ನಿರ್ಮಾಪಕರ ಬೆನ್ನು ತಟ್ಟಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ದಾಸ

Recommended Video

ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ದರ್ಶನ್ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದ ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದ್ದಾರೆ. ಕುರುಕ್ಷೇತ್ರ ಸಿನಿಮಾವನ್ನ ಯಶಸ್ಸುಗೊಳಿಸಿದ ಎಲ್ಲರಿಗೂ ಡಿ-ಬಾಸ್ ಥ್ಯಾಂಕ್ಸ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್ ''#ಕುರುಕ್ಷೇತ್ರ ಚಿತ್ರಕ್ಕೆ 50 ದಿನಗಳ ಸಂಭ್ರಮ. ಈಗಿನ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ಮಾಡಬೇಕೆಂದು ಪಣ ತೊಟ್ಟ ನಿರ್ಮಾಪಕರಿಗೆ ಅವರ ಆಸೆಗೆ ಬೆನ್ನೆಲುಬಾಗಿ ನಿಂತ ಇಡೀ ಚಿತ್ರತಂಡಕ್ಕೆ ಕೊನೆಯದಾಗಿ ಪ್ರೀತಿಯಿಂದ ಚಿತ್ರಮಂದಿರಗಳತ್ತ ಧಾವಿಸಿ ಆಶೀರ್ವದಿಸಿದ ಅಭಿಮಾನಿಗಳು ಕರ್ನಾಟಕ ಜನತೆಗೆ ನನ್ನ ಹೃದಯಪೂರ್ವಕ ವಂದನೆಗಳು ನಿಮ್ಮ ದಾಸ ದರ್ಶನ್'' ಎಂದಿದ್ದಾರೆ.

ಆಗಸ್ಟ್ 9 ರಂದು ಬಿಡುಗಡೆಯಾಗಿದ್ದ ಕುರುಕ್ಷೇತ್ರ ಸಿನಿಮಾ ಈಗ 50ನೇ ದಿನ ಪೂರೈಸಿದೆ. ಈ ಸಂಭ್ರಮವನ್ನ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಇದಕ್ಕೀಗ ಡಿ ಬಾಸ್ ಕೂಡ ಸಾಥ್ ಕೊಟ್ಟಿದ್ದು, ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.

Darshan Said Thanks To Fans

ದುರ್ಯೋಧನನ ಪಾತ್ರದಲ್ಲಿ ದರ್ಶನ್ ನಟಿಸಿದ್ದರು. ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್, ಅರ್ಜುನ ಪಾತ್ರದಲ್ಲಿ ಅರ್ಜುನ್ ಸರ್ಜಾ, ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಕುಮಾರ್, ಭೀಷ್ಮನ ಪಾತ್ರದಲ್ಲಿ ಅಂಬರೀಶ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

ನಿರ್ಮಾಪಕ ಮುನಿರತ್ನ ಅವರು ಈ ಚಿತ್ರವನ್ನ ನಿರ್ಮಿಸಿದ್ದು, ದೊಡ್ಡ ಬಜೆಟ್ ಹಾಕಿದ್ದರು. ಹಾಕಿದ ಬಂಡವಾಳಕ್ಕೆ ಲಾಭವೂ ಆಗಿದೆ ಎನ್ನಲಾಗಿದೆ. ಕುರುಕ್ಷೇತ್ರ ಸಿನಿಮಾ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗಿತ್ತು. ಒಟ್ಟಾರೆ ನೂರು ಕೋಟಿ ಗಳಿಕೆ ಕಂಡಿದೆ ಎಂದು ದರ್ಶನ್ ಅಭಿಮಾನಿಗಳು ಮತ್ತು ಸ್ವತಃ ದರ್ಶನ್ ಸಂಭ್ರಮಿಸಿದ್ದರು.

More from Filmibeat

English summary
Challenging star darshan said thanks to his fans, because of kurukshetra success.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X