Puneeth Rajkumar Birthday: ಅಪ್ಪು ಹುಟ್ಟುಹಬ್ಬದಂದು ಮೆರವಣಿಗೆಗೆ ಅನುಮತಿ ನೀಡಿಲ್ಲ ಪೊಲೀಸರು: ಫ್ಯಾನ್ಸ್ ನಡೆಯೇನು?

ನಾಳೆ (ಮಾರ್ಚ್ 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಪುನೀತ್ ರಾಜ್‌ಕುಮಾರ್ ನಮ್ಮೊಂದಿಗೆ ಇದ್ದಿದ್ದರೆ, ಅಭಿಮಾನಿಗಳು ಮನೆಗೆ ಹೋಗಿ ಬರ್ತ್‌ಡೇ ಆಚರಿಸುತ್ತಿದ್ದರು. ಆದರೆ, ದಿಢೀರ್ ಅಗಲಿಕೆಯ ನೋವಿನಲ್ಲಿದ್ದರೂ, ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಅಂತ ತೀರ್ಮಾನಿಸಿದ್ದರು. ಮಾರ್ಚ್ 17ರಂದು ಬೃಹತ್ ಮೆರವಣಿಗೆ ಮೂಲಕ ವೀರೇಶ್ ಚಿತ್ರಮಂದಿರಕ್ಕೆ ತೆರಳಲು ಸಜ್ಜಾಗಿದ್ದರು. ಆದರೆ, ಅಪ್ಪು ಹುಟ್ಟುಹಬ್ಬಕ್ಕೆ ಒಂದು ದಿನ ಇದೆ ಅನ್ನುವಾಗಲೇ ಅಭಿಮಾನಿಗಳಿಗೆ ನಿರಾಸೆಯಾಗಿದೆ.

Recommended Video

James Celebration | ಅಪ್ಪುಗಾಗಿ 5 ದಿನ ಮೀಸಲಿಟ್ಟ ಅಭಿಮಾನಿ ದೇವರುಗಳು

ಚಾಮರಾಜಪೇಟೆಯ ಮಹದೇಶ್ವರ ದೇವಸ್ಥಾನದಿಂದ ಟಿ ಆರ್ ಮಿಲ್ ಮಾರ್ಗವಾಗಿ ವೀರೇಶ್ ಚಿತ್ರಮಂದಿರದವರೆಗೂ ಬೈಕ್ ಹಾಗೂ ಕಾಲ್ನಡಿಗೆ ಮೂಲಕ ಮೆರವಣೆಗೆ ಹೊರಡಲು ಸಜ್ಜಾಗಿದ್ದರು. ಈ ವಿಚಾರವಾಗಿ ಚಾಮರಾಜನಗರ ಪೊಲೀಸರ ಬಳಿ ಅಪ್ಪು ಅಭಿಮಾನಿಗಳು ಸೂಕ್ತ ಬಂದೋಬಸ್ತ್ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಪೊಲೀಸರು ಸ್ಪಂದಿಸಿದ್ದು, ಮೆರವಣಿಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಇದು ಪುನೀತ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಅಪ್ಪು ಅಭಿಮಾನಿಗಳು ಮಾರ್ಚ್ 16ರಿಂದಲೇ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ, ಮಾರ್ಚ್ 17ರಂದು ಕರುನಾಡ ರತ್ನ ಪಿ ಆರ್ ಕೆ ಫ್ಯಾನ್ಸ್ ಮೆರವಣಿಗೆ ಹೊರಡಲು ನಿರ್ಧರಿಸಿದ್ದರು. ಗೌರವಾನ್ವಿತ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಬೆಂಗಳೂರು ನಗರದಾದ್ಯಂತ ಮುಷ್ಕರ ಹಾಗೂ ಮರೆವಣಿಗೆ ನಡೆಸದೆ ಇರುವಂತೆ ಆದೇಶ ಮಾಡಿದೆ. ಈ ಕಾರಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಚಾಮರಾಜಪೇಟೆ ಪೊಲೀಸರು ತಿಳಿಸಿದ್ದು, ಅಭಿಮಾನಿಗಳು ನಿರಾಶಾರಾಗಿದ್ದಾರೆ.

{photo-feature}

More from Filmibeat

English summary
Puneeth Rajkumar Birthday procession permission denied by Bengaluru Police fans unhappy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X