'ದೂರದರ್ಶನ'ದಲ್ಲೊಂದು ಸಮಾಚಾರ: ಪೃಥ್ವಿ ಅಂಬಾರ್ ಸಿಂಪಲ್ ಅವತಾರ

ದೂರದರ್ಶನ ಈ ಹೆಸರು ಕೇಳಿದ ಕೂಡ ಎಲ್ಲರೂ 80ರ ದಶಕಕ್ಕೆ ಜಾರುವುದು ಕನ್ಫರ್ಮ್. ಮತ್ತೆ ಕೆಲವರಿಗೆ ಮಾಯಾಪೆಟ್ಟಿಗೆ ಟಿವಿಯೇ ನೆನಪಾಗುತ್ತೆ. ಇದೇ ಹೆಸರನ್ನಿಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಒಂದು ಬರುತ್ತಿದೆ. ಅದರ ಹೆಸರು ಕೂಡ 'ದೂರದರ್ಶನ'. ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ನಡುವೆ ಇರುವ ಒಂದು ಚಿಕ್ಕ ಊರೊಳಗೆ ಟಿವಿ ಬರುತ್ತೆ. ಊರೊಳಗೆ ಟಿವಿ ಎಂಟ್ರಿ ಕೊಟ್ಟ ಕೂಡಲೇ ಆ ಊರು ಹೇಗೆಲ್ಲಾ ಪ್ರಭಾವ ಬೀರುತ್ತದೆ. ಅಂದಿನ ಕಾಲ ಘಟ್ಟದಲ್ಲಿ ಇದ್ದಂತಹ ಪ್ರಚಲಿತ ವಿದ್ಯಮಾನಗಳನ್ನು ನೋಡುಗರು ಮೆಲುಕು ಹಾಕುವಂತೆ ಮಾಡುವ ಕಥಾಹಂದರ ಇರುವ ಸಿನಿಮಾ ತಯಾರಾಗಿದೆ ಅದುವೇ ದೂರದರ್ಶನ. ಸಿನಿಮಾದ ಟೈಟಲ್ ಇಂಟ್ರೆಸ್ಟಿಂಗ್ ಆಗಿದೆ. ಈ ಸಿನಿಮಾ 80ರ ದಶಕಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತೆ ಎಂದು ಭರವಸೆ ನೀಡುತ್ತೆ ಚಿತ್ರತಂಡ.

'ದಿಯಾ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ಪೃಥ್ವಿ ಅಂಬರ್ ಈ ಸಿನಿಮಾದ ನಾಯಕ. 'ದೂರದರ್ಶನ' ಸಿನಿಮಾ ಪೃಥ್ವಿಗೆ ಜೋಡಿಯಾಗಿ ಅಯಾನಾ ನಟಿಸಿದ್ದಾರೆ. ಹಾಗೆಯೇ ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು ನಟಿಸಿದ್ದಾರೆ. ಇವರೊಂದಿಗೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Pruthvi Ambaar Starrer Dooradarshan Kannada Movie Shooting Finished

'ದೂರದರ್ಶನ' ಸಿನಿಮಾವನ್ನು ಸುಕೇಶ್ ಶೆಟ್ಟಿ ನಿರ್ದೇಶಿಸಿದ್ದಾರೆ. ಈ ಹಿಂದೆ ಇವುರ 'ಟ್ರಂಕ್' ಅನ್ನೋ ಸಿನಿಮಾಗೆ ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಲ್ಲದೆ ಹಲವು ಕಿರುಚಿತ್ರಗಳನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಈಗ 'ದೂರದರ್ಶನ' ಸಿನಿಮಾಗೆ ನಿರ್ದೇಶನದ ಜೊತೆ ಜೊತೆಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಇದು ಇವರ ಮೊದಲ ಸಿನಿಮಾ ಕೂಡ ಹೌದು.

ನೈಜ ಘಟನೆ ಹಾಗೂ ಕಾಲ್ಪನಿಕ ಕಥೆಯನ್ನು ಸೇರಿಸಿ 'ದೂರದರ್ಶನ' ಸಿನಿಮಾವನ್ನು ನಿರ್ಮಿಸಲಾಗಿದೆ. ಈ ಚಿತ್ರದ ಚಿತ್ರೀಕರಣವನ್ನು ಮಂಗಳೂರು, ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ. ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ. ದೂರದರ್ಶನ ಸಿನಿಮಾದಲ್ಲಿ ನಾಲ್ಕು ಹಾಡುಗಳು, ಎರಡು ಫೈಟ್ ಸೀನ್ಸ್ ಗಳಿದ್ದು, ಹೊಡೆದಾಟದ ದೃಶ್ಯಗಳನ್ನು ನೈಜ ರೀತಿಯಲ್ಲಿ ಚಿತ್ರೀಕರಿಸಲಾಗಿದೆ.

More from Filmibeat

English summary
Pruthvi Ambaar Starrer Dooradarshan Kannada Movie Shooting Finished, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X