ಬರಲಿದೆ ಮತ್ತೊಂದು 'ಪ್ರೀಮಿಯರ್ ಪದ್ಮಿನಿ': ಎರಡನೆಯ ಭಾಗಕ್ಕೆ ಸಿದ್ಧತೆ

ಜಗ್ಗೇಶ್, ಪ್ರಮೋದ್, ಸುಧಾರಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಯಶಸ್ಸಿನ ಬಳಿಕ ನಿರ್ಮಾಪಕಿ ಶ್ರುತಿ ನಾಯ್ಡು ಅದರ ಮುಂದುವರಿದ ಅಧ್ಯಾಯಕ್ಕೆ ಕೈ ಹಾಕಿದ್ದಾರೆ. ರಮೇಶ್ ಇಂದಿರಾ ನಿರ್ದೇಶನದ ಈ ಚಿತ್ರ ಸಾಂಸಾರಿಕ ಜೀವನದ ಮನಸ್ತಾಪ, ಒಂಟಿತನ, ಸಂಬಂಧಗಳ ಕಥೆಯನ್ನು ಪ್ರೀಮಿಯರ್ ಪದ್ಮಿನಿ ಕಾರ್‌ಅನ್ನು ರೂಪಕವಾಗಿರಿಸಿಕೊಂಡು ಹೇಳಿತ್ತು.

Recommended Video

ಶೃತಿ ನಾಯ್ಡುಗೆ ಶುಭ ಕೋರಿದ ಚಾಲೆಂಜಿಂಗ್ ಸ್ಟಾರ್ | Shrithi Naidu | Darshan | Mysuru Mirchi

50 ವರ್ಷ ದಾಟಿದ ವ್ಯಕ್ತಿಯೊಬ್ಬನಿಂದ ಪತ್ನಿ ದೂರವಾದಾಗ ಆತ ತನ್ನ ಬದುಕಿನ ಖುಷಿಯನ್ನು ಕಾರ್‌ನ ಚಾಲಕನೊಂದಿಗೆ ಕಂಡುಕೊಳ್ಳುವುದನ್ನು ನವಿರಾಗಿ ಹೇಳಲಾಗಿತ್ತು. ನಟಿ ಮಧು, ಜಗ್ಗೇಶ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದರು. ಚಿತ್ರಕಥೆಯಲ್ಲಿನ ದೃಶ್ಯವೊಂದನ್ನು ಪ್ರಬಂಧವೊಂದರಿಂದ ಕದಿಯಲಾಗಿದೆ ಎಂಬ ಆರೋಪ ಕೇಳಿಬಂದ ವಿವಾದದ ಹೊರತಾಗಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂದೆ ಓದಿ...

ಯಶಸ್ಸು ಕಂಡಿದ್ದ ಚಿತ್ರ

ಯಶಸ್ಸು ಕಂಡಿದ್ದ ಚಿತ್ರ

ವಿವೇಕ್ ಸಿಂಹ, ಹಿತಾ ಚಂದ್ರಶೇಖರ್, ಸುಧಾರಾಣಿ, ದತ್ತಣ್ಣ, ಭಾರ್ಗವಿ ನಾರಾಯಣ್ ಮುಂತಾದವರು ನಟಿಸಿದ್ದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. 2019ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ ಚಿತ್ರ, ಬಾಕ್ಸಾಫೀಸ್‌ನಲ್ಲಿಯೂ ಯಶಸ್ಸು ಕಂಡಿತ್ತು.

ಎರಡನೆಯ ಭಾಗಕ್ಕೆ ಸಿದ್ಧತೆ

ಎರಡನೆಯ ಭಾಗಕ್ಕೆ ಸಿದ್ಧತೆ

ಜನರಿಂದ ದೊರೆತ ಉತ್ತಮ ಪ್ರತಿಕ್ರಿಯೆ ಕಂಡು ಖುಷಿಯಾಗಿರುವ ಚಿತ್ರತಂಡ, 'ಪ್ರೀಮಿಯರ್ ಪದ್ಮಿನಿ'ಯ ಮುಂದುವರಿಯ ಭಾಗವನ್ನು ಕೂಡ ತಯಾರಿಸುತ್ತಿದೆ. ಈಗಾಗಲೇ ನಿರ್ದೇಶಕ ರಮೇಶ್ ಇಂದಿರಾ ಕಥೆಯ ಮೇಲಿನ ಕೆಲಸ ಪೂರ್ಣಗೊಳಿಸಿದ್ದಾರಂತೆ.

ಲಾಕ್‌ ಡೌನ್ ಬಳಿ ಸೀಕ್ವೆಲ್ ಆರಂಭ

ಲಾಕ್‌ ಡೌನ್ ಬಳಿ ಸೀಕ್ವೆಲ್ ಆರಂಭ

ಲಾಕ್ ಡೌನ್ ನಿರ್ಬಂಧಗಳು ಇರುವ ಕಾರಣದಿಂದ ಇನ್ನೂ ಚಿತ್ರೀಕರಣದ ಕಾರ್ಯಗಳು ಶುರುವಾಗಿಲ್ಲ. ಲಾಕ್ ಡೌನ್ ಮುಗಿದ ಕೂಡಲೇ 'ಪ್ರೀಮಿಯರ್ ಪದ್ಮಿನಿ'ಯ ಸೀಕ್ವೆಲ್ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಾತ್ರಧಾರಿಗಳು ವಾಪಸ್

ಪಾತ್ರಧಾರಿಗಳು ವಾಪಸ್

ಪ್ರೀಮಿಯರ್ ಪದ್ಮಿನಿ ಕಾರ್ ಮಾಲೀಕ ವಿನಾಯಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಗ್ಗೇಶ್, ಕಾರ್ ಚಾಲಕ ನಂಜುಂಡಿಯಾಗಿ ನಟಿಸಿದ್ದ ಪ್ರಮೋದ್ ಸೇರಿದಂತೆ ತಾರಾಬಳಗದ ಅನೇಕರು ಈ ಚಿತ್ರದಲ್ಲಿಯೂ ಭಾಗಿಯಾಗಲಿದ್ದಾರೆ.

ಎರಡನೆಯ ಭಾಗದಲ್ಲಿ ಹಾಸ್ಯಕ್ಕೆ ಒತ್ತು

ಎರಡನೆಯ ಭಾಗದಲ್ಲಿ ಹಾಸ್ಯಕ್ಕೆ ಒತ್ತು

ಮೊದಲ ಭಾಗದಲ್ಲಿ ಜಗ್ಗೇಶ್ ಅವರ ಡೈಲಾಗ್‌ನಲ್ಲಿ ನಗುವಿನ ಅಂಶಗಳಿದ್ದವು. ಆದರೆ ಕಥೆ ಗಂಭೀರ ಹಾಗೂ ಭಾವನಾತ್ಮಕವಾಗಿತ್ತು. ಎರಡನೆಯ ಆವೃತ್ತಿಯಲ್ಲಿ ನಗುವಿನ ಹೂರಣ ಬಡಿಸಲು ಚಿತ್ರತಂಡ ಉದ್ದೇಶಿಸಿದೆ. ಕೆಲವು ಹೊಸ ಪಾತ್ರಗಳು ಇದರಲ್ಲಿ ಸೇರಿಕೊಳ್ಳಲಿದ್ದು, ಅವರ ಆಯ್ಕೆ ಇನ್ನೂ ನಡೆಯಬೇಕಿದೆ.

More from Filmibeat

English summary
Ramesh Indira directed, Shruti Naidu's production movie Premiere Padmini sequel will start soon after lockdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X