ಅಪ್ಪು ಹುಟ್ಟುಹಬ್ಬಕ್ಕೆ 100 ದಿನ ಬಾಕಿ: ಅಭಿಮಾನದ ಅಭಿಮಾನಿಗಳ ಅಭಿಯಾನ ಶುರು

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು 'ಗಂಧದ ಗುಡಿ' ಟೈಟಲ್ ಟೀಸರ್ ನೋಡಿ ನೋವಿನಲ್ಲೂ ನಲಿವು ಕಂಡಿದ್ದರು. ಮತ್ತೆ ಎದ್ದು ಬಂದಿದ್ದ ಅಪ್ಪು ಕಂಡು ಪುಳಕಿತರಾಗಿದ್ದರು. ತಮ್ಮ ನೆಚ್ಚಿನ ನಟನ ಅದ್ಭುತ ಕಲ್ಪನೆಗೆ ಬೆರಗಾಗಿದ್ದ ಅಭಿಮಾನಿಗಳು ಮೂಕ ವಿಸ್ಮಿತರಾಗಿದ್ದರು. ಇಂತಹ ಸಂದರ್ಭದಲ್ಲಿ ಪವರ್‌ಸ್ಟಾರ್ ನಮ್ಮೊಂದಿಗಿಲ್ಲವಲ್ಲ ಅಂತ ಮರುಗಿದ್ದರು. ಆದರೆ, 'ಗಂಧದ ಗುಡಿ' ಮತ್ತೆ ಪುನೀತ್ ಅಭಿಮಾನಿಗಳಿಗೆ ಬದುಕಿಗೆ ಹೊಸ ಬೆಳಕಾಗಿದೆ.

Recommended Video

ಪುನೀತ್ ಹುಟ್ಟುಹಬ್ಬಕ್ಕೆ 100 ದಿನ ಇರುವಾಗಲೇ ಶುರುವಾಯ್ತು ಸಂಭ್ರಮಾಚರಣೆ

ಇದೇ ಖುಷಿಯಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಫ್ಯಾನ್ ಅಪ್ಪು ನೆನಪನ್ನು ಜೀವಂತವಾಗಿರಿಸಲು ನಿರ್ಧರಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ಪನೀತ್ ರಾಜ್‌ಕುಮಾರ್ ಹಾಕಿಕೊಟ್ಟಿರುವ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಹೀಗಾಗಿ ಅಪ್ಪು ಅಭಿಮಾನಿಗಳು ಕೂಡ ಸುಮ್ಮನೆ ಕೂತಿಲ್ಲ. ಸಿನಿಮಾದ ಮೂಲಕ ರಂಜಿಸಿ, ಸಮಾಜದ ಉದ್ಧಾರಕ್ಕೆ ತೆರೆಮರೆಯಲ್ಲಿ ಶ್ರಮಿಸಿದ್ದ ಅಪ್ಪು ಹುಟ್ಟುಹಬ್ಬಕ್ಕೆ ಈಗಿನಿಂದ ತಯಾರಿ ಆರಂಭಿಸಿದ್ದಾರೆ.

ಪುನೀತ್ ಹುಟ್ಟುಹಬ್ಬಕ್ಕೆ 100 ದಿನ ಬಾಕಿ

ಪುನೀತ್ ಹುಟ್ಟುಹಬ್ಬಕ್ಕೆ 100 ದಿನ ಬಾಕಿ

ಸೂಪರ್‌ಸ್ಟಾರ್ ಹುಟ್ಟುಹಬ್ಬಕ್ಕೆ ಹೇಗಿರುತ್ತೆ ಅನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಒಂದು ವಾರದ ಮುನ್ನವೇ ತಮ್ಮ ಅಚ್ಚು ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡುವುದಕ್ಕೆ ಅಭಿಮಾನಿಗಳೇ ಸಜ್ಜಾಗುತ್ತಾರೆ. ಬ್ಯಾನರ್‌ಗಳನ್ನು ಸಿದ್ಧಪಡಿಸುತ್ತಾರೆ. ಕೇಕ್, ಹೂವಿನ ಹಾರಗಳಿಗೆ ವಾರ ಮುಂಚೇ ಆರ್ಡರ್ ಕೊಟ್ಟು ಬಿಡುತ್ತಾರೆ. ಆದ್ರೀಗ ಅಪ್ಪು ಬರ್ತ್‌ಡೇ 100 ದಿನಗಳಿರುವಾಗಲೇ ಅಭಿಮಾನಿಗಳು ಪುನೀತ್ ನೆನೆಯಲು ಆರಂಭಿಸಿದ್ದಾರೆ.

ಅಪ್ಪು ಅಭಿಮಾನಿ ತಂಡದಿಂದ ಸಂಭ್ರಮ

ಪವರ್‌ಸ್ಟಾರ್ ಪುನೀತ್ ರಾಜ್‌ ಕುಮಾರ್ ಅಭಿಮಾನಿಗಳು ಇಡೀ ವಿಶ್ವದಲ್ಲೂ ಇದ್ದಾರೆ. ಅದರಲ್ಲೂ ಮುಂಬೈನಲ್ಲಿರುವ ಪುನೀತ್ ಅಭಿಮಾನಿಗಳು ಈ 100 ದಿನಗಳ ಅಭಿಯಾನವನ್ನು ಆರಂಭಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಬರ್ತ್‌ಡೇಗೆ 100 ದಿನವಿರುವ ಪೋಸ್ಟರ್ ರಿಲೀಸ್ ಮಾಡಿದ್ದಾರೆ. "ಯೂತ್ ಐಕಾನ್ ಅಪ್ಪು ಬಾಸ್ ಹುಟ್ಟುಹಬ್ಬಕ್ಕೆ 100 ದಿನ. ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಮತ್ತಷ್ಟು ಹತ್ತಿರ" ಎಂದು ಟ್ವೀಟ್ ಮಾಡಿದ್ದಾರೆ. ಈ ಅಭಿಯಾನಕ್ಕೆ ಅಪ್ಪು ಅಭಿಮಾನಿಗಳು ಕೈ ಜೋಡಿಸಿದ್ದಾರೆ.

'ಗಂಧದ ಗುಡಿ'ಗೆ ಅಭಿಮಾನಿಗಳ ಕಾತರ

'ಗಂಧದ ಗುಡಿ'ಗೆ ಅಭಿಮಾನಿಗಳ ಕಾತರ

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಎರಡು ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದಾರೆ. ಈಗಾಗಲೇ 'ಗಂಧದ ಗುಡಿ' ಟೀಸರ್ ನೋಡಿ ಥ್ರಿಲ್ ಆಗಿರುವ ಫ್ಯಾನ್ಸ್ ಅಪ್ಪು ಕನಸನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಸುಮಾರು ಒಂದು ವರ್ಷದಿಂದ ಪುನೀತ್ ಕಾಡು ಮೇಡು ಸುತ್ತಿ ಚಿತ್ರೀಕರಿಸಿರುವ ಈ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ದುಪ್ಪಟ್ಟಾಗಿದೆ. ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಇದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, 2022ರಕ್ಕೆ ಬಿಡುಗಡೆಯಾಗುತ್ತೆ ಎಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಗಂಧದ ಗುಡಿಗಾಗಿ ಕಾಯುತ್ತಿದ್ದಾರೆ.

ಅಪ್ಪು ಬರ್ತ್‌ಡೇಗೆ ಜೇಮ್ಸ್ ರಿಲೀಸ್?

ಅಪ್ಪು ಬರ್ತ್‌ಡೇಗೆ ಜೇಮ್ಸ್ ರಿಲೀಸ್?

ಪುನೀತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಮತ್ತೊಂದು ಸಿನಿಮಾ 'ಜೇಮ್ಸ್'. ಈ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿರ್ದೇಶಕ ಚೇತನ್ ಕುಮಾರ್ ಕೂಡ ಸಿನಿಮಾ ಕೆಲಸಗಳನ್ನು ಮತ್ತೆ ಆರಂಭಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Power Star Puneeth Rajkumar fans started his birthday 100 days before. Appu fans expecting James and Gandhada gudi will release on that special day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X