ಸಂಭಾವನೆ ಇಲ್ಲದೇ ಮತ್ತೊಂದು ಜಾಹೀರಾತಿನಲ್ಲಿ ಪುನೀತ್
ಶಿಕ್ಷಣ ಇಲಾಖೆಯ ಜಾಹೀರಾತಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ನಟಿ ರಾಧಿಕಾ ಪಂಡಿತ್ ಭಾಗವಹಿಸಲಿದ್ದಾರೆ. ಇಬ್ಬರೂ ಯಾವುದೇ ಸಂಭಾವನೆ ಇಲ್ಲದೆ ಜಾಹೀರಾತಿನಲ್ಲಿ ಭಾಗವಹಿಸಲು call sheet ನೀಡಿದ್ದು ವಿಶೇಷ.
ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಇಲಾಖೆ ಪುನೀತ್ ಮತ್ತು ರಾಧಿಕಾ ಜೊತೆ ಈ ಸಂಬಂಧ ಮಾತುಕತೆ ನಡೆಸಿದೆ. ಈ ಜಾಹೀರಾತಿನ ಚಿತ್ರೀಕರಣ ಸದ್ಯದಲ್ಲೇ ಸೆಟ್ಟೇರಲಿದೆ. ಕಿರುತೆರೆ ಜಾಹೀರಾತಿನ ಈ ಚಿತ್ರೀಕರಣ ಶಾಲೆಯಲ್ಲೇ ನಡೆಯಲಿದ್ದು, ಇಲಾಖೆ ಕೆಲವೊಂದು ಶಾಲೆಗಳನ್ನು ಈಗಾಗಲೇ ಗುರುತಿಸಿ ಕೊಂಡಿದೆ.
ಶಿಕ್ಷಣ ಹಕ್ಕು ಮತ್ತು ಶಿಕ್ಷಣ ವಂಚಿತ ಮಕ್ಕಳಲ್ಲಿ ಮತ್ತು ಅಂಥಹಾ ಕುಟುಂಬಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಇಲಾಖೆಯ ಗುರಿ. ದೊಡ್ಡ ಸೆಲೆಬ್ರಿಟಿಗಳನ್ನು ಜಾಹೀರಾತಿಗೆ ಕರೆಸಿ ಇಲಾಖೆ ವೃಥಾ ದುಡ್ಡು ಪೋಲು ಮಾಡುತ್ತದೆ ಎಂದು ಸಾರ್ವಜನಿಕರು ಭಾವಿಸಬಾರದು.
ಪುನೀತ್ ರಾಜಕುಮಾರ್ ಮತ್ತು ರಾಧಿಕಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಇಬ್ಬರೂ ಸಂಭಾವನೆ ಇಲ್ಲದೆ ಜಾಹೀರಾತಿನಲ್ಲಿ ಭಾಗವಹಿಸಲು ಒಪ್ಪಿ call sheet ಕೂಡಾ ನೀಡಿದ್ದಾರೆಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ನಿರ್ದೇಶಕ ಸುಬೋಧ್ ಯಾದವ್ ಹೇಳಿದ್ದಾರೆ.
ಬಡ ಕುಟುಂಬದ ಮಕ್ಕಳೂ ವಿದ್ಯಾವಂತರಾಗ ಬೇಕೆನ್ನುವುದು ನನ್ನ ಆಶಯ. ಅದಕ್ಕಾಗಿ ಯಾವುದೇ ಸಂಭಾವನೆ ಇಲ್ಲದೆ ಇದರಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ.
ಕನ್ನಡ ಸಿನಿಮಾ ಲೋಕದಲ್ಲಿ ಸಂಭಾವನೆ ಪಡೆಯದೇ ಸೆಲೆಬ್ರಿಟಿಗಳು ಭಾಗವಹಿಸುತ್ತಿರುವುದು ಹೊಸದೇನಲ್ಲ. ಅದರಲ್ಲಿ ಕೆಲವೊಂದು ಸ್ಲೈಡಿನಲ್ಲಿ..

ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಉಪೇಂದ್ರ ನಂದಿನಿ ಹಾಲಿನ ಜಾಹೀರಾತಿನಲ್ಲಿ ಸಂಭಾವನೆ ಪಡೆಯದೆ ಕಾಣಿಸಿಕೊಂಡಿದ್ದರು.

ಪುನೀತ್ ರಾಜಕುಮಾರ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂಭಾವನೆ ಇಲ್ಲದೆ ನಂದಿನಿ ಹಾಲು ಮತ್ತು ಮತದಾನದ ಮಹತ್ವದ ಅರಿವು ಮೂಡಿಸುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ರಮ್ಯ, ಪೂಜಾಗಾಂಧಿ
ಈ ಇಬ್ಬರೂ ಟಾಪ್ ಕನ್ನಡದ ನಟಿಯರು ನಂದಿನಿ ಹಾಲಿನ ಜಾಹೀರಾತಿನಲ್ಲಿ ಪಾಲ್ಗೊಂಡಿದ್ದರು.

ಡಾ. ರಾಜಕುಮಾರ್
ಡಾ. ರಾಜಕುಮಾರ್ ಕೆಎಂಎಫ್ ನಂದಿನಿ ಹಾಲಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಕೆಎಂಎಫ್ ಉತ್ತಮವಾಗಿ ಕೆಲಸ ಮಾಡುತ್ತಿದೆ, ರೈತರಿಗೆ ನನ್ನ ಕಿರು ಸಹಾಯವೆಂದು ಜಾಹೀರಾತಿಗೆ ಅಣ್ಣಾವ್ರು ಸಂಭಾವನೆ ಪಡೆದಿರಲಿಲ್ಲ.

ರಾಗಿಣಿ ದ್ವಿವೇದಿ
ತುಪ್ಪ ಬೇಕಾ ಬೆಡಗಿ ರಾಗಿಣಿ ದ್ವಿವೇದಿ ನಂದಿನಿ ಹಾಲಿನ ಬ್ರಾಂಡ್ ಗಳಾದ ಗುಡ್ ಲೈಫ್, ಹಾಲು ಮತ್ತು ಸಿಹಿತಿನಿಸಿನ ಜಾಹೀರಾತಿನಲ್ಲಿ ಪುನೀತ್ ಜೊತೆ ಭಾಗವಹಿಸಿದ್ದರು.


Click it and Unblock the Notifications











