ಸ್ಯಾಂಡಲ್‌ವುಡ್‌ಗೆ ಯಶ್ ಅಮ್ಮ ಅಧಿಕೃತ ಎಂಟ್ರಿ: PA ಪ್ರೊಡಕ್ಷನ್ ಚೊಚ್ಚಲ ಚಿತ್ರಕ್ಕೆ ಹೀರೋ ಯಾರು?
'ಕೆಜಿಎಫ್ 2' ಬಳಿಕ ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್. ಒಂದು ಸಿನಿಮಾ ಅವರ ಬದುಕನ್ನು ಬದಲಿಸಿದೆ. ಹಾಗೇ ಕನ್ನಡ ಚಿತ್ರರಂಗದ ಇಮೇಜ್ ಅನ್ನೂ ಬದಲಿಸಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರುವ ರಾಕಿ ಭಾಯ್ ಮುಂದಿನ ಟಾರ್ಗೆಟ್ 'ಟಾಕ್ಸಿಕ್'. ಈ ಬಾರಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವ ಗುರಿ ಇಟ್ಟುಕೊಂಡಿದ್ದಾರೆ.
'ಟಾಕ್ಸಿಕ್' ಸಿನಿಮಾ ಆರಂಭಕ್ಕೂ ಮುನ್ನವೇ ಯಶ್ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 'ಕೆಜಿಎಫ್ 2' ಬಳಿಕ ತಮ್ಮದೇ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. 'ಟಾಕ್ಸಿಕ್' ಹಾಗೂ ಬಹು ಚರ್ಚೆಯಲ್ಲಿರುವ 'ರಾಮಾಯಣ' ಸಿನಿಮಾವನ್ನು ಸಹ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಒಂದು ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿರುವ ಯಶ್ ಕುಟುಂಬದಿಂದ ಮತ್ತೊಂದು ಸಂಸ್ಥೆ ಹುಟ್ಟಿಕೊಂಡಿದೆ. ಅದುವೇ PA ಪ್ರೊಡಕ್ಷನ್.

PA ಪ್ರೊಡಕ್ಷನ್ ಇದು ಯಶ್ ಅಮ್ಮ ಪುಷ್ಪ ಹಾಗೂ ಅವರ ಪತಿ ಅರುಣ್ ಕುಮಾರ್ ಹೆಸರಿನಲ್ಲಿ ಹುಟ್ಟಿಕೊಂಡಿದೆ. ಈ ಮೂಲಕ ರಾಕಿ ಭಾಯಿಯ ಅಮ್ಮ ಪುಷ್ಪಾ ಅಧಿಕೃತವಾಗಿ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾದ ಹೀರೊ ಯಾರು ಅನ್ನೋದನ್ನು ಅನೌನ್ಸ್ ಮಾಡಲಾಗಿದೆ. ಹಾಗೇ ಫಸ್ಟ್ ಲುಕ್‌ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪವರ್‌ಫುಲ್ ನಿರ್ಮಾಣ ಸಂಸ್ಥೆ ಹುಟ್ಟಿಕೊಂಡಂತೆ ಆಗಿದೆ.
ರಾಕಿ ಭಾಯ್ ಅಮ್ಮ ಸ್ಯಾಂಡಲ್‌ವುಡ್‌ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದೆಂಬ ನಿರೀಕ್ಷೆಯಿತ್ತು. ಆದರೆ, ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. PA ಪ್ರೊಡಕ್ಷನ್ ಮೂಲಕ ಚೊಚ್ಚಲ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಪೃಥ್ವಿ ಅಂಬಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪೃಥ್ವಿ ಅಂಬಾರ್ ವೃತ್ತಿ ಬದುಕಿಗೆ ಈ ಸಿನಿಮಾ ದೊಡ್ಡ ಬ್ರೇಕ್ ಕೊಡುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಅನೌನ್ಸ್‌ಮೆಂಟ್ ಪೋಸ್ಟ್‌ನಲ್ಲಿ ಚಿತ್ರತಂಡ ಕೆಲವರಿಗೆ ಟ್ಯಾಗ್ ಮಾಡಿದೆ. ಅದರಲ್ಲಿ ನಟಿ ಕಾವ್ಯಾಶೈವ ಅವರನ್ನೂ ಟ್ಯಾಗ್ ಮಾಡಿರುವುದರಿಂದ ಇವರೇ ಸಿನಿಮಾ ನಾಯಕಿ ಇರಬಹುದಾ? ಎಂಬ ಅನುಮಾನ ಮೂಡಿದೆ. ಹಾಗೇ ಗೋಪಾಕೃಷ್ಣದೇಶಪಾಂಡೆ ಅವರನ್ನೂ ಟ್ಯಾಗ್ ಮಾಡಲಾಗಿದೆ. ಇವರು ಪ್ರಮುಖ ಪಾತ್ರದಲ್ಲಿ ನಟಿಸಬಹುದು ಎಂದು ನಿರೀಕ್ಷಿಸಬಹುದು. ನಾಳೆ (ಏಪ್ರಿಲ್ 30) ಇದೆಲ್ಲದಕ್ಕೂ ತೆರೆ ಬೀಳಲಿದೆ. PA ಪ್ರೊಡಕ್ಷನ್ಸ್ ತಮ್ಮ ಚಿತ್ರದ ಮೊದಲ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡುತ್ತಿದೆ. ಇದರಲ್ಲಿ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದು.
ಇನ್ನು PA ಪ್ರೊಡಕ್ಷನ್ಸ್ ಹುಟ್ಟಿಕೊಂಡಿದ್ದಕ್ಕೆ ಬಲವಾದ ಕಾರಣವಿದೆ. ಈ ಸಂಸ್ಥೆಯ ಮೂಲಕ ಕನ್ನಡದಲ್ಲಿ ಹೊಸ ಹಾಗೂ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶವಿದೆ. ಈ ಕಾರಣಕ್ಕಾಗಿಯೇ ಯಶ್ ತಮ್ಮ ತಾಯಿ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಪುನೀತ್ ರಾಜ್‌ಕುಮಾರ್ ಕೂಡ ತಮ್ಮ ತಾಯಿಯ ಹೆಸರಿನಲ್ಲಿ ಇದೇ ಉದ್ದೇಶಕ್ಕೆ ಪಿಆರ್‌ಕೆ ಸಂಸ್ಥೆಯನ್ನು ಹುಟ್ಟಾಕಿದ್ದರು. ಈಗ ಆ ನಿಟ್ಟಿನಲ್ಲಿ PA ಪ್ರೊಡಕ್ಷನ್ಸ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡುತ್ತಿದೆ.
ಯಶ್ ಈಗಾಗಲೇ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯನ್ನು ಹುಟ್ಟಾಕಿದ್ದು, ಇದರ ಮೂಲಕ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ 'ಟಾಕ್ಸಿಕ್' ಹಾಗೂ 'ರಾಮಾಯಣ' ಈ ಎರಡೂ ಸಿನಿಮಾಗಳಿಗೂ ಯಶ್ ನಿರ್ಮಾಣ ಸಂಸ್ಥೆ ಹಣ ಹೂಡಿಕೆ ಮಾಡಿದೆ. ಒಂದು ರಾಷ್ಟ್ರ ಮಟ್ಟದಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಕೈ ಹಾಕಿದರೆ, ಇನ್ನೊಂದು ಕನ್ನಡದ ಯುವ ಪ್ರತಿಭೆಗಳಿಗಾಗಿ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಅಮ್ಮ ಮೂಲಕ ಯಶ್ ನಿರ್ಮಾಣ ಎಂಟ್ರಿಯಾಗಿದ್ದು, ಸ್ಯಾಂಡಲ್‌ವುಡ್‌ಗೆ ದಿಕ್ಕು ಬದಲಾಗುತ್ತಾ? ಎಂದು ನೋಡಬೇಕಿದೆ.


Click it and Unblock the Notifications











