ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ 'ಒಡೆಯ' ನಿರ್ಮಾಪಕ ಸಂದೇಶ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಒಡೆಯ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಕ್ಷಮೆ ಕೇಳಿದ್ದಾರೆ. ಡಿ-ಬಾಸ್ ಅಭಿಮಾನಿಗಳಿಗೆ ಕೊಟ್ಟ ಮಾತನ್ನ ತಪ್ಪಿದ್ದಕ್ಕಾಗಿ ಕ್ಷಮಿಸಿ ಎಂದು ವಿನಂತಿಸಿಕೊಂಡಿದ್ದಾರೆ.
ವಿಷಯ ಏನಪ್ಪಾ ಅಂದ್ರೆ, ವಿಜಯದಶಮಿ ಹಬ್ಬದ ಪ್ರಯುಕ್ತ ಒಡೆಯ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದರು. ಈ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಬಕಪಕ್ಷಿಗಳಂತೆ ಕಾದು ಕುಂತಿದ್ದರು.
ಆದರೆ, ದಿನ ಮುಗಿದರೂ ಮೋಷನ್ ಪೋಸ್ಟರ್ ಮಾತ್ರ ಬರಲಿಲ್ಲ. ಇದು ಸಹಜವಾಗಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕ ಸಂದೇಶ್ ನಾಗರಾಜ್ ''ತಾಂತ್ರಿಕ ಕಾರಣದಿಂದ ಪೋಸ್ಟರ್ ರಿಲೀಸ್ ಮಾಡಲು ಸಾಧ್ಯವಾಗಿಲ್ಲ'' ಎಂದು ತಿಳಿಸಿದ್ದಾರೆ.
ನಿರ್ಮಾಪಕರ ಬೆನ್ನು ತಟ್ಟಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ದಾಸ
.
''ಎಲ್ಲರಿಗೂ ವಿಶೇಷ ಸೂಚನೆ....
ವಿಜಯದಶಮಿ ಪ್ರಯುಕ್ತ ಬಿಡುಗಡೆಯಾಗಬೇಕಿದ್ದ ನಮ್ಮ ಡಿ ಬಾಸ್ ರವರ 'ಒಡೆಯ' ಚಿತ್ರದ ಮೋಶನ್ ಪೋಸ್ಟರ್ ಅನ್ನು ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮುಂದೂಡಲಾಗಿದೆ. ಇಷ್ಟರಲ್ಲೇ ನಿಮಗೆ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುವುದು
ಕ್ಷಮೆ ಇರಲಿ ಇಂತಿ ನಿಮ್ಮ ಸಂದೇಶ್'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸಂದೇಶ್ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಬೇಸರದ ಜೊತೆ ಕೋಪವನ್ನ ವ್ಯಕ್ತಪಡಿಸಿದ್ದಾರೆ. 'ದಯವಿಟ್ಟು ತಡವಾಗಿಯೇ ರಿಲೀಸ್ ಮಾಡಿ, ಆದರೆ ದಿನಾಂಕವನ್ನ ಈಗಲೇ ಹೇಳಿ' ಎಂದು ಕೆಲವರು ಕೇಳುತ್ತಿದ್ದಾರೆ. 'ನೀವು ಸಿನಿಮಾನೂ ರಿಲೀಸ್ ಮಾಡಲ್ಲ ಬಿಡಿ' ಎಂದು ಗರಂ ಆಗಿದ್ದವರು ಇದ್ದಾರೆ.
ಸದ್ಯಕ್ಕೆ ಒಡೆಯ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ದಿನಾಂಕ ಯಾವಾಗ ಎಂಬುದು ಗೊತ್ತಿಲ್ಲ. ಅಂದ್ಹಾಗೆ, ಒಡೆಯ ಸಿನಿಮಾ ತಮಿಳಿನ ಸೂಪರ್ ಹಿಟ್ 'ವೀರಂ' ಚಿತ್ರದ ರೀಮೇಕ್. ಎಂ.ಡಿ ಶ್ರೀಧರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











