RRR ಚಿತ್ರದ ಹಳ್ಳಿ ನಾಟು ಹಾಡಿನಲ್ಲಿ ಅಪ್ಪು ಹೆಜ್ಜೆ: ಏನಂತು ರಾಜಮೌಳಿ ಟೀಮ್?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅದ್ಭುತ ನಟ ಅಷ್ಟೆ ಅಲ್ಲ. ಅಭಿಮಾನಿಗಳಿಗೆ ಅಪ್ಪು ಆಕ್ಷನ್ ಇಷ್ಟ. ಅಪ್ಪು ಡ್ಯಾನ್ಸ್ ಇಷ್ಟ. ಪುನೀತ್ ರಾಜ್‌ಕುಮಾರ್ ಇಷ್ಟಪಡಲು ಇದಕ್ಕಿಂತ ಇನ್ನೇನು ಕಾರಣ ಬೇಕಿದೆ. ಅದಕ್ಕೆ ಅಪ್ಪು ಅಗಲಿಕೆಯ ನೋವಿನಲ್ಲೂ ಪವರ್‌ಸ್ಟಾರ್ ಅನ್ನು ನೆನಪಿನಲ್ಲೇ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಒಂದಲ್ಲ ಒಂದು ರೀತಿ ಪ್ರತಿ ದಿನ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಧ್ಯಾನ ಮಾಡುತ್ತಿದ್ದಾರೆ.

ಸದ್ಯ ರಾಜಮೌಳಿ ನಿರ್ದೇಶಿಸಿದ RRR ಚಿತ್ರದ ಒಂದು ಹಾಡಿನಲ್ಲೂ ಅಪ್ಪು ನೆನೆದು ಖುಷಿ ಪಟ್ಟಿದ್ದಾರೆ. ಇದೇ ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳೇ ಸೃಷ್ಟಿಸಿದ ಈ ಹಾಡಿಗೆ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ ಚರಣ್ ಸೇರಿ ಇಡೀ RRR ತಂಡ ಭೇಷ್ ಅಂದಿದೆ. ಅಪ್ಪು ನೆನೆದು ಹಾಡು ಸಂಯೋಜಿಸಿದ ಅಭಿಮಾನಿಗೆ ಅಭಿನಂದಿಸಿದೆ.

ಹಳ್ಳಿ ನಾಟು ಹಾಡಿಗೆ ಹೆಜ್ಜೆ ಹಾಕಿದ ಪುನೀತ್ ಸ್ಟೆಪ್ಸ್

ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಬಿಡುಗಡೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಪ್ರಚಾರವನ್ನೂ ಆರಂಭಿಸಿರುವ ರಾಜಮೌಳಿ ಒಂದು ಪವರ್‌ಫುಲ್ ಸಾಂಗ್ ಅನ್ನು ಬಿಡುಗಡೆ ಮಾಡಿದೆ. ಅದುವೇ ನಾಟು ನಾಟು ಹಾಡು. ಇದೇ ಹಾಡು ಕನ್ನಡದಲ್ಲಿ ಹಳ್ಳಿ ನಾಟು ಎಂದು ಫೇಮಸ್ ಆಗಿದೆ. ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜಾ ಹಾಕಿರೋ ಹೆಜ್ಜೆಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ಪ್ರಮೋದ್ ಎಂಬ ಪುನೀತ್ ಅಭಿಮಾನಿಯೊಬ್ಬ ಇದೇ ಹಳ್ಳಿ ಹಾಡಿಗೆ ಅಪ್ಪು ಇದೂವರೆಗೂ ಹಾಕಿದ ಹೆಜ್ಜೆಯನ್ನು ಮಿಕ್ಸ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಹಾಡೇ ಈಗ ಎಲ್ಲೆಡೆ ವೈರಲ್

ಅಪ್ಪು ಸಿಗ್ನೇಚರ್ ಸ್ಟೆಪ್ಸ್ ಹಳ್ಳಿ ಹಾಡಿನ ಜೀವಾಳ

ಅಪ್ಪು ಸಿಗ್ನೇಚರ್ ಸ್ಟೆಪ್ಸ್ ಹಳ್ಳಿ ಹಾಡಿನ ಜೀವಾಳ

ಪುನೀತ್ ರಾಜ್‌ಕುಮಾರ್ ಅದೆಂತಹದ್ದೇ ಸಿನಿಮಾ ಮಾಡಲಿ ಅದರಲ್ಲಿ ಒಂದು ಭರ್ಜರಿ ಸ್ಟೆಪ್ ಹಾಕುವ ಹಾಡು ಇರಲೇಬೇಕು. ಹೀಗಾಗಿ ನಿರ್ದೇಶಕರು ಅಪ್ಪು ಅಭಿಮಾನಿಗಳಿಗಂತಲೇ ಸಖತ್ ಸ್ಟೆಪ್ಸ್ ಇರುವ ಹಾಡನ್ನು ಕಂಪೋಸ್ ಮಾಡಿಸುತ್ತಿದ್ದರು. ಇತ್ತೀಚೆಗೆ ಅಪ್ಪು ನಟಿಸಿದ ಯುವರತ್ನ, ನಟಸಾರ್ವಭೌಮ, ದೊಡ್ಮನೆ ಹುಡುಗ, ರಾಜಕುಮಾರ, ಅಂಜನಿಪುತ್ರ, ಚಕ್ರವ್ಯೂಹ ಚಿತ್ರದ ಹಾಡಗಳಲ್ಲಿರುವ ಅಪ್ಪು ಸ್ಟೆಪ್ಟ್ ಅನ್ನು RRR ಚಿತ್ರದ ಹಳ್ಳಿ ಹಾಡಿನಲ್ಲಿ ಮಿಕ್ಸ್ ಮಾಡಿದ್ದಾರೆ. ಈ ಹಾಡನ್ನು ನೋಡಿದ RRR ತಂಡ ಅಪ್ಪು ಅಭಿಮಾನಿಗೆ ಕನ್ನಡದಲ್ಲಿಯೇ ಮೆಚ್ಚುಗೆ ಸೂಚಿಸಿದೆ.

ಅಪ್ಪು ಹಳ್ಳಿ ಹಾಡಿಗೆ ಭಾವುಕರಾದ RRR ತಂಡ

ಅಪ್ಪು ಹಳ್ಳಿ ಹಾಡಿಗೆ ಭಾವುಕರಾದ RRR ತಂಡ

ಅಪ್ಪು ಅಭಿಮಾನಿ ಪ್ರಮೋದ್ ಶೇರ್ ಮಾಡಿದ ಹಳ್ಳಿ ಹಾಡಿಗೆ RRR ತಂಡ ಭಾವುಕ ಪ್ರತಿಕ್ರಿಯೆ ನೀಡಿದೆ. "ನಮ್ಮ ಹೆಮ್ಮೆಯ ಸಹೃದಯಿ ನಟ ಹಾಗೂ ನಟರಾಜ ಪುನೀತ್ ರಾಜ್‌ಕುಮಾರ್ ರವರು ಹಳ್ಳಿ ನಾಟು ಹಾಡಿಗೆ ನರ್ತಿಸುತ್ತಿರುವುದನ್ನು ನೋಡಿ ಕಣ್ಣು ತುಂಬಿ ಬಂತು. ತುಂಬಾ ಅದ್ಭುತವಾದ ಸಂಯೋಜನೆ ಸಹೋದರ." ಎಂದು RRR ತಂಡ ಪ್ರತಿಕ್ರಿಯೆ ನೀಡಿದೆ.

ಜನವರಿ 7ರಂದು RRR ರಿಲೀಸ್

ಜನವರಿ 7ರಂದು RRR ರಿಲೀಸ್

ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತಿದೆ. ಜೂ.ಎನ್‌ಟಿಆರ್, ರಾಮ್‌ಚರಣ್ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಂದೇ ವೇದಿಕೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. 2022 ಜನವರಿ 7 ರಂದು ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವದಾದ್ಯಂತ ಸುಮಾರು 10 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡುವುದಕ್ಕೆ RRR ತಂಡ ಸಜ್ಜಾಗಿದೆ.

More from Filmibeat

English summary
Puneeth Rajkumar fans have picked Appu's great dance skills and composed it with the upcoming Ram Charan and Jr NTR’s Naatu Naatu song from RRR
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X