Exclusive: 'ಸಿಂಧೂರ ಲಕ್ಷ್ಮಣ' ಬಗ್ಗೆ ಉಮಾಪತಿ ಪ್ರತಿಕ್ರಿಯೆ: ಇಬ್ಬರಲ್ಲೊಬ್ಬರು ಹೀರೊ ಎಂದ ನಿರ್ಮಾಪಕ!

'ಸಿಂಧೂರ ಲಕ್ಷ್ಮಣ' ಸ್ಯಾಂಡಲ್‌ವುಡ್ ಕಾತುರದಿಂದ ಕಾದು ಕೂತಿರುವ ಸಿನಿಮಾ. ಈ ಹಿಂದೆ 'ರಾಬರ್ಟ್' ನಿರ್ಮಾಪಕ ಉಮಾಪತಿ ಈ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಅದಕ್ಕೆ ಬೇಕಾಗಿರೋ ಸಿದ್ಧತೆಗಳು ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾದಲ್ಲಿ ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ನಟಿಸೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಈ ವಿಷಯವನ್ನೇ ಫಿಲ್ಮಿ ಬೀಟ್‌ನಲ್ಲಿ ಸುದ್ದಿಯನ್ನು ಬಿತ್ತರಿಸಲಾಗಿತ್ತು. ಈಗ ಡಾಲಿ ನಟಿಸುತ್ತಿರುವ ಬಗ್ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.

'ಸಿಂಧೂರ ಲಕ್ಷ್ಮಣ ಕೆಲಸ ನಡೆಯುತ್ತಿದೆ'

'ಸಿಂಧೂರ ಲಕ್ಷ್ಮಣ ಕೆಲಸ ನಡೆಯುತ್ತಿದೆ'

ಕನ್ನಡ ಸಿನಿಮಾದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಸಿಂಧೂರ ಲಕ್ಷ್ಮಣ' ಟೇಕಾಫ್ ಆಗುವುದಕ್ಕೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಚರಿತ್ರೆಯನ್ನು ತೆರೆಮೇಲೆ ತರುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಫೆಬ್ರವರಿ ಬಳಿಕ ಸೆಟ್ಟೇರುವ ಸಾಧ್ಯತೆಯಿದೆ ಎಂದು ಉಮಾಪತಿ ಫಿಲ್ಮಿ ಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಬ್ಬರಲ್ಲಿ ಒಬ್ಬರು ಸಿನಿಮಾದ ಹೀರೊ

ಇಬ್ಬರಲ್ಲಿ ಒಬ್ಬರು ಸಿನಿಮಾದ ಹೀರೊ

"ಸಿಂಧೂರ ಲಕ್ಷ್ಮಣ ಸಿನಿಮಾ ಬಗ್ಗೆ ಈಗಲೇ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಹೀರೊ ಇದ್ದಾರೆ. ಅವರೊಂದಿಗೆ ಮಾತುಕತೆ ನಡೆದು ಅಡ್ವಾನ್ಸ್ ಕೊಟ್ಟು, ಅವರು ಒಪ್ಪಿಕೊಳ್ಳುವವರೆಗೂ ಏನನ್ನೂ ಹೇಳಲಾರೆ. ಒಮ್ಮೆ ಓಕೆ ಆದ ಕೂಡಲೇ ಅವರ ಹೆಸರನ್ನು ಅನೌನ್ಸ್ ಮಾಡುತ್ತೇನೆ. ಸದ್ಯ ನಾನು ಚುನಾವಣೆ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಈ ಸಿನಿಮಾ ಅಂದಾಜು ಫೆಬ್ರವರಿ ಹೊತ್ತಿಗೆ ಸೆಟ್ಟೇರುವ ಸಾಧ್ಯತೆಯಿದೆ. ಅಲ್ಲಿವರೆಗೂ ಎಲ್ಲವೂ ಸೀಕ್ರೆಟ್ ಆಗಿರುತ್ತೆ." ಎಂದು ನಿರ್ಮಾಪಕ ಉಮಾಪತಿ ಮಾಹಿತಿ ನೀಡಿದ್ದಾರೆ.

'ಧನಂಜಯ್ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ'

'ಧನಂಜಯ್ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ'

ಸಿಂಧೂರ ಲಕ್ಷ್ಮಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಬೇಕಿತ್ತು. ಆದರೆ, ಉಮಾಪತಿ ಹಾಗೂ ದರ್ಶನ್ ನಡುವೆ ಈಗ ಮೊದಲಿನ ಆತ್ಮೀಯತೆ ಇಲ್ಲ. ಹೀಗಾಗಿ ಬೇರೊಬ್ಬ ಹೀರೊ ಹುಡುಕುತ್ತಿರೋದು ಗೊತ್ತೇ ಇತ್ತು. ಇದೇ ವೇಳೆ ಕೆಲವು ದಿನಗಳಿಂದ ಗಾಂಧಿನಗರದಲ್ಲಿ ಡಾಲಿ ಧನಂಜಯ್ 'ಸಿಂಧೂರ ಲಕ್ಷ್ಮಣ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಹರಿದಾಡಿತ್ತು. ಆದರೆ, ಸುದ್ದಿಯ ಸೀಕ್ರೆಟ್ ಅನ್ನು ನಿರ್ಮಾಪಕ ಉಮಾಪತಿ ಬಿಟ್ಟು ಕೊಡಲಿಲ್ಲ.

ಯಾರೀ 'ಸಿಂಧೂರ ಲಕ್ಷ್ಮಣ'

ಯಾರೀ 'ಸಿಂಧೂರ ಲಕ್ಷ್ಮಣ'

'ಸಿಂಧೂರ ಲಕ್ಷ್ಮಣ' ಉತ್ತರ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದ ಜನರಿಗೆ ಚಿರಪರಿಚಿತ. ಬ್ರಿಟಿಷರು ಹಾಗೂ ಶ್ರೀಮಂತರ ಖಜಾನೆಯನ್ನು ಕೊಳ್ಳೆ ಹೊಡೆದು ಅದನ್ನುಬಡವರಿಗೆ ಹಂಚುತ್ತಿದ್ದ. ಬ್ರಿಟಿಷರನ್ನು ದುಸ್ವಪ್ನವಾಗಿ ಕಾಡಿದ ವೀರ ಸೇನಾನಿ. ಇವನ ಹೋರಾಟದ ಬಗ್ಗೆ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ನಾಟಕಗಳು ನಡೆದಿವೆ. ಅವೆಲ್ಲವೂ ಯಶಸ್ಸು ಕಂಡಿವೆ. ನಾಟಕಗಳಲ್ಲಿ ಕನ್ನಡದ ಜನಪ್ರಿಯ ನಟ ಸುಧೀರ್, ಸಿಂಧೂರ ಲಕ್ಷ್ಮಣನಾಗಿ ನಟಿಸುತ್ತಿದ್ದರು.

More from Filmibeat

English summary
Producer Umapathy Reaction on Daali Dhananjaya In Sindhura Lakshmana Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X