'ಫ್ಯಾಮಿಲಿ ಪ್ಯಾಕ್' ಮೆಚ್ಚಿದ ರಜನಿ, ಅಲ್ಲು, ವಿಜಯ್ ದೇವರಕೊಂಡ ಟೀಮ್: ನಿರ್ದೇಶಕನಿಗೆ 2 ಸಿನಿಮಾ ಆಫರ್!
ಅಮೆಜಾನ್ ಪ್ರೈಂನಲ್ಲಿ ಕನ್ನಡ ಸಿನಿಮಾ 'ಫ್ಯಾಮಿಲಿ ಪ್ಯಾಕ್' ಟ್ರೆಂಡಿಂಗ್‌ನಲ್ಲಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ಈ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಕ್ಷಿಣ ಭಾರತದಲ್ಲಿ 'ಫ್ಯಾಮಿಲಿ ಪ್ಯಾಕ್' ಚರ್ಚೆ ಆರಂಭವಾಗಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದೇ ಫೆಬ್ರವರಿ 16ರಂದು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ನೋಡಿದ ಮೇಲೆ ದಕ್ಷಿಣ ಭಾರತದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
ಪಿಆರ್‌ಕೆ ಸಂಸ್ಥೆ 'ಫ್ಯಾಮಿಲಿ ಪ್ಯಾಕ್' ಚಿತ್ರದ ಮೂಲಕ ಒಟಿಟಿಯಲ್ಲಿ ಗೆದ್ದಿದೆ. ಕನ್ನಡ ಸಿನಿಮಾಗಳು ಒಟಿಟಿಯಲ್ಲೂ ಗೆಲ್ಲುವುದಿಲ್ಲ. ಗೆಲುವಿನ ರೇಟ್ ಕಡಿಮೆ ಇದೆ ಎನ್ನುವ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಈ ಸಿನಿಮಾದ ನಿರ್ದೇಶಕರಿಗೆ ಟಾಲಿವುಡ್‌ನಿಂದ ಎರಡೆರಡು ಆಫರ್ ಬಂದಿದ್ದು, ರಜನಿಕಾಂತ್, ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ ಆಪ್ತರು ಮೆಚ್ಚುಗೆ ಸೂಚಿಸಿದ್ದಾರಂತೆ.

ನ್ಯಾಷನಲ್ ಟ್ರೆಂಡಿಂಗ್‌ನಲ್ಲಿ 7ನೇ ಸ್ಥಾನ
'ಫ್ಯಾಮಿಲಿ ಪ್ಯಾಕ್' ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸನ್ನು ನನಸು ಮಾಡಿದೆ. ಪಿಆರ್‌ಕೆ ಸಂಸ್ಥೆಯಿಂದ ಅಮೆಜಾನ್‌ನಲ್ಲಿ ಪ್ರಿಮಿಯರ್ ಆಗಿರುವ ಸಿನಿಮಾಗಳಲ್ಲಿ 'ಫ್ಯಾಮಿಲಿ ಪ್ಯಾಕ್'ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರತಂಡದ ಪ್ರಕಾರ, ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಟ್ರೆಂಡಿಂಗ್‌ನಲ್ಲಿ ಈ ಚಿತ್ರ ರಾಷ್ಟ್ರ ಮಟ್ಟದಲ್ಲಿ ಏಳನೇ ಸ್ಥಾನದಲ್ಲಿ ಇದೆಯಂತೆ. ಕನ್ನಡ ಯಾವುದೇ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಈ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿಲ್ಲ ಎನ್ನುತ್ತಿದೆ ಫ್ಯಾಮಿಲಿ ಪ್ಯಾಕ್ ಟೀಮ್.

ಭೇಷ್ ಎಂದ ರಜನಿ, ಅಲ್ಲು, ವಿಜಯ್ ಟೀಂ
'ಪ್ಯಾಮಿಲಿ ಪ್ಯಾಕ್' ಸಿನಿಮಾವನ್ನು ಯುವ ನಿರ್ದೇಶಕ ಅರ್ಜುನ್ ಕುಮಾರ್ ನಿರ್ದೇಶಿಸಿದ್ದಾರೆ. ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರೊಂದಿಗೆ ರಂಗಾಯಣ ರಘು ಕೀ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡಿದ ಬಳಿಕ ರಜನಿಕಾಂತ್ ಪಿಆರ್ಒ ರಿಯಾಜ್ ಕೆ ಅಹ್ಮದ್ ಇಡೀ ತಂಡಕ್ಕೆ ಭೇಷ್ ಎಂದಿದ್ದಾರಂತೆ. ಬಾಹುಬಲಿ ಹಾಗೂ RRR ತಂಡದ ಪ್ರಮುಖರಲ್ಲೊಬ್ಬರಾದ ವಂಶಿ ಕಾಕಾ ಮಜವಾದ ಸ್ಕ್ರಿಪ್ಟ್ ಎಂದಿದ್ದಾರಂತೆ. ಇದರೊಂದಿಗೆ ಅಲ್ಲು ಅರ್ಜುನ್ ಮಾಲೀಕತ್ವದ ಆಹಾ ಒಟಿಟಿಯ ಪ್ರಣೀತಾ ಮೆಚ್ಚುಗೆ ಸೂಚಿಸಿ, ನಿರ್ದೇಶಕರಿಗೆ ಹೈದರಾಬಾದ್ಗೆ ಆಹ್ವಾನ ನೀಡಿದ್ದಾರಂತೆ. ಇನ್ನೊಂದು ಕಡೆ ವಿಜಯ್ ದೇವರಕೊಂಡ ಆಪ್ತ ಸುರೇಶ್ ಕೊಂಡ ತೆಲುಗಿನಲ್ಲಿಯೂ ಈ ಸಿನಿಮಾ ಮಾಡುವಂತೆ ಸಲಹೆ ನೀಡಿದ್ದಾರಂತೆ.

ಅರ್ಜುನ್‌ಗೆ 2 ತೆಲುಗು ಸಿನಿಮಾ ಆಫರ್
'ಫ್ಯಾಮಿಲಿ ಫ್ಯಾಕ್' ಒಟಿಟಿಯಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಈ ಸಿನಿಮಾದ ನಿರ್ದೇಶಕ ಅರ್ಜುನ್ ಕುಮಾರ್‌ಗೆ ದಕ್ಷಿಣ ಭಾರತದ ಚಿತ್ರತಂಡ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿನಿಮಾ ಗೆದ್ದಿರುವ ಹಿನ್ನೆಲೆಯಲ್ಲಿ ತೆಲುಗಿನ ಎರಡು ನಿರ್ಮಾಣ ಸಂಸ್ಥೆಗಳು ದೊಡ್ಡ ಆಫರ್ ನೀಡಿದ್ಯಂತೆ. ಶೀಘ್ರದಲ್ಲಿ ಕನ್ನಡದ ಮತ್ತೊಬ್ಬ ನಿರ್ದೇಶಕ ತೆಲುಗಿಗೆ ಪಯಣ ಬೆಳೆಸಲಿದ್ದಾರೆ. ಎಲ್ಲಾ ವರ್ಕ್‌ಔಟ್ ಆದರೆ, ಇದೇ ಸಿನಿಮಾವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಿದರೂ ಅಚ್ಚರಿಯಿಲ್ಲ.

ಅಪ್ಪು ಕನಸು ನನಸು
ಪಿಆರ್‌ಕೆ ಪ್ರೊಡಕ್ಷನ್‌ನಿಂದ ಒಳ್ಳೆಯ ಸಿನಿಮಾಗಳನ್ನು ನೀಡಬೇಕು ಎಂದು ಪುನೀತ್ ಕನಸು ಕಂಡಿದ್ದರು. ಆ ಕನಸು ಅವರು ಕಾಲದ ಬಳಿಕ ನನಸಾಗುತ್ತಿದೆ. ಒಂದು ವೇಳೆ ಅಪ್ಪು ಬದುಕಿದ್ದರೆ, ಈ ಯಶಸ್ಸಿನ ಬೆನ್ನಲ್ಲೇ ಇನ್ನು ಹಲವು ಆಲೋಚನೆಗಳು ಹೊರಬರುತ್ತಿತ್ತೋ ಏನೋ. ಅಪ್ಪು ಕನಸು ಕಂಡಂತೆ ಪಿಆರ್‌ಕೆ ನಿರ್ಮಾಣ ಸಂಸ್ಥೆ ಇಂತಹದ್ದೇ ವಿಭಿನ್ನ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡುವ ಬಗ್ಗೆ ಈ ಹಿಂದೆ ಹೇಳಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅದ್ಭುತ ಸಿನಿಮಾಗಳನ್ನು ನಿರೀಕ್ಷೆ ಮಾಡಬಹುದು.


Click it and Unblock the Notifications











