Puneeth Rajkumar Birthday : 5 ದಿನ ಅಭಿಮಾನಿಗಳಿಂದ ಪವರ್‌ಸ್ಟಾರ್ ಹುಟ್ಟುಹಬ್ಬ ಆಚರಣೆ: ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಬಾಕಿಯಿದೆ. ಆಗಲೇ ಅಪ್ಪುಅಭಿಮಾನಿಗಳು ಪವರ್‌ಸ್ಟಾರ್ ಬರ್ತ್‌ಡೇ ಸಂಭ್ರಮ ಆರಂಭಿಸಿದ್ದಾರೆ. ಒಂದ್ಕಡೆ ಜೇಮ್ಸ್. ಇನ್ನೊಂದ್ಕಡೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಇವೆರಡನ್ನೂ ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ಒಂದು ತಿಂಗಳಿನಿಂದಲೇ ಸಂಭ್ರಮ ಶುರುಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಹಿಂದೆಂದೂ ಆಚರಣೆ ಮಾಡದಷ್ಟು ಅದ್ಧೂರಿಯಾಗಿ ಮಾಡಬೇಕು ಅಂತ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ.

Recommended Video

James Celebration | ಅಪ್ಪುಗಾಗಿ 5 ದಿನ ಮೀಸಲಿಟ್ಟ ಅಭಿಮಾನಿ ದೇವರುಗಳು

ಮಾರ್ಚ್ 16 ರ ಬೆಳಗ್ಗೆಯಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮ ಆರಂಭ ಆಗಲಿದೆ. ಅಪ್ಪು ಮಾಡಿದ ಸಮಾಜ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಐದು ದಿನ ನಿರಂತರವಾಗಿ ಸಮಾಜಮುಖಿ ಕೆಲಸಗಳಲ್ಲಿ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಮಾರ್ಚ್ 16 ರಿಂದ ಆರಂಭ ಆಗುವ ಈ ಆಚರಣೆ ಮಾರ್ಚ್ 20ರವರೆಗೂ ಬಿಡುವಿಲ್ಲದೆ ನಡೆಯಲಿದೆ. ಈಗಾಗಲೇ ಅಭಿಮಾನಿಗಳು ಐದೂ ದಿನದ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ.

 ಮಾರ್ಚ್ 16ರ ಕಾರ್ಯಕ್ರಮದ ಪಟ್ಟಿ

ಮಾರ್ಚ್ 16ರ ಕಾರ್ಯಕ್ರಮದ ಪಟ್ಟಿ

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮಾರ್ಚ್ 16ರಿಂದಲೇ ಅಖಾಡಕ್ಕಿಳಿಯಲಿದ್ದಾರೆ. ಇಂದು (ಮಾರ್ಚ್ 16) ಬೆಳಗ್ಗೆ ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ 46 ಸ್ಟಾರ್‌ಗಳನ್ನು ಕಟ್ಟಲಿದ್ದಾರೆ. ಇದೇ ಚಿತ್ರಮಂದಿರಲ್ಲಿ ಸಕ್ಕರೆ ಖಾಯಿಲೆ ಇದ್ದವರಿಗೆ ಹೆಲ್ತ್ ಕಿಟ್‌ಗಳನ್ನು ವಿತರಣೆ ಮಾಡಲಿದ್ದಾರೆ. ಜೊತೆಗೆ ಅವರಿಗಾಗಿ ಆರೋಗ್ಯ ತಪಾಸಣೆ ಕೂಡ ಮಾಡಲಿದ್ದಾರೆ. ಇದೇ ದಿನ ಸಂಜೆ 7.30ಕ್ಕೆ ಸಿದ್ದೇಶ್ವರ ಚಿತ್ರಮಂದಿರದಲ್ಲಿ 31 ಚಿತ್ರದ ವಾಲ್ ಆಫ್ ಫ್ರೇಂ ಅನಾವರಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸರಿಯಾಗಿ 11.59 ನಿಮಿಷಕ್ಕೆ ಅಣ್ಣಾವ್ರ ಮಕ್ಕಳು ಹಾಗೂ ಮೊಮ್ಮಕ್ಕಳು ಮತ್ತು ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ ಮಾಡಲಿದ್ದಾರೆ.

 ಅಪ್ಪು ಹುಟ್ಟುಹಬ್ಬದ ದಿನದ ಕಾರ್ಯಕ್ರಮ

ಅಪ್ಪು ಹುಟ್ಟುಹಬ್ಬದ ದಿನದ ಕಾರ್ಯಕ್ರಮ

ಮಾರ್ಚ್ 17ನೇ ತಾರೀಕು ಕೂಡ ಅಪ್ಪು ಅಭಿಮಾನಿಗಳಿಂದ ಸಂಭ್ರಮ ಜೋರಾಗಿರುತ್ತೆ. ಬೆಳಗ್ಗೆ 5 ಗಂಟೆಗೆ ಕಮಲಾನಗರ ವೀರಭದ್ರೇಶ್ವರ ಹಾಗೂ ವೀರೇಶ್ ಚಿತ್ರಮಂದಿರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಲಿದ್ದಾರೆ. ಬೆಳಗ್ಗೆ 6 ಗಂಟೆಗೆ ರಾಘಣ್ಣ, ಶ್ರೀಮುರಳಿ, ಧ್ರುತಿ ಪುನೀತ್ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಹಾಗೂ ಯುವ ರಾಜ್‌ಕುಮಾರ್, ಧೀರೇನ್, ಧನ್ಯಾ ರಾಮ್‌ಕುಮಾರ್ ಸೇರಿದಂತೆ ಇಡೀ ಕುಟುಂಬ 'ಜೇಮ್ಸ್' ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಇವರೇ ಬೆಳಗ್ಗೆ 10 ಗಂಟೆಗೆ ವೀರಭದ್ರೇಶ್ವರ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ.

 ಹೆಲಿಕಾಪ್ಟರ್‌ನಿಂದ ಹೂ ಮಳೆ

ಹೆಲಿಕಾಪ್ಟರ್‌ನಿಂದ ಹೂ ಮಳೆ

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನೂರೆಂಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಎರಡು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದಾರೆ. ಒಂದು ಹೆಲಿಕಾಪ್ಟರ್‌ ಅಪ್ಪು ಪುಣ್ಯಭೂಮಿಗೆ 4 ಕಡೆಗಳಿಂದಲೂ ಬೆಳಗ್ಗೆ 9.30ಕ್ಕೆ ಹೂಮಲೆ ಸುರಿಸಲಿದೆ. ಬಳಿಕ ಬೆಳಗ್ಗೆ 9.40ಕ್ಕೆ ಕಮಲಾನಗರ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಮೇಲೆ ಹೂಮಳೆ ಸುರಿಸಲಿದೆ. ಎರಡನೇ ಹೆಲಿಕಾಪ್ಟರ್ ಬೆಳಗ್ಗೆ 9.35ಕ್ಕೆ ಪ್ರಸನ್ನ ಚಿತ್ರಮಂದಿರದ ಮೇಲೆ ಪುಷ್ಪಾರ್ಚನೆ ಮಾಡಿದರೆ, 9.40ಕ್ಕೆ ವೀರೇಶ್ ಚಿತ್ರಮಂದಿರದ ಮೇಲೆ ಪುಷ್ಪಾರ್ಚನೆ ಮಾಡಲಿದೆ.

 ಮೂರು ದಿನ ನಿಲ್ಲದ ಸಂಭ್ರಮ

ಮೂರು ದಿನ ನಿಲ್ಲದ ಸಂಭ್ರಮ

ಮಾರ್ಚ್ 18ರಂದು 'ಜೇಮ್ಸ್' ಸಿನಿಮಾ ನೋಡಲು ಬರುವ ಜನರಿಗೆ ಅಪ್ಪು ಅಭಿಮಾನಿಗಳು ಅನ್ನದಾನ ಮಾಡಲಿದ್ದಾರೆ. ಬೇರೆ ಚಿತ್ರಮಂದಿರಗಳಲ್ಲೂ ಕೆಲವು ಕಾರ್ಯಕ್ರಮಗಳು ಹಮ್ಮಿಕೊಂಡಿದ್ದಾರೆ. ಮಾರ್ಚ್ 19ರಂದು ಕುರುಬರ ಹಳ್ಳಿ ಸರ್ಕಲ್‌ನಿಂದ ವೀರೇಶ್ ಚಿತ್ರಮಂದಿರದವರೆಗೂ ಸ್ಟಾರ್ ಮೆರವಣಿಗೆ ನಡೆಯಲಿದೆ. ಇನ್ನು ಮಾರ್ಚ್ 20 ಭಾನುವಾರದಂದು ರಾಜಾಜಿನಗರ 6ನೇ ಬ್ಲಾಕ್‌ನಿಂದ ವೀರೇಶ್ ಚಿತ್ರಮಂದಿರದವರೆಗೆ ಅಪ್ಪು ಮೆರವಣಿಗೆ. ಬಳಿಕ ವೀರೇಶ್ ಸಮಸ್ತ ಅಪ್ಪು ಅಭಿಮಾನಿಗಳಿಂದ ಸಂಭ್ರಮಾಚರಣೆ.

More from Filmibeat

English summary
Puneeth Rajkumar fans celebrating his birthday with James for 5 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X