ಮಾರ್ಚ್ 13ಕ್ಕೆ 'ಜೇಮ್ಸ್' ಪ್ರಿ-ರಿಲೀಸ್ ಇವೆಂಟ್ ಫಿಕ್ಸ್: ಗೆಸ್ಟ್ ಯಾರು?

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ನೋಡಲು ಕೆಲವೇ ದಿನಗಳು ಬಾಕಿ ಇವೆ. ಇನ್ನೇನು ಒಂದು ವಾರವಿದೆ ಅನ್ನುವಾಗಲೇ 'ಜೇಮ್ಸ್' ತಂಡ ಕೊನೆಯ ಹಂತದ ಪ್ರಚಾರವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ಆರು ದಿನ ಬಾಕಿಯಿದೆ ಅಷ್ಟೇ. ಅಷ್ಟರಲ್ಲೇ ಮತ್ತೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದ್ಧೂರಿಯಾಗಿ 'ಜೇಮ್ಸ್' ಪ್ರಿ- ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಂಡಿದೆ.

'ಜೇಮ್ಸ್' ಚಿತ್ರತಂಡ ಫಸ್ಟ್ ಲುಕ್‌ನಿಂದ ಪ್ರಚಾರ ಆರಂಭಿಸಿತ್ತು. ಈಗ ಟೀಸರ್ ಸಮೇತ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಟೀಸರ್ ಹಾಗೂ ಹಾಡುಗಳನ್ನು ನೋಡಿದ ಅಪ್ಪು ಫ್ಯಾನ್ಸ್‌ಗೆ ಸಿನಿಮಾ ನೋಡುವ ತವಕ ದುಪ್ಪಟ್ಟಾಗಿದೆ. ಈಗ ಅ ಪುನೀತ್ ಅಭಿಮಾನಿಗಳಿಗೆಂದೇ ಪ್ರಿ-ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಂಡಿದೆ. ಅದ್ದೂರಿಯಾ ಸೆಟ್ ಹಾಕಲಾಗುತ್ತಿದೆ. ಕನ್ನಡ ಚಿತ್ರರಂಗ ಗಣ್ಯರು ಆಗಮಿಸುವ ಸಾಧ್ಯಗಳಿವೆ. ಹಾಗಿದ್ದರೆ, ಈ ಇವೆಂಟ್‌ಗೆ ಅತಿಥಿಗಳು ಯಾರು? ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಎನ್ನುವ ಪ್ರಶ್ನೆಗೆ ಉತ್ತರಕ್ಕೆ ಮುಂದೆ ಓದಿ.

 ಪ್ಯಾಲೇಸ್ ಗ್ರೌಂಡ್‌ನಲ್ಲಿ ಇವೆಂಟ್

ಪ್ಯಾಲೇಸ್ ಗ್ರೌಂಡ್‌ನಲ್ಲಿ ಇವೆಂಟ್

ಅಪ್ಪು ಅಭಿನಯದ ಕೊನೆಯ ಸಿನಿಮಾದ ಬಗ್ಗೆ ನಿರೀಕ್ಷೆಗಳು ನೂರೆಂಟಿವೆ. ಅದೆಲ್ಲದಕ್ಕೂ ಮುನ್ನ ಪ್ರಿ ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಪ್ರಿ-ರಿಲೀಸ್ ಇವೆಂಟ್ ಹಮ್ಮಿಕೊಳ್ಳಲಿದೆ. ಮಾರ್ಚ್ 13ರಂದು ಈ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಲವು ದಿನಗಳಿಂದ ಈ ಕಾರ್ಯಕ್ರಮದ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಅದಕ್ಕೆ ತಕ್ಕಂತೆ ಅಭಿಮಾನಿಗಳಿಗಾಗಿ ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಾರ್ಚ್ 17, ಪುನೀತ್ ಹುಟ್ಟುಹಬ್ಬದಂದೇ 'ಜೇಮ್ಸ್' ಬಿಡುಗಡೆಯಾಗಲಿದೆ.

 'ಜೇಮ್ಸ್'ಗೆ ಶಿವಣ್ಣ ಅತಿಥಿ

'ಜೇಮ್ಸ್'ಗೆ ಶಿವಣ್ಣ ಅತಿಥಿ

'ಜೇಮ್ಸ್' ಸಿನಿಮಾ ಪ್ರಿ- ರಿಲೀಸ್ ಇವೆಂಟ್‌ನಲ್ಲಿ ಯಾರು ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನುವುದೇ ಕುತೂಹಲಕ್ಕೂ ತೆರೆಬಿದ್ದಿದೆ. ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸುವುದೇ ಕನ್ಫರ್ಮ್ ಆಗಿದೆ. ಇನ್ನು ದೊಡ್ಮನೆಯ ನಟರು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲಿದ್ದಾರೆ. ಶ್ರೀಮುರಳಿ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಧೀರೇನ್ ರಾಮ್ ಕುಮಾರ್ ಆಗಮಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಇವರೊಂದಿಗೆ ಸ್ಯಾಂಡಲ್‌ವುಡ್ ಗಣ್ಯರು ಕೂಡ ಭಾಗವಹಿಸುವ ಎಲ್ಲಾ ಸಾಧ್ಯತೆಗಳೂ ಇವೆ.

 ಗಣ್ಯರಿಗೆ ಆಹ್ವಾನ

ಗಣ್ಯರಿಗೆ ಆಹ್ವಾನ

'ಜೇಮ್ಸ್' ಸಿನಿಮಾ ಪ್ರಿ-ರಿಲೀಸ್ ಇವೆಂಟ್‌ ಅದ್ಧೂರಿಯಾಗಿ ನಡೆಯಲಿದೆ. ದೊಡ್ಮೆನೆಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇವರೊಂದಿಗೆ ಸ್ಯಾಂಡಲ್‌ವುಡ್‌ನ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅಪ್ಪುಗಾಗಿ ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್‌ಗಳು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ಯಾರು ವೇದಿಕೆ ಮೇಲೆ ಏರಲಿದ್ದಾರೆ ಎನ್ನುವುದನ್ನು ಇನ್ನೂ ಚಿತ್ರರಂಗ ಬಹಿರಂಗ ಪಡಿಸಿಲ್ಲ. ನಾಳೆ( ಮಾರ್ಚ್ 12) ಅತಿಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

 5 ಭಾಷೆಯಲ್ಲಿ 'ಜೇಮ್ಸ್'

5 ಭಾಷೆಯಲ್ಲಿ 'ಜೇಮ್ಸ್'

ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸಿನಿಮಾ ಏಕಕಾಲಕ್ಕೆ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ಹಿಂದೆ ಪುನೀತ್ ಅಭಿನಯದ 'ಯುವರತ್ನ' ಸಿನಿಮಾ ಕೂಡ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು. 'ಜೇಮ್ಸ್' ಸಿನಿಮಾ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Puneeth James Pre-Release event on March 13th Shivarajkumar Upendra guest. Yash, Sri Murali, Sudeep may also come as a guest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X