"ಮಾಡಿದ್ ಪಾಪ ಸುಮ್ನೆ ಬಿಡುತ್ತಾ.. ಪಾಪದ್ ಕೊಡ ತುಂಬುತ್ತೆ"; ಅಪ್ಪು ಅಭಿಮಾನಿಗಳ ಆಕ್ರೋಶ ಇನ್ನೂ ನಿಂತಿಲ್ಲ!

ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಕಿಡಿಗೇಡಿ ವಿರುದ್ಧ ಅಪ್ಪು ಫ್ಯಾನ್ಸ್ ಕಿಡಿಕಾರಿದ್ದರು. ಕಿಡಿಗೇಡಿಯೊಬ್ಬ ಟ್ವಿಟರ್‌ನಲ್ಲಿ (ಎಕ್ಸ್) ಗಜಪಡೆ ಅನ್ನುವ ಖಾತೆ ತೆರೆದು ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರಣ ಅಂತ ಬರೆದುಕೊಂಡಿದ್ದ. ಇದು ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿತ್ತು.

ರಾಜ್ಯ ಮೂಲೆ ಮೂಲೆಯಲ್ಲಿರುವ ಅಪ್ಪು ಅಭಿಮಾನಿಗಳು ಈ ಕಿಡಿಗೇಡಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಪ್ರಥಮ್, ಸಿಎಂ ಸಿದ್ಧರಾಮಯ್ಯ, ಅನುಶ್ರೀ ಸೇರಿದಂತೆ ಕನ್ನಡದ ಚಿತ್ರರಂಗದ ಕೆಲ ಸೆಲೆಬ್ರೆಟಿಗಳು ಕೂಡ ಖಂಡಿಸಿದ್ದರು. ಬೆಂಗಳೂರು, ಮೈಸೂರು ಭಾಗಗಳಲ್ಲಿ ಪೊಲೀಸರಿಗೆ ಅಪ್ಪು ಅಭಿಮಾನಿಗಳು ದೂರು ನೀಡಿದ್ದಾರೆ.

Puneeth Rajkumar fans are still furious about bad comment on Ashwini Puneeth Rajkumar

ಗಜಪಡೆ ಅನ್ನೋ ಹೆಸರಿನಲ್ಲಿ ಟ್ವೀಟ್ ಮಾಡಿದ್ದರಿಂದ ದರ್ಶನ್ ಅಭಿಮಾನಿ ಕೃತ್ಯ ಅನ್ನೋದು ಪುನೀತ್ ಅಭಿಮಾನಿಗಳ ಆಕ್ರೋಶ. ಕಳೆದ ಕೆಲವು ದಿನಗಳಿಂದ ದರ್ಶನ್ ಫ್ಯಾನ್‌ ವಿರುದ್ಧ ಅಪ್ಪು ಫ್ಯಾನ್ಸ್ ತಿರುಗಿ ಬೀಳುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಪು ಅಭಿಮಾನಿಗಳ ಆಕ್ರೋಶ ಕಡಿಮೆ ಆಗಿಲ್ಲ. ದರ್ಶನ್ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ.

"ಪಾಪದ್ ಕೊಡ ತುಂಬುತ್ತೆ"

ಕಿಡಿಗೇಡಿ ಕೆಟ್ಟ ಪದಗಳಿಂದ ಟೀಕಿಸಿದ್ದಕ್ಕೆ ನೆಟ್ಟಿಗರು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಕಡೆ ಅಪ್ಪು ಫ್ಯಾನ್ಸ್ ಆಕ್ರೋಶ ಕಡಿಮೆಯಾಗಿಲ್ಲ. "ಮಾಡಿದ್ ಪಾಪ ಸುಮ್ನೆ ಬಿಡುತ್ತ.. ಪಾಪದ್ ಕೊಡ ತುಂಬುತ್ತೆ.. ದುಡ್ಡಿನ ಮದ ಇಳಿಯುತ್ತೆ.. ಜನಪ್ರಿಯತೆ ತಗ್ಗುತ್ತೆ.. ಚಪ್ಪ*** ಇನ್ಮೇಲೆ ಬೀಳ್ತಾನೆ ಇರುತ್ತೆ" ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

"ಆರ್‌ಆರ್‌ ನಗರದಿಂದ ಸದಾಶಿವನಗರದವರೆಗೂ"

ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಕಾರಣಕ್ಕೆ ನಿಂದನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ನಿಂದಿಸಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿಯೇ ಹೆಚ್ಚೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ. ಅಪ್ಪು ಅಭಿಮಾನಿಗಳಂತೂ ಕಿಡಿಕಾಡುತ್ತಿದ್ದಾರೆ. "ನೆನ್ನೆ ಹೇಳಿದ್ದೆ ಜಗ್ಗೇಶ್ ಅಣ್ಣನ ಮುಟ್ಟದಂಗ್ ಅಲ್ಲಮ್ಮ.. ಕೇಸು ಅಂತ ಹರ್ಕೊಂಡ್ರಿ.. ಅತಿ ಶ್ರೀಘ್ರದಲ್ಲಿ ಆರ್‌ ಆರ್ ನಗರದಿಂದ ಸದಾಶಿವನಗರವರೆಗೂ ಚಪ್ಪ* ಏಟು ಬೀಳುತ್ತೆ." ಎಂದು ಟ್ವೀಟ್‌ ಮಾಡುತ್ತಿದ್ದಾರೆ.

ಹೆಣ್ಣುಮಕ್ಕಳ ಕಣ್ಣಲ್ಲಿ ನೀರ್ ಹಾಕ್ಸಿದ್ರೆ ಏನಾಗುತ್ತೆ?

ಕೆಲವು ತಿಂಗಳುಗಳಿಂದ ಅಪ್ಪು ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಯುತ್ತಿತ್ತು. ಈ ಬೆನ್ನಲ್ಲೇ ಕಿಡಿಗೇಡಿ ಮಾಡಿದ ಕೃತ್ಯಕ್ಕೆ ಅದು ಮತ್ತೊಂದು ಹಂತಕ್ಕೆ ಹೋಗಿದೆ. "ಶುಕ್ರವಾರ ಹೆಣ್ಣುಮಕ್ಕಳ ಕಣ್ಣಲ್ಲಿ ನೀರ್ ಹಾಕ್ಸಿದ್ರೆ ಇನ್ನೇನ್ ಆಗುತ್ತೆ.. ಡಾ*** 1st half mugitu 2nd half ರಕ್ತಕಣ್ಣೀರು" ಎಂದು ಪುನೀತ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಸಿಎಂಗೆ ಧನ್ಯವಾದ ಅರ್ಪಿಸಿದ ಫ್ಯಾನ್ಸ್

ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಕೆಟ್ಟ ಪದಗಳ ಮೂಲಕ ನಿಂದಿಸಿದ್ದನ್ನು ಸಿಎಂ ಸಿದ್ಧರಾಮಯ್ಯ ಕೂಡ ಖಂಡಿಸಿದ್ದರು. ಕಿಡಿಗೇಡಿಗಳಿಗೆ ಎಚ್ಚರಿಕೆಯನ್ನು ನೀಡಿದ್ದರು. ಅದಕ್ಕೆ ಸಿಎಂಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ದೊಡ್ಡ ಧನ್ಯವಾದಗಳು ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್.. ಶೀಘ್ರದಲ್ಲೇ ಸ್ಲಮ್ ಫ್ಯಾನ್ಸ್‌ಗೆ ಜೈಲ್ ಊಟಾ." ಎಂದು ಆಕ್ರೋಶ ಹೊರ ಹಾಕಿದ್ದಾರೆ.

"ಒಳ್ಳೆಯದನ್ನೇ ಬಯಸೋಣ"

"ಕೆಟ್ಟವರಿಗೂ ಒಳ್ಳೆಯದನ್ನೇ ಬಯಸೋಣ. ಅವರು ಉತ್ತರ ಕೊಡುವಾಗ ಪ್ರಬುದ್ಧತೆ ಮತ್ತು ತಾಳ್ಮೆಯನ್ನು ನೋಡಿ. ಈ ಮುಗ್ಧತೆಯೇ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಸುತ್ತವೆ. ಇಂತಹ ಶುದ್ಧ ಆತ್ಮದ ಬಗ್ಗೆ ಏನೂ ಕಾರಣವೂ ಇಲ್ಲದೆ ಕೆಟ್ಟದಾಗಿ ಹೇಗೆ ಮಾತಾಡುವುದಕ್ಕೆ ಸಾಧ್ಯ." ಎಂದು ಮತ್ತೊಬ್ಬ ನೆಟ್ಟಿಗರು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬೆಂಬಲಕ್ಕೆ ಬಂದಿದ್ದಾರೆ.

More from Filmibeat

English summary
Puneeth Rajkumar fans are still angry about Darshan fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X