The Kashmir Files Vs James: 'ಜೇಮ್ಸ್' ಸಿನಿಮಾ ತೆಗೆದರೆ ನಿಮ್ಮ ಮನೆ ಮುಂದೆ ಚಪ್ಪಲಿ ರಾಶಿ ಬೀಳುತ್ತೆ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೇಶಾದ್ಯಂತ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಕರ್ನಾಟಕದಲ್ಲಿ ಇದೇ ಸಿನಿಮಾಗೆ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ತೆಗೆದು 'ದಿ ಕಾಶ್ಮೀರ್ ಫೈಲ್ಸ್' ಪ್ರದರ್ಶನ ಮಾಡುವಂತೆ ಒತ್ತಡ ಬರುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
Recommended Video
'ದಿ ಕಾಶ್ಮೀರ್ ಫೈಲ್' ಸಿನಿಮಾ ಕರ್ನಾಟಕದಲ್ಲಿ ಟ್ಯಾಕ್ಸ್ ಫ್ರಿ ಮಾಡಿದ್ದು, 'ಜೇಮ್ಸ್' ಸಿನಿಮಾ ತೆರಿಗೆ ವಿನಾಯಿತಿ ನೀಡಬಹುದಿತ್ತಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಅದ್ಯಾವಾಗ ಅಪ್ಪು ಸಿನಿಮಾ ತೆಗೆದು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಹಾಕುವಂತೆ ಒತ್ತಡ ಹೆಚ್ಚಾಗುತ್ತಿದೆ ಅನ್ನುವ ವಿಷಯ ವೈರಲ್ ಆಯಿತೋ? ಅಲ್ಲಿಂದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ನಿನ್ನೆ (ಮಾರ್ಚ್ 24) ಯಿಂದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನಿಧಾನವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. 'ಜೇಮ್ಸ್' ಸಿನಿಮಾ ಅಪ್ಪು ಫ್ಯಾನ್ಸ್‌ಗೆ ಭಾವನಾತ್ಮಕ ಸಿನಿಮಾ. ಈ ಕಾರಣಕ್ಕೆ ಅತೀ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗಬೇಕು ಅನ್ನುವುದು ಅಭಿಮಾನಿಗಳ ಆಸೆ. ಆದರೆ, 'ಜೇಮ್ಸ್' ಎತ್ತಂಗಡಿ ಮಾಡಲು ಒತ್ತಾಡ ಹೆಚ್ಚುತ್ತಿದೆ ಅನ್ನುವ ಆರೋಪದ ಹಿನ್ನೆಲೆಯಲ್ಲೇ ಒಬ್ಬೊಬ್ಬರೇ ರೊಚ್ಚಿಗೇಳುತ್ತಿದ್ದಾರೆ. ಇಲ್ಲೊಬ್ಬರು ಶಾಸಕರ ಮನೆ ಮುಂದೆ ಅಭಿಮಾನಿಗಳ ಚಪ್ಪಲಿ ರಾಶಿ ಬೀಳುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕನಿಗೆ ಎಚ್ಚರಿಕೆ
"ಸ್ನೇಹಿತರೇ ನಿನ್ನೆಯಿಂದ ಒಂದು ವಿಯ ಪ್ರಸ್ತಾಪ ಆಗುತ್ತಿದೆ. ಯಾವುದೋ ಶಾಸಕ ಒಂದು ಚಿತ್ರಮಂದಿರದ ಮಾಲೀಕನಿಗೆ ಫೋನ್ ಮಾಡಿ 'ಜೇಮ್ಸ್' ಸಿನಿಮಾವನ್ನು ನಿಮ್ಮ ಚಿತ್ರಮಂದಿರದಿಂದ ತೆಗೆದುಬಿಡಿ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನಿಮ್ಮ ಚಿತ್ರಮಂದಿರದಲ್ಲಿ ರಿಲೀಸ್ ಮಾಡಿ ಅಂತ ಪ್ರೆಷರ್ ಹಾಕುತ್ತಿದ್ದಾನಂತೆ. ಆ ಶಾಸಕನಿಗೆ ಹಾಗೂ ಆ ಮನಸ್ಥಿತಿ ಇರುವಂತಹ ಯಾವುದೇ ವ್ಯಕ್ತಿಗೂ ಕನ್ನಡಿಗರ ಪರವಾಗಿ ಎಚ್ಚರಿಕೆ ಕೊಡುತ್ತಿದ್ದೇವೆ." ಎಂದು ವ್ಯಕ್ತಿ ಕೊಟ್ಟ ಹೇಳಿಕೆ ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿದೆ.
ಫ್ಯಾನ್ಸ್ ಚಪ್ಪಲಿ ರಾಶಿ ಬೀಳುತ್ತೆ
"ನೀವೇನಾದ್ರೂ ಆ ರೀತಿಯ ಕೆಲಸಗಳಿಗೆ ಮುಂದಾದರೆ, ಅಪ್ಪು ಅವರು ಸತ್ತಾಗ, ರಾಶಿಗಟ್ಟಲೆ ಚಪ್ಪಲಿ ಗುಡ್ಡೆ ನೋಡಿದ್ರಲ್ಲಾ? ಅದರ ಹತ್ತು ಪಟ್ಟು ನಿಮ್ಮ ಮೇಲೆ ನಿಮ್ಮ ಮನೆಗಳ ಮೇಲೆ ಬೀಳುತ್ತೆ ಎಚ್ಚರಿಕೆಯಿಂದ ಇರಿ. ಅಷ್ಟು ದೇಶಾಭಿಮಾನ, ದೇಶದ ಬಗ್ಗೆ ಅಷ್ಟು ಪ್ರೀತಿ ಇದ್ದರೆ, ಹೆಂಗೂ ಕಾಶ್ಮೀರ್ ಫೈಲ್ಸ್ ಬಗ್ಗೆ ಟ್ಯಾಕ್ಸ್ ಫ್ರೀ ಬಿಟ್ಟಿದ್ದೀರಲ್ಲಾ. ಒಂದೇ ಸಾರಿ ಟಿವಿಯಲ್ಲಿ ಹಾಕಿಸಿಬಿಡಿ. ಇಡೀ ದೇಶ ನೋಡುತ್ತೆ. ಅದನ್ನು ಬಿಟ್ಟು, ಜೇಮ್ಸ್ ಸಿನಿಮಾ ತೆಗೆದು, ಅದ್ಯಾವುದೋ ಹಿಂದಿ ಸಿನಿಮಾ ರಿಲೀಸ್ ಮಾಡಿ ಅಂತ ಹೇಳಿದರೆ ಕರ್ನಾಟಕದಲ್ಲಿ, ಎಚ್ಚರಿಕೆಯಿಂದ ಇರಿ, ಕನ್ನಡಿಗರು ಸ್ವಾಭಿಮಾನಿಗಳು." ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕಾಶ್ಮೀರ್ ಫೈಲ್ಸ್ ವಿರುದ್ಧ ತಿರುಗಿಬಿದ್ದಿದ್ದೇಕೆ?
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಕೆಲವು ರಾಜ್ಯಗಳಲ್ಲಿ ಸರ್ಕಾರವೇ ಈ ಸಿನಿಮಾ ಹಿಂದೆ ನಿಂತಿದೆ. ಕರ್ನಾಟಕದಲ್ಲೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ತೆರಿಗೆ ವಿನಾಯಿತಿ ನೀಡಿದೆ. ಇದರ ಜೊತೆಗೆ 'ಜೇಮ್ಸ್' ಸಿನಿಮಾ ತೆಗೆದು 'ದಿ ಕಾಶ್ಮೀರ್ ಫೈಲ್ಸ್' ಹಾಕಿ ಎನ್ನುವ ಒತ್ತಡ ರಾಜ್ಯ ಬಿಜೆಪಿ ಶಾಸಕರು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಕಾರಣಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. 'ಜೇಮ್ಸ್' ಸಿನಿಮಾ ಚಿತ್ರಮಂದಿರದಿಂದ ತೆಗೆದು 'ದಿ ಕಾಶ್ಮೀರ್ ಫೈಲ್ಸ್' ಹಾಕಿದರೆ ಹುಷಾರ್ ಎಂದು ಅಭಿಮಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ.

'ಜೇಮ್ಸ್' ಕಲೆಕ್ಷನ್ ಹೇಗಿದೆ?
'ಜೇಮ್ಸ್' ಸಿನಿಮಾದ ಕಲೆಕ್ಷನ್ ಕಮ್ಮಿಯೇನಿಲ್ಲ. ಎರಡನೇ ವಾರಕ್ಕೆ ಕಾಲಿಟ್ಟಿರುವ ಸಿನಿಮಾಗೆ ಕೆಲವು ಚಿತ್ರಮಂದಿರಗಳಿಂದ 25 ಲಕ್ಷಕ್ಕೂ ಅಧಿಕ ಶೇರ್ ಬರುತ್ತಿದೆ. ಹೀಗಿದ್ದರೂ, ಸಿನಿಮಾ ತೆಗೆಯುವುದು ಯಾಕೆ? ಎಂಬುದು ಚಿತ್ರತಂಡದ ಪ್ರಶ್ನೆ ಕೂಡ. 'ಜೇಮ್ಸ್' 5ನೇ ದಿನ 8.70 ಕೋಟಿ, 6ನೇ ದಿನ 7.70 ಕೋಟಿ ಗಳಿಸಿದೆ. ಹೀಗಿದ್ದರೂ, 'ಜೇಮ್ಸ್' ಸಿನಿಮಾ ತೆಗೆದು ಕಾಶ್ಮೀರ್ ಫೈಲ್ಸ್ ಹಾಕುತ್ತಿರುವುದು ರಾಜಕೀಯ ಪ್ರೇರಿತ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.


Click it and Unblock the Notifications











