'ಭೈರತಿ ರಣಗಲ್' ಹಿಟ್; ಈ ನಿರ್ಮಾಪಕನ ಜೊತೆ ನರ್ತನ್ ಮುಂದಿನ ಸಿನಿಮಾ? ಉಮಾಪತಿ ಹೇಳಿದ್ದೇನು?

'ಮಫ್ತಿ' ತೆರೆಕಂಡ 7 ವರ್ಷಗಳ ಬಳಿಕ 'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗಿದೆ. ನಿರ್ದೇಶಕ ನರ್ತನ್ ಎರಡನೇ ಸಿನಿಮಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಬೆನ್ನಲ್ಲೇ ನರ್ತನ್ ಮುಂದಿನ ಸಿನಿಮಾ ಯಾವುದು? ಯಾರಿಗೆ ಸಿನಿಮಾ ಮಾಡುತ್ತಾರೆ ಅನ್ನುವ ಪ್ರಶ್ನೆಗಳು ಕೂಡ ಸಿನಿಪ್ರಿಯರಲ್ಲಿ ಹುಟ್ಟಿಕೊಂಡಿದೆ. ಇದೇ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಕೊಟ್ಟ ಪ್ರತಿಕ್ರಿಯೆ ಬೇರೆ ಲೆಕ್ಕಾಚಾರವನ್ನೇ ಹಾಕಿದೆ.

'ಭೈರತಿ ರಣಗಲ್' ಸಿನಿಮಾ ಬಳಿಕ ನಿರ್ದೇಶಕ ನರ್ತನ್‌ಗೆ ಬೇಡಿಕೆ ಹೆಚ್ಚಾಗಿದೆ. ಕನ್ನಡದ ಮಾಸ್ ಹೀರೊಗಳು ನರ್ತನ್ ಜೊತೆ ಸಿನಿಮಾ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ ಅನ್ನುವ ಮಾತು ಹರಿದಾಡುತ್ತಿದೆ. ಈಗಾಗಲೇ ಶಿವಣ್ಣ ಕೂಡ 'ಮಫ್ತಿ 2'ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಗ್ಯಾಪ್‌ನಲ್ಲಿ 'ರಾಬರ್ಟ್' ಸಿನಿಮಾದ ನಿರ್ಮಾಪಕ ಉಮಾಪತಿ ಎಂಟ್ರಿಯಾಗಿದೆ.

Producer Umapathy Gowda and Narthan are planning for the next movie after Bhairathi Ranagal s success

ಉಮಾಪತಿ ಇತ್ತೀಚೆಗೆ ಹೋಟೆಲ್ ಕಾರ್ಯಕ್ರಮವೊಂದರ ಉದ್ಘಾಟನೆಗೆ ಹೋಗಿದ್ದರು. ಈ ವೇಳೆ ಶಿವಣ್ಣನೊಂದಿಗೆ ಸಿನಿಮಾ ಮಾಡುವ ಬಗ್ಗೆ ಪ್ರಶ್ನೆ ಹಾಕಲಾಗಿತ್ತು. ಆ ವೇಳೆ ಶಿವಣ್ಣನ ಸಿನಿಮಾ ಬಗ್ಗೆನೂ ಮಾಹಿತಿ ನೀಡಿದ್ದಾರೆ. ಜೊತೆಗೆ ನರ್ತನ್ ಜೊತೆನೂ ಮಾತುಕಥೆ ನಡೆಯುತ್ತಿರುವುದಾಗಿ ಹೇಳಿದ್ದಾರೆ. ಅಸಲಿಗೆ ಇವರಿಬ್ಬರ ನಡುವೆ ನಡೆದ ಮಾತುಕಥೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ನಿರ್ಮಾಪಕ ಉಮಾಪತಿ ಈ ಹಿಂದೇನೆ ಶಿವಣ್ಣ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಈಗ ಮತ್ತೆ ಅದನ್ನೇ ರಿಪೀಟ್ ಮಾಡಿದ್ದಾರೆ. ಇದೇ ವೇಳೆ ಗಾತ್ರ ದೊಡ್ಡದಲ್ಲ ಗುಣ ದೊಡ್ಡದು ಎಂದು ಪ್ರತಿಕ್ರಿಯಿಸಿದ್ದಾರೆ. "ನನಗೆ ಶಿವಣ್ಣ ಅವರ ಅಂದರೆ ಬಹಳ ಇಷ್ಟ. ಎಲ್ಲಾ ಕಡೆ ಏನು ಹೇಳುತ್ತಾರೆ. ಕ್ವಾಂಟಿಟಿ ಮುಖ್ಯ ಅನ್ನುತ್ತಾರೆ. ನನ್ನ ಪ್ರಕಾರ ಕ್ವಾಲಿಟಿ ಮುಖ್ಯ. ಗಾತ್ರ ದೊಡ್ಡದಲ್ಲ. ಗುಣ ದೊಡ್ಡದಾಗುತ್ತೆ. ಶಿವಣ್ಣನಿಗೆ 100 ಪರ್ಸೆಂಟ್ ಸಿನಿಮಾ ಮಾಡಬೇಕು. ಯಾಕಂದರೆ, ಪುನೀತ್‌ ಸರ್‌ಗೆ ಸಿನಿಮಾ ಮಾಡಬೇಕಿತ್ತು. ಆದರೆ, ನಮ್ಮ ದುರಾದೃಷ್ಟನೋ ಏನೋ. ಅವರು ನಮ್ಮೊಂದಿಗೆ ಇಲ್ಲ. ಅದರ ಬದಲು ಶಿವಣ್ಣ ಸರ್‌ಗೆ ಸಿನಿಮಾ ಮಾಡಲೇಬೇಕು." ಎಂದು ಉಮಾಪತಿ ಹೇಳಿದ್ದಾರೆ.

ಹಾಗೇ ಶಿವಣ್ಣನೊಂದಿಗೆ ಯಾಕೆ ಸಿನಿಮಾ ಮಾಡಬೇಕು? ಅದರ ಅಡ್ವಾಂಟೇಜ್ ಏನು? ಅನ್ನೋದನ್ನು ಹೇಳಿದ್ದಾರೆ. "ಬೇರೆಯವರೆಲ್ಲ ಆಕ್ಟ್ ಮಾಡಬೇಕು, ಸಿಕ್ಸ್ ಪ್ಯಾಕ್ ಮಾಡಬೇಕು, ಕಿರುಚಾಡಬೇಕು, ಲಾಂಗ್ ಹಿಡಿಬೇಕು. ಶಿವಣ್ಣ ಹಾಗಲ್ಲ ಒಂದು ಎಕ್ಸ್‌ಪ್ರೆಷನ್‌ನಲ್ಲಿ ಎಲ್ಲಾ ರೀತಿ ಆಕ್ಟ್‌ ಮಾಡುವಂತಹ ತಾಕತ್ತು ಇರುವಂತಹ ನಟ. ಅವರಿಗೆ ಸಿನಿಮಾ ಮಾಡಿದವರೆ ನಮ್ಮ ಬ್ಯಾನರ್‌ಗೂ ಒಂದು ವಾಲ್ಯೂ ಇರುತ್ತೆ." ಎಂದಿದ್ದಾರೆ.

Producer Umapathy Gowda and Narthan are planning for the next movie after Bhairathi Ranagal s success

ಇದೇ ವೇಳೆ 'ಮಫ್ತಿ' ಹಾಗೂ 'ಭೈರತಿ ರಣಗಲ್' ಎರಡೂ ಸಿನಿಮಾಗಳಿಗೂ ದೊಡ್ಡ ಫ್ಯಾನ್ಸ್. ಈಗಾಗಲೇ ನರ್ತನ್ ಜೊತೆಗೆ ಸಿನಿಮಾ ಮಾಡುವ ಬಗ್ಗೆ ಮಾತುಕಥೆ ನಡೆಯುತ್ತಿದೆ ಎಂದು ಖುಷಿ ವಿಷಯವನ್ನು ಹೇಳಿಕೊಂಡಿದ್ದಾರೆ. "ಮಫ್ತಿ ಸಿನಿಮಾಗೆ ನಾನು ಗ್ರೇಟ್ ಫ್ಯಾನ್. ಭೈರತಿ ರಣಗಲ್‌ಗೂ ಒಂದು ಗ್ರೇಟ್ ಫ್ಯಾನ್. ನರ್ತನ್ ಅವರು ನಮ್ಮ ಬ್ಯಾನರ್‌ಗೆ ಸಿನಿಮಾ ಮಾಡಬೇಕು ಅಂತ ನಾವು ಅವರು ಮಾತುಕಥೆಯನ್ನು ಮಾಡಿದ್ದೇವೆ. ಮಾಸ್ ಸಿನಿಮಾವನ್ನೇ ಮಾಡುತ್ತೇವೆ."

ಇನ್ನು ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್‌ನಲ್ಲೇ ಉಮಾಪತಿ ಸಿನಿಮಾ ಮಾಡುತ್ತಾರೋ? ಇಲ್ಲ ಬೇರೊಬ್ಬ ನಟನಿಗೆ ಸಿನಿಮಾ ಮಾಡುತ್ತಾರೋ ಕುತೂಹಲವಿದೆ. ಆದರೆ, ಶಿವಣ್ಣನ ಕಡೆ ಹೆಚ್ಚು ಒಲವು ಇದ್ದಂತಿದೆ. "ಶಿವಣ್ಣ ಅವರ ಯಾವುದೇ ಸಿನಿಮಾ ನೋಡಿ, ಅವರು ಯಾವುದೇ ಕಾರಣಕ್ಕೂ ಟ್ರಬಲ್ ಮಾಡುವುದಿಲ್ಲ. ಬೇರೆ ಹೀರೋಗಳ ಹಾಗೆ ನನಗೆ ಅದೇ ಬೇಕು. ಇದೇ ಬೇಕು ಅನ್ನುವ ಬುದ್ಧಿ ಇಲ್ಲ. ಒಬ್ಬ ಹೀರೋ ಪ್ರಡ್ಯೂಸ್ ಆದಾಗ ಅವರ ಕಷ್ಟ ಏನು ಅಂತ ಗೊತ್ತಿರುತ್ತೆ. ಅಂತಹವರಿಗೆ ಸಿನಿಮಾ ಮಾಡಿದ್ದಾಗ ನಮಗೂ ಒಂದು ಗೌರವ ಇರುತ್ತೆ." ಎಂದಿದ್ದಾರೆ.

More from Filmibeat

English summary
Producer Umapathy Gowda and Narthan are planning for the next movie after Bhairathi Ranagal's success;
Read more about: umapathy narthan filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X