'ಪುನೀತ್‌ಗಾಗಿ ವರ್ಷಕ್ಕೊಂದು ಹಾಡು ಕೊಡಿ ಅದೇ ನಮಗೆ ಅಭಿಮಾನದ ಗೀತೆ': ಅಭಿಮಾನಿಗಳ ಒತ್ತಾಸೆ

ಸ್ಯಾಂಡಲ್‌ವುಡ್ ಪವರ್‌ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅಜರಾಮರ. ಅವರ ನೆನಪು ಸದಾ ಇರಬೇಕು ಅಂತ ಅಭಿಮಾನಿಗಳು ಯತ್ನಿಸುತ್ತಿದ್ದಾರೆ. ಪುನೀತ್ ಸಿನಿಮಾಗಳು, ಅವರ ಸಮಾಜ ಸೇವೆ ಎಲ್ಲವೂ ಯುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗಿದೆ. ಅಪ್ಪು ನಡೆದ ಹಾದಿಯಲ್ಲೇ ತಾವು ಬದುಕಬೇಕು ಅಂತ ಅಭಿಮಾನಿಗಳೂ ಕೂಡ ತಮ್ಮ ಕೈಯಲ್ಲಾದ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 24 ದಿನ ಕಳೆದಿವೆ. ಇನ್ನೂ ಅಪ್ಪು ಅಗಲಿದ ನೋವು ಮಾತ್ರ ಕಡಿಮೆಯಾಗಿಲ್ಲ. ಸದಾ ಪುನೀತ್ ನೆನೆಪಿನಲ್ಲಿ ಬದುಕುತ್ತಿರುವ ಅಭಿಮಾನಿಗಳ ಹೊಸ ಆಸೆಯೊಂದನ್ನು ಕನ್ನಡ ಚಿತ್ರರಂಗದ ನಿರ್ದೇಶಕರು ಈಡೇರಿಸಬೇಕಿದೆ. ಅದರಲ್ಲೂ ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್‌ ಮುಂದೆ ಅಪ್ಪು ಅಭಿಮಾನಿಗಳು ಹೊಸ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆ ಸಂತೋಷ್ ಆನಂದ್ ರಾಮ್ ಕೂಡ ಒಪ್ಪಿ ಮಾತು ಕೊಟ್ಟಿದ್ದಾರೆ.

'ಅಪ್ಪುಗಾಗಿ ವರ್ಷಕ್ಕೊಂದು ಹಾಡು ಕೊಡಿ'

'ಅಪ್ಪುಗಾಗಿ ವರ್ಷಕ್ಕೊಂದು ಹಾಡು ಕೊಡಿ'

ಅಪ್ಪು ನಮ್ಮನ್ನೆಲ್ಲಾ ಅಗಲಿದ್ದಾರೆ ಅನ್ನೋದನ್ನು ಯಾರು ನಂಬಲು ರೆಡಿಯಿಲ್ಲ. ಅದರಲ್ಲೂ ಅಭಿಮಾನಿಗಳಿಗಂತೂ ಇದು ಇನ್ನೂ ಒಂದು ಕೆಟ್ಟ ಕನಸು ಅಂತಲೇ ಭಾವಿಸಿದ್ದಾರೆ. ಆದರೂ, ನೋವನ್ನು ನುಂಗಿಕೊಂಡು ಅಪ್ಪು ಅಜರಾಮರನ್ನಾಗಿಸಲು ಮುಂದಾಗಿದ್ದಾರೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಯುವರತ್ನ ನಿರ್ದೇಶಕ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್‌ಗಾಗಿ ವರ್ಷಕ್ಕೊಂದು ಹಾಡು ಮಾಡಿ, ಅದೇ ನಮಗೆ ರಾಷ್ಟ್ರ ಗೀತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ. ಸಂತೋಷ್ ಆನಂದ್‌ರಾಮ್ ಕೂಡ ಅಭಿಮಾನಿಗಳಿಗೆ ಮಾತು ನೀಡಿದ್ದಾರೆ.

 '1000% ಪಕ್ಕಾ' ಮಾತು ಕೊಟ್ಟ ನಿರ್ದೇಶಕ

'1000% ಪಕ್ಕಾ' ಮಾತು ಕೊಟ್ಟ ನಿರ್ದೇಶಕ

ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಂತೋಷ್ ಆನಂದ್‌ರಾಮ್ ಪ್ರತಿಕ್ರಿಯಿಸಿದ್ದಾರೆ. ಅಪ್ಪು ನೆನಪಲ್ಲಿ ವರ್ಷಕ್ಕೊಂದು ಹಾಡು ಮಾಡಬೇಕು ಅನ್ನುವ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. '1000% ಪಕ್ಕಾ' ಅಂತ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿರ್ದೇಶಕರು ಮಾತು ನೀಡಿದ್ದಾರೆ. ನಿರ್ದೇಶಕನ ಪ್ರತಿಕ್ರಿಯೆಗೆ ಅಪ್ಪು ಫ್ಯಾನ್ಸ್ ಖುಷಿಯಾಗಿದ್ದಾರೆ.

 'ಬೊಂಬೆ ಹೇಳುತೈತೆ' ಅಭಿಮಾನದ ಗೀತೆ

'ಬೊಂಬೆ ಹೇಳುತೈತೆ' ಅಭಿಮಾನದ ಗೀತೆ

ಸಂತೋಷ್ ಆನಂದ್‌ರಾಮ್ ಹಾಗೂ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಬಂದ ಎರಡು ಸಿನಿಮಾಗಳಿಗೂ ಮೆಚ್ಚುಗೆ ವ್ಯಕ್ತವಾಗಿದೆ. ರಾಜಕುಮಾರ ಹಾಗೂ ಯುವರತ್ನ ಈ ಎರಡೂ ಸಿನಿಮಾಗಳನ್ನೂ ಪುನೀತ್ ಅಭಿಮಾನಿಗಳು ಹಾಡಿ ಹೊಗಳಿ ಕೊಂಡಾಡಿದ್ದರು. ಅದರಲ್ಲೂ ಬೊಂಬೆ ಹೇಳುತ್ತೈತೆ ಹಾಡಂತೂ ಇಂದಿಗೂ ಅಭಿಮಾನಿಗಳ ಅಚ್ಚು-ಮೆಚ್ಚಿನ ಗೀತೆ. ಸದ್ಯ ಈ ಹಾಡು ಅಪ್ಪು ಅಭಿಮಾನಿಗಳ ಅಭಿಮಾನದ ಗೀತೆಯಾಗಿದೆ. " ಈ ಸಂದರ್ಭದಲ್ಲಿ ನಾನು ಏನನ್ನೂ ಮಾತಾಡಲು ಬಯಸುವುದಿಲ್ಲ. ನನಗೆ ಈ ಶಾಕ್‌ನಿಂದ ಇನ್ನೂ ಹೊರಬರಲು ಆಗುತ್ತಿಲ್ಲ. ನಾನು ಸದ್ಯ ಏನೂ ಮಾಡುತ್ತಿಲ್ಲ." ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಪ್ರತಿಕ್ರಿಯಿಸಿದ್ದಾರೆ.

ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡಿ

ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡಿ

ಪುನೀತ್ ಅಗಲಿಕೆ ಬಳಿಕ ಯುವರಾಜ್‌ಕುಮಾರ್‌ಗಾಗಿ ಸಿನಿಮಾ ಮಾಡಿ. ಅವರಲ್ಲೇ ಪುನೀತ್ ರಾಜ್‌ಕುಮಾರ್‌ರನ್ನು ಕಾಣುತ್ತೇವೆ ಎಂದು ಅಭಿಮಾನಿಗಳು ಸಂತೋಷ್ ಆನಂದ್‌ರಾಮ್ ಬಳಿ ಮತ್ತೆ ಕೇಳಿಕೊಂಡಿದ್ದಾರೆ. " ನಾನು ಇನ್ನೂ ಇದ್ಯಾವುದರ ಬಗ್ಗೆನೂ ಯೋಚನೆ ಮಾಡಿಲ್ಲ. ಏನೂ ಯೋಚನೆ ಮಾಡಲು ಆಗುತ್ತಿಲ್ಲ. ಕೆಲವು ಸಮಯ ಸುಮ್ಮನೆ ಇದ್ದು ಬಿಡಬೇಕು ಅಂತ ಅನಿಸುತ್ತಿದೆ." ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಪ್ರತಿಕ್ರಿಯಿಸಿದ್ದಾರೆ.

More from Filmibeat

English summary
Puneeth Rajkumar fans new demand with Santhosh Anadrram that, they want every year penned Puneeth song. They will celebrate that song as fans anthem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X