Appu Box Office Day 1: 'ಅಪ್ಪು' ರಿಲೀಸ್: ನಗುವಿನ ಸರದಾರನ ಮೊದಲ ದಿನ ಬಾಕ್ಸಾಫೀಸ್ ಲೆಕ್ಕಾಚಾರವೇನು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಅವರು ನಟಿಸಿದ ಒಂದೊಂದು ಐಕಾನಿಕ್ ಸಿನಿಮಾ ರಿಲೀಸ್ ಆಗುತ್ತಿದೆ. 49ನೇ ಬರ್ತ್‌ಡೇಗೆ ಮರು ಬಿಡುಗಡೆ ಕಂಡಿದ್ದ 'ಜಾಕಿ' ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಅಭಿಮಾನಿಗಳು ಮತ್ತೆ ಬಿಗ್ ಸ್ಕ್ರೀನ್ ಮೇಲೆ 'ಜಾಕಿ' ನೋಡಿ ಸಂಭ್ರಮಿಸಿದ್ದರು. ಅದೇ ಜೋಷ್‌ನಲ್ಲಿಯೇ 50ನೇ ಹುಟ್ಟು ಹಬ್ಬಕ್ಕೆ ನಾಯಕನಾಗಿ ಚೊಚ್ಚಲ ಸಿನಿಮಾ 'ಅಪ್ಪು' ಕೂಡ ಅದ್ದೂರಿಯಾಗಿ ರಿಲೀಸ್ ಆಗಿದೆ.

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೇ ಈ ಸಿನಿಮಾವನ್ನು ನೋಡಬೇಕು ಅಂತ ಆಸೆ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಅಪ್ಪು' ರಿಲೀಸ್ ಮಾಡಿದ್ದರು. ಈ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್‌ನಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೊಸ ಸಿನಿಮಾ ಹೇಗೆ ರಿಲೀಸ್ ಆಗುತ್ತೋ ಅಷ್ಟೇ ಗ್ರ್ಯಾಂಡ್ ಆಗಿ 'ಅಪ್ಪು' ಸಿನಿಮಾವನ್ನು ರಿಲೀಸ್ ಮಾಡಿದ್ದರು.

Puneeth Rajkumar Appu film re release day 1 box office prediction report

ಪುನೀತ್ ರಾಜ್‌ಕುಮಾರ್ ಜೊತೆ ರಕ್ಷಿತಾ ಪ್ರೇಮ್, ಶ್ರೀನಿವಾಸ್ ಮೂರ್ತಿ, ಅವಿನಾಶ್ ಅಂತಹ ಕಲಾವಿದರು ಈ ಸಿನಿಮಾಗೆ ಮೆರುಗು ನೀಡಿದ್ದರು. ಗುರುಕಿರಣ್ ಸಂಗೀತ 'ಅಪ್ಪು' ಸಿನಿಮಾದ ಮತ್ತೊಂದು ಹೈಲೈಟ್. ಪುನೀತ್ ಡ್ಯಾನ್, ಆಕ್ಷನ್ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಮಾಡಿತ್ತು. ಅದರಲ್ಲೂ ಪುರಿ ಜಗನ್ನಾಥ್ ನಿರ್ದೇಶನ ಪುನೀತ್ ರಾಜ್‌ಕುಮಾರ್ ಅನ್ನು ಪವರ್‌ಸ್ಟಾರ್ ಮಾಡಿತ್ತು. 23 ವರ್ಷಗಳ ಹಿಂದೆ ಇದ್ದ ಅದೇ ಕ್ರೇಜ್‌ ಈಗಲೂ ಕಾಣಿಸುತ್ತಿದೆ. ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳನ್ನು ಮೊದಲ ದಿನ 'ಅಪ್ಪು' ಎಷ್ಟು ಗಳಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.

'ಅಪ್ಪು' ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ?

ಪುರಿ ಜಗನ್ನಾಥ್ ನಿರ್ದೇಶಿಸಿದ 'ಅಪ್ಪು' ಸಿನಿಮಾ ಕರ್ನಾಟದಾದ್ಯಂತ 153ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಕನ್ನಡದ ರಿ ರಿಲೀಸ್ ಸಿನಿಮಾಗಳ ಇತಿಹಾಸದಲ್ಲಿಯೇ ಈ ಸಿನಿಮಾ ದಾಖಲೆ ಬರೆಯಬಹುದೆಂಬ ನಿರೀಕ್ಷೆಯಿದೆ. ಬೆಂಗಳೂರು, ಮೈಸೂರು,ಹೊಸಪೇಟೆ ಭಾಗಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ವರದಿಗಳಾಗಿವೆ. ಹೀಗಾಗಿ ಕರ್ನಾಟಕದ ವಿತರಕರ ವಲಯದಲ್ಲಿ ಹೊರ ಹುಮ್ಮಸ್ಸು ಮೂಡಿದೆ.

ಮೊದಲ ದಿನದ ಲೆಕ್ಕಾಚಾರವೇನು?

'ಅಪ್ಪು' ಸಿನಿಮಾಗೆ ಬೆಂಗಳೂರಿನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮೈಸೂರು, ಹೊಸಪೇಟೆ, ಬಳ್ಳಾರಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮೊದಲ ಸಿಕ್ಕಾಪಟ್ಟೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ. ಅದರಲ್ಲೂ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ, ವೀರೇಶ್, ಸಿದ್ಧಲಿಂಗೇಶ್ವರ ಅಂತಹ ಅಪ್ಪಟ ಕನ್ನಡದ ಸಿನಿಮಾ ಮಂದಿರಗಳಲ್ಲಿ 3 ರಿಂದ 4 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಹಾಗೇ ಮಂಡ್ಯದ ಗಾಯತ್ರಿ, ಬಳ್ಳಾರಿಯ ನಟರಾಜ ಕಾಂಪ್ಲೆಕ್ಸ್, ತುಮಕೂರಿನ ಗಾಯತ್ರಿ ಚಿತ್ರಮಂದಿರಗಳಲ್ಲಿ ರೆಸ್ಪಾನ್ಸ್ ಸಖತ್ ಆಗಿದೆ ಎಂಬ ವರದಿ ವಿತರಕರ ವಲಯದಿಂದ ಬಂದಿದೆ.

Puneeth Rajkumar Appu film re release day 1 box office prediction report

ಕರ್ನಾಟಕದಾದ್ಯಂತ ಎಷ್ಟು ಕಲೆಕ್ಷನ್ ಆಗಬಹುದು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಿಲೀಸ್ ಆಗಿರುವ ಸಿನಿಮಾ ಮೊದಲ ದಿನ ಸುಮಾರು 60 ಲಕ್ಷ ರೂಪಾಯಿಯಿಂದ 75 ಲಕ್ಷ ರೂಪಾಯಿ ರೇಂಜ್‌ನಲ್ಲಿ ಕಲೆಕ್ಷನ್ ಆಗಬಹುದೆಂದು ವಿತರಕರ ವಲಯ ಅಭಿಪ್ರಾಯ ಪಟ್ಟಿದೆ. ನಾಳೆ (ಮಾರ್ಚ್ 15) 'ಅಪ್ಪು' ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಲೆಕ್ಕಾಚಾರ ಸಿಗಲಿದೆ. ಸದ್ಯಕ್ಕೆ 75 ಲಕ್ಷ ರೂಪಾಯಿ ಕಲೆಕ್ಷನ್ ಆಗಬಹುದೆಂದು ಅಂದಾಜಿಸಲಾಗಿದೆ.

ಇನ್ನೂ ಮೂರು ದಿನ ಹವಾ

ನಾಳೆ (ಮಾರ್ಚ್ 15) ಹಾಗೂ ನಾಡಿದ್ದು (ಮಾರ್ಚ್ 16) ವೀಕೆಂಡ್ ಆಗಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಆಗುತ್ತೆಂಬ ನಿರೀಕ್ಷೆಯಿದೆ. ಹಾಗೇ ಅಪ್ಪು ಬರ್ತ್‌ಡೇ ಸೋಮವಾರ ಬಂದಿದ್ದರಿಂದ ಅಂದೂ ಉತ್ತಮ ಕಲೆಕ್ಷನ್ ಆಗಬಹುದೆಂಬ ಎಕ್ಸ್‌ಪೆಕ್ಟೆಷನ್ ಇದೆ. ಒಟ್ಟು ನಾಲ್ಕು ದಿನ 'ಅಪ್ಪು' ನಾಲ್ಕರಿಂದ ಐದು ಕೋಟಿ ಕಲೆಕ್ಷನ್ ಆಗಬಹುದೆಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕಹಾಕಿದ್ದಾರೆ.

ಸೂಚನೆ: ಅಪ್ಪು ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಸಿನಿಮಾ ತಂಡ ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ.

More from Filmibeat

English summary
Puneeth Rajkumar Appu film re release day 1 box office prediction report
Read more about: puneeth rajkumar appu box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X