೇ ಸಿನಿಮಾ ಕಾರ್ಯಕ್ರಮಗಳಲ್ಲೇ ಕಾಣಿಸಿಕೊಳ್ಳುವುದು ಹೆಚ್ಚು. ಆದರೆ, ಈ ಬಾರಿ ಸಿನಿಮಾ ಹೊರತುಪಡಿಸಿ, ನಮ್ಮ ಕುಟುಂಬದ ಬಗ್ಗೆ ಮಾತಾಡುವುದಕ್ಕೆ ಬಂದಿದ್ದೇವೆ. ನನ್ನ ಮೊಮ್ಮಗ ಶಿವತೇಜನ ಸಾಧನೆ ಬಗ್ಗೆ ಹೇಳಲು ನಿಮ್ಮ ಮುಂದೆ ಬಂದಿರುವುದು ನಮಗೆ ಅಪಾರ ಹೆಮ್ಮೆಯ ಸಂಗತಿ. ಇಂದಿನ ಮಕ್ಕಳು ಹೆಚ್ಚಾಗಿ ಟಿವಿ, ಮೊಬೈಲ್‌ಗಳಲ್ಲಿ ಕಾಲ ಕಳೆಯುವುದನ್ನು ನೋಡುತ್ತೇವೆ. ಅದು ನಮಗೆ ಅಷ್ಟಾಗಿ ಇಷ್ಟವಾಗದ ವಿಷಯ. ಆದರೆ, ಅದರ ನಡುವೆಯೂ ನಮ್ಮ ಮುಂದಿನ ಪೀಳಿಗೆ ಇಂತಹ ವಿಭಿನ್ನ ಸಾಧನೆ ಮಾಡಿರುವುದು ಖುಷಿ ತಂದಿದೆ. ಈ ಸಾಧನೆ ನಮ್ಮ ಕುಟುಂಬಕ್ಕೆ ಒಂದು ಕಿರೀಟವಿದ್ದಂತೆ" ಎಂದು ರಾಕ್‌ಲೈನ್‌ ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮಗನ ಸಾಧನೆಗೆ ಪೋಷಕರ ಸಾಥ್

ಮಗನ ಸಾಧನೆಯ ಬಗ್ಗೆ ತಂದೆ ಯತೀಶ್ ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. "ಮಕ್ಕಳಲ್ಲಿರುವ ಪ್ರತಿಭೆ ಏನು ಎಂಬುದನ್ನು ಪೋಷಕರು ಮೊದಲೇ ಗಮನಿಸಬೇಕು. ಅದರ ಆಧಾರದ ಮೇಲೆ ಅವರಿಗೆ ಬೇಕಾದ ಬೆಂಬಲ ನೀಡಬೇಕು. ಮಗನ ಈ ವಿಶೇಷ ರೂಬಿಕ್ಸ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಅವನ ತಾಯಿ. ನಾನು ತಂದೆಯಾಗಿ ಅವನಿಗೆ ಬೇಕಾದ ಸೌಲಭ್ಯ ಮತ್ತು ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದೇನೆ ಅಷ್ಟೆ" ಎಂದಿದ್ದಾರೆ.

ಶಿವತೇಜ ಅವರ ಅಮ್ಮ ಕೂಡ ಖುಷಿ ವ್ಯಕ್ತ ಪಡಿಸಿದ್ದಾರೆ. "ನಮ್ಮ ಕುಟುಂಬದಲ್ಲಿ ರೂಬಿಕ್ಸ್ ಕ್ಯೂಬ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಇದೇ ಮೊದಲು. ಶಿವತೇಜ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರೂಬಿಕ್ಸ್ ಕ್ಯೂಬ್ ಅಭ್ಯಾಸ ಮಾಡುತ್ತಿದ್ದಾನೆ. ಅದರ ಎಲ್ಲಾ ಕಠಿಣ ಹಂತಗಳನ್ನು ಯಶಸ್ವಿಯಾಗಿ ಮುಗಿಸಿ, ಈಗ ಈ ದಾಖಲೆ ಬರೆದಿದ್ದಾನೆ" ಎಂದು ಮಗನ ಶ್ರಮವನ್ನು ಶ್ಲಾಘಿಸಿದ್ದಾರೆ.

ಶಿವತೇಜನ ಸಾಧನೆ

ರಾಕ್‌ಲೈನ್ ವೆಂಕಟೇಶ್ ಮೊಮ್ಮಗ ಶಿವತೇಜ ಯತೀಶ್ ಅತಿ ಹೆಚ್ಚು ಬಾರಿ ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್‌ಗಳನ್ನು (Megaminx Rubik's Cubes) ಬಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 14 ವರ್ಷ 9 ತಿಂಗಳ ವಯಸ್ಸಿನಲ್ಲಿ, 1 ಗಂಟೆ, 27 ನಿಮಿಷ, 12 ಸೆಕೆಂಡ್ ಮತ್ತು 30 ಮಿಲಿಸೆಕೆಂಡ್‌ಗಳಲ್ಲಿ ಒಟ್ಟು 21 ಬಾರಿ ಮೆಗಾಮಿಂಕ್ಸ್ ಕ್ಯೂಬ್‌ಗಳನ್ನು ಬಿಡಿಸಿ ಈ ಸಾಧನೆ ಮಾಡಿದ್ದಾರೆ. ರಾಜರಾಜೇಶ್ವರಿ ನಗರದ ಶಾಸಕ ಶ್ರೀ ಮುನಿರತ್ನ ಅವರ ಮೊಮ್ಮಗನೂ ಆಗಿರುವ ಶಿವತೇಜ, ತಮ್ಮ ಈ ವಿಶಿಷ್ಟ ಕೌಶಲ್ಯದ ಮೂಲಕ ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದಾರೆ.

More from Filmibeat

English summary
Producer Rockline Venkatesh Grand son Shivateja Y create world record in rubik's cube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X