"ನನಗೆ ದರ್ಶನ್ ಅವರೇನು ಶತ್ರುವಲ್ಲ"; ನಿರ್ಮಾಪಕ ಉಮಾಪತಿ ಹೇಳಿಕೆಯಲ್ಲೇನಿದು ಆಶ್ವರ್ಯ?
ರೇಣುಕಾಸ್ವಾಮಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ಕ್ರೌರ್ಯದ ಒಂದೊಂದೇ ವಿಷಯಗಳು ಹೊರಬೀಳುತ್ತಿವೆ. ರೇಣುಕಾಸ್ವಾಮಿಯ ಕೊನೆಯ ಕ್ಷಣದ ಫೋಟೋಗಳು ಮಾಧ್ಯಮಗಳಲ್ಲಿ ಹಲ್‌ಚಲ್ ಎಬ್ಬಿಸಿದೆ. ಈ ಬೆನಲ್ಲೇ ದರ್ಶನ್ ಬಗ್ಗೆ ಮತ್ತೆ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾದ ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕ ಉಮಾಪತಿ ಭಾಗವಹಿಸಿದ್ದರು. ಈ ವೇಳೆ ದರ್ಶನ್ ಹಾಗೂ ರೇಣುಕಾಸ್ವಾಮಿ ಕೇಸ್ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಉಮಾಪತಿ ತಮ್ಮದೇ ಸ್ಟೈಲ್‌ನಲ್ಲಿ ದರ್ಶನ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಹಾಗೇ ರೇಣುಕಾಸ್ವಾಮಿ ಹಾಗೂ ದರ್ಶನ್ ಜೊತೆ ಆರೋಪಿಗಳಾಗಿ ಜೈಲು ಸೇರಿರುವವರ ಕುಟುಂಬದ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಾರಿ ಯಾಕೋ ದರ್ಶನ್ ಬಗ್ಗೆ ನಿರ್ಮಾಪಕ ಉಮಾಪತಿ ಸಾಫ್ಟ್ ಆದಂತೆ ಕಾಣುತ್ತಿತ್ತು. ಉಮಾಪತಿ ಶ್ರೀನಿವಾಸ್ ಗೌಡ ಈ ಹಿಂದೆ ಕೊಟ್ಟರುವ ಹೇಳಿಕೆಗಳಿಗೂ ಈಗ ಕೊಡುತ್ತಿರುವ ಹೇಳಿಕೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ದರ್ಶನ್ ಬಗ್ಗೆ ಉಮಾಪತಿ ಈ ಹಿಂದೆ ವಿರೋಧಿಸಿ ಮಾತಾಡಿದಂತೆ ಯಾಕೋ ಈ ಬಾರಿ ಮಾತಾಡಿಲ್ಲ. ಹಾಗೇ ರೇಣುಕಾಸ್ವಾಮಿ ಕೃತ್ಯದ ಬಗ್ಗೆವನ್ನೂ ಉಮಾಪತಿ ವಿರೋಧಿಸಿದ್ದಾರೆ.
ಎಷ್ಟು ಜೀವ ಹೋಯ್ತು?
ದರ್ಶನ್ ಇಂತಹ ದೊಡ್ಡ ಸಂಕಷ್ಟವನ್ನು ಎದುರು ಹಾಕಿಕೊಳ್ಳದೆ ಇರುವಂತೆ ತಡೆಯಬಹುದಿತ್ತೆಂದು ನಿರ್ಮಾಪಕ ಉಮಾಪತಿ ಅಭಿಪ್ರಾಯ ಪಟ್ಟಿದ್ದಾರೆ. "ಸರ್ ಒಂದು ಅರ್ಥ ಮಾಡಿಕೊಳ್ಳಬೇಕು. ಆತ ಅಶ್ಲೀಲವಾಗಿ ಕಾಮೆಂಟ್ ಮಾಡಿದ, ಮೆಸೇಜ್ ಕಳಿದ ಅದೂ ತಪ್ಪೇ. ಎರಡು ರೂಪಾಯಿ ಖರ್ಚು ಆಗಿರೋದು ಅಷ್ಟೇ. ಎರಡು ರೂಪಾಯಿ ಶೀಟ್ ತೆಗೆದುಕೊಂಡು ಒಂದು ಕಂಪ್ಲೆಂಟ್ ಬರೆದು ಕೊಟ್ಟಿದ್ದಿದ್ದರೆ, ಬುದ್ಧಿ ಕಲಿಸೋರು ಕಲಿಸಿರೋರು. ಈಗ ನೋಡಿ ಒಂದು ಜೀವದ ಹಿಂದೆ ಎಷ್ಟು ಜೀವ ಹೋಯ್ತು. 17 ಜನ ಒಳಗೆ ಹೋಗಿರೋರು ಬರಲೇಬೇಕು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ಷಮೆ ಅನ್ನೋದು ಇದೆ. ನಾಳೆ ದಿನ ಹೊರಗ ಬರಲೇಬೇಕು. ಮಾದರಿಯಾಗಿ ಬದುಕುತ್ತಾರೆ ಅನ್ನೋದು ನಂಬಿಕೆಯಿದೆ" ಎಂದು ಉಮಾಪತಿ ಹೇಳಿದ್ದಾರೆ.
ಹೋದ ಜೀವಗಳು ವಾಪಾಸ್ ಬರುತ್ತಾ?
ಇದೇ ವೇಳೆ ರೇಣುಕಾಸ್ವಾಮಿಯ ಒಂದು ಹತ್ಯೆಯಿಂದ ಎಷ್ಟು ಜೀವಗಳು ಹೋಯ್ತು ಎಂದು ಮರುಕ ವ್ಯಕ್ತಪಡಿಸಿದ್ದಾರೆ. "ಅನುಕುಮಾರ್ ತಂದೆ ತೀರಿಕೊಂಡರು. ರಾಘವೇಂದ್ರ ಅವರ ತಾಯಿ ತೀರಿಕೊಂಡರು. ನನಗೆ ಬಂದಿರೋ ಮಾಹಿತಿ ಪ್ರಕಾರ, ಇನ್ನೊಬ್ಬರ ತಾಯಿನೋ ತಂದೆನೋ ಸೀರಿಯಸ್ ಆಗಿದ್ದಾರೆ ಅಂತಿದೆ. ತಪ್ಪು ಮಾಡಿದ್ದೀವಿ ನಮಗೆ ಕ್ಷಮಾಪಣೆ ಸಿಗುತ್ತೆ. ತಪ್ಪು ಮಾಡಿಲ್ವಾ? ಅಲ್ಲಿಂದ ಹೊರಗೆ ಬರುತ್ತಾರೆ. ರೇಣುಕಾಸ್ವಾಮಿ ಜೀವ ವಾಪಸ್ ಬರೋದಿಲ್ಲ. ಅನುಕುಮಾರ್ ತಂದೆ ವಾಪಾಸ್ ಬರೋದಿಲ್ಲ. ರಾಘವೇಂದ್ರ ಅವರ ತಾಯಿ ವಾಪಾಸ್ ಬರೋದಿಲ್ಲ. ಅಲ್ಲಿಗೆ ಮೂರು ಜೀವವನ್ನು ವಾಪಾಸ್ ತರೋಕೆ ಆಗಲ್ಲ." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲಿ ಧ್ವನಿ ಎತ್ತಬೇಕೋ ಅಲ್ಲಿ ಎತ್ತಿದ್ದೇನೆ
ಇದೇ ಸಂದರ್ಭದಲ್ಲಿ ದರ್ಶನ್ ವಿರುದ್ಧ ಧ್ವನಿ ಎತ್ತಿದ್ದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. "ನನ್ನದು ಇಷ್ಟೇ.. ನಾನು ಎಲ್ಲಿ ಧ್ವನಿ ಎತ್ತಬೇಕಿತ್ತೋ ಅಲ್ಲಿ ಎತ್ತಿದ್ದೇನೆ. ನನ್ನ ಲಿಮಿಟ್ ಎಲ್ಲಿಯ ತನಕ ಇತ್ತು ಅಲ್ಲಿಗೆ ಹೋಗಿ ನಿಂತಿದ್ದೀನಿ. ಯಾರಿಗೆ ಅನ್ಯಾಯ ಆಗಿದೆ. ಆ ಚಾಮುಂಡೇಶ್ವರಿ ತಾಯಿ ಕಾಪಾಡಲಿ." ಎಂದು ಉಮಾಪತಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ದರ್ಶನ್ ನನಗೆ ಶತ್ರುವಲ್ಲ"
"ನನಗೆ ದರ್ಶನ್ ಅವರೇನು ಶತ್ರುವಲ್ಲ. ನನ್ನ ಒಳ್ಳೆಯ ಸ್ನೇಹಿತರು ಹಾಗೂ ನನ್ನ ಬ್ಯಾನರ್‌ಗೆ ಕೀರ್ತಿಯನ್ನು ತಂದುಕೊಟ್ಟವರು. ಕಾರಣಾಂತರಗಳಿಂದ ನಮ್ಮ ಅವರ ನಡುವೆ ಭಿನ್ನಾಬಿಪ್ರಾಯಗಳು ಬಂತು. ತಾಯಿ ಚಾಮುಂಡೇಶ್ವರಿ ಅವರ ಕುಟುಂಬಕ್ಕೆ ಇನ್ನೂ ಹೆಚ್ಚಿನ ಶಕ್ತಿ ಕೊಟ್ಟು, ನ್ಯಾಯಾಂಗದ ದೃಷ್ಠಿಯಲ್ಲಿ ಹೋರಾಟ ಮಾಡಲಿ. ಕಳೆದುಕೊಂಡಿರುವ ಕುಟುಂಬಕ್ಕೂ ನ್ಯಾಯ ಸಿಗಬೇಕು. ಇವರಿಗೂ ಅದೇ ಕ್ಷಮಾಪಣೆ ಸಿಗಬೇಕೋ ಸಿಗಲಿ ಅಂತ ಬಯಸುತ್ತೇನೆ." ಎಂದಿದ್ದಾರೆ.


Click it and Unblock the Notifications











