"ನಮ್ಮ ತಂದೆ ಮೇಲೆ ಸಿಟ್ಟಿತ್ತು.. ಅಪ್ಪನನ್ನು ಟೋಟಲ್ ಆಗಿ ಕಟ್ ಆಫ್ ಮಾಡಿದ್ರು ಪುನೀತ್"; ಭಾವನಾ ಬೆಳಗೆರೆ

ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಗ್ಗೆ ಅಣ್ಣಾವ್ರ ಕುಟುಂಬದ ಮುನಿಸಿಕೊಂಡಿತ್ತಾ? ರವಿ ಬೆಳಗೆರೆ ಬರೆದ 'ರಾಜ್ ಲೀಲಾ ವಿನೋದ' ಪುಸ್ತಕ ರಿಲೀಸ್ ಆದ ಬಳಿಕ ರಾಜ್‌ಕುಮಾರ್ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು? ಈ ಪ್ರಶ್ನೆಗಳು ಹುಟ್ಟಿಕೊಂಡ ದಿನಗಳು ಇದ್ದವು. ಈ ಪುಸ್ತಕವನ್ನು ರಿಲೀಸ್ ಮಾಡುವ ವೇಳೆ ಪೊಲೀಸ್ ಬಂದೋಬಸ್ತಿನಲ್ಲಿ ಮಾಡಲಾಗಿತ್ತು. ಆ ಮಟ್ಟಿಗೆ ಪರಿಸ್ಥಿತಿ ಗಂಭೀರವಿತ್ತು.

ಕೊನೆಗೂ ರವಿಬೆಳಗೆರೆ 'ರಾಜ್ ಲೀಲಾ ವಿನೋದ' ಪುಸ್ತಕವನ್ನು ರಿಲೀಸ್ ಮಾಡಿದ್ದರು. ಅಣ್ಣಾವ್ರು ಹಾಗೂ ಲೀಲಾವತಿಯವರ ಸಂಬಂಧದ ಕುರಿತಾದ ಈ ಪುಸ್ತಕ ಸಾಕಷ್ಟು ಸಂಚಲವನ್ನು ಸೃಷ್ಟಿಸಿತ್ತು. ದೊಡ್ಮನೆ ಅಭಿಮಾನಿಗಳು ಈ ಪುಸ್ತಕ ಬಿಡುಗಡೆಗೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ, ಆ ಸಮಯದಲ್ಲಿ ಅಣ್ಣಾವ್ರ ಮಕ್ಕಳು ಮಾತ್ರ ವಿರೋಧವನ್ನು ವ್ಯಕ್ತಪಡಿಸಿರಲಿಲ್ಲ.

Puneeth Rajkumar angry towards Ravi Belagere in Raj Leela Vinoda book said Bhavana Belagere

ಈ ವಿಷಯದ ಬಗ್ಗೆ ಈಗ ರವಿಬೆಳಗೆರೆಯ ಪುತ್ರಿ ಹಾಗೂ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ ಪ್ರತಿಕ್ರಿಯೆ ನೀಡಿದ್ದಾರೆ. ಡೈಲಿ ಮಾಧ್ಯಮ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ ವೇಳೆ ಭಾವನಾ ಬೆಳಗೆರೆ ಕೆಲವು ಪ್ರಮುಖ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ತಂದೆ ರವಿ ಬೆಳಗೆರೆ ವಿರುದ್ಧ ಪುನೀತ್ ರಾಜ್‌ಕುಮಾರ್‌ಗೆ ಕೋಪವಿತ್ತು ಎಂದು ಹೇಳಿಕೊಂಡಿದ್ದಾರೆ. ಆ ಸಂದರ್ಶನದ ಸಾರಾಂಶ ಹೀಗಿದೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಇಬ್ಬರೂ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ಹೆಚ್ಚೇನು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಅಪ್ಪುಗೆ ಈ ಪುಸ್ತಕದ ರವಿ ಬೆಳಗೆರೆ ಬಗ್ಗೆ ಸಿಟ್ಟಿತ್ತು ಎಂದು ಹೇಳಿದ್ದಾರೆ. 'ಹುಡುಗರು' ಸಿನಿಮಾ ಮೂಲಕ ಶ್ರೀನಗರ ಕಿಟ್ಟಿ ಹಾಗೂ ಪುನೀತ್ ಮಧ್ಯೆ ಬೆಳೆದಿದ್ದ ಬಾಂಧವ್ಯಕ್ಕೆ ಪೆಟ್ಟು ಬಿದ್ದಿತ್ತು ಎಂದು ಭಾವನಾ ಬೆಳಗೆರೆ ಸಂದರ್ಶನದಲ್ಲಿ ಹೇಳಿದ್ದಾರೆ.

"ಪುನೀತ್ ಅವರು ಅಪ್ಪನ ಮೇಲೆ ಸ್ವಲ್ಪ ಮುನಿಸಿಕೊಂಡರು. ಅದು ನನಗೆ ಗೊತ್ತಾಯ್ತು ಆಮೇಲೆ. ಹುಡುಗರು ಸಿನಿಮಾ ರಿಲೀಸ್ ಆಗಿತ್ತು. ಪುಸ್ತಕ ಆಮೇಲೆ ರಿಲೀಸ್ ಆಯ್ತು. ಕಿಟ್ಟಪ್ಪ ಮತ್ತು ಪುನೀತ್ ನಡುವೆ ಇದ್ದ ಬಾಂಧವ್ಯಕ್ಕೆ ಬಿರುಕು ಬಿತ್ತು ಅನ್ನೋತರ ಕಿಟ್ಟಪ್ಪನಿಗೆ ಫೀಲ್ ಆಯ್ತು. ಯಾಕಂದ್ರೆ ಗೀತಕ್ಕ ಅಂದರೆ, ಕಿಟ್ಟಪ್ಪನಿಗೆ ತುಂಬಾ ಇಷ್ಟ. ಗೀತಕ್ಕನ ನೋಡಬೇಕು ಅಂದರೆ, ಮನೆಗೆ ಹೋಗಿಬಿಡುತ್ತಾನೆ. ಗೀತಕ್ಕ ನಿಮ್ಮನ್ನು ನೋಡಬೇಕು ಅಂತ ಅನಿಸಿತ್ತು ಬಂದೆ ಅಂತ." ಎಂದು ಭಾವನಾ ಬೆಳಗೆರೆ ಹೇಳಿಕೊಂಡಿದ್ದಾರೆ.

Puneeth Rajkumar angry towards Ravi Belagere in Raj Leela Vinoda book said Bhavana Belagere

'ರಾಜ್ ಲೀಲಾ ವಿನೋದ' ಪುಸ್ತಕ ರಿಲೀಸ್ ಆದ ಕೆಲವು ದಿನಗಳ ಬಳಿಕ ಕಿಟ್ಟಿ ಹಾಗೂ ಭಾವನಾ ಅವರನ್ನು ಪುನೀತ್ ಚೆನ್ನಾಗಿ ಮಾತಾಡಿಸುತ್ತಿದ್ದರು. ಆದರೆ, ಅಪ್ಪನ ಮೇಲೆ ಅವರಿಗೆ ಸಿಟ್ಟಿತ್ತು ಎಂದಿದ್ದಾರೆ. "ಆ ಮೇಲೆ ಪುನೀತ್ ಅವರು ತುಂಬಾ ಚೆನ್ನಾಗಿ ಮಾತಾಡಿಸೋರು. ನನ್ನನ್ನೂ ತುಂಬಾ ಚೆನ್ನಾಗಿ ಮಾತಾಡಿಸೋರು. ಆದರೆ ಅವರಿಗೊಂದು ಸಿಟ್ಟಿತ್ತು. ನಿಮ್ಮ ತಂದೆ ನಮ್ಮ ತಂದೆ ಮೇಲೆ ಬರೆದಿದ್ದಾರೆ ಅಂತ. ಅದು ಅವರ ಹಕ್ಕು ಅದನ್ನು ಅವರು ಮಾಡಿದರು. ಅಪ್ಪನ್ನಂತೂ ಅವರು ಆರಂಭದ ದಿನಗಳಲ್ಲಿ ಭೇಟಿ ಮಾಡಿದ್ದರು. ಶಿವಣ್ಣನೂ ನಮ್ಮ ಸ್ಕೂಲ್‌ಗೆ ಗೆಸ್ಟ್ ಆಗಿ ಬಂದಿದ್ದರು. ಹೀಗಿದ್ದಿದ್ದು ಆಮೇಲೆ ಸಂಪರ್ಕ ಕಟ್ ಆಗ ಹೋಯ್ತು. ನಮ್ಮನ್ನು ಅವರು ಕಟ್ ಆಫ್ ಮಾಡಿಲ್ಲ. ಆದರೆ, ಅಪ್ಪನನ್ನು ಪುನೀತ್ ಟೋಟಲ್ ಆಗಿ ಕಟ್ ಆಫ್ ಮಾಡಿದ್ದರು." ಎನ್ನುತ್ತಾರೆ ಭಾವನಾ.

ಇನ್ನು 'ರಾಜ್‌ ಲೀಲಾ ವಿನೋದ' ಪುಸ್ತಕದ ಬಗ್ಗೆನೂ ಭಾವನಾ ಬೆಳಗೆರೆ ಮಾತಾಡಿದ್ದು, ಆ ಪುಸ್ತಕದಲ್ಲಿ ಕೇವಲ ನಾಲ್ಕು ಪುಟಗಳಷ್ಟೇ ಆ ಸಂಬಂಧದ ಬಗ್ಗೆ ಬರೆದಿದ್ದಾರೆ. ಅದು ಬಿಟ್ಟು ಮುತ್ತುರಾಜ್ ಡಾ.ರಾಜ್‌ಕುಮಾರ್ ಆಗಿ ಹೇಗೆ ಬೆಳೆದರು ಅನ್ನೋದನ್ನು ಬರೆದಿದ್ದಾರೆ ಎಂದಿದ್ದಾರೆ. "ಆ ಪುಸ್ತಕದಲ್ಲಿ ಅವರ ಈ ಸಂಬಂಧದ ಬಗ್ಗೆ ನಾಲ್ಕು ಪುಟವಿದೆ. ಅದು ಬಿಟ್ಟರೆ ಬರೀ ಸಾಧನೆಯೇ ಇರೋದು. ಬೇಡರ ಕಣ್ಣಪ್ಪ ಹೇಗಾಯ್ತು? ಮುತ್ತುರಾಜನಿಂದ ಹೇಗೆ ರಾಜಕುಮಾರನಾದ? ಅನ್ನೋ ವರ್ಣನೆ ಇತ್ತು. ಜನ ಪುಸ್ತಕದ ಟೈಟಲ್‌ಗೆ ಮತ್ತು ಆ ಫೋಟೊವನ್ನು ನೆಗೆಟಿವ್ ಆಗಿ ತೆಗೆದುಕೊಂಡರು." ಎನ್ನುತ್ತಾರೆ.

More from Filmibeat

English summary
Puneeth Rajkumar angry towards Ravi Belagere in Raj Leela Vinoda book said Bhavana Belagere;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X