"ಏನು ಮಾಡದೇ ನಿಮ್ಮ ಮುಂದೆ ಏನ್ ಕಿತ್ತಾಕ್ಲಿ"; ಯುವ ಡೈಲಾಗ್‌ಗೆ ಕಳೆದು ಹೋದ ಹೊಸಪೇಟೆ ಜನತೆ
ಹೊಸಪೇಟೆ: ದೊಡ್ಮನೆಯ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಯುವ ರಾಜ್‌ಕುಮಾರ್ 'ಯುವ'ನಾಗಿ ತೆರೆಮೇಲೆ ಅಬ್ಬರಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಇತ್ತ ಚಿತ್ರತಂಡ ಕೂಡ ಕೊನೆಯ ಹಂತದ ಪ್ರಚಾರ ಮಾಡುತ್ತಿದೆ. ಮೊದಲ ನಿಗದಿಯಾದಂತೆ ಹೊಸಪೇಟೆಯಲ್ಲಿ ಯುವ ರಾಜ್‌ಕುಮಾರ್ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ಜರುಗಿದೆ.
ಯುವ ರಾಜ್‌ಕುಮಾರ್ ಬಗ್ಗೆ ರಾಘಣ್ಣ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಗಣ್ಯರು ವೇದಿಕೆ ಏರಿ ಮಾತಾಡುತ್ತಿದ್ದಂತೆ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ರಾಘಣ್ಣನೇ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಭಾವನಾತ್ಮಕವಾಗಿ ಮಾತಾಡಿದ್ದರು. ಯುವ ರಾಜ್‌ಕುಮಾರ್ ಅಪ್ಪು ಮಗನಿದ್ದಂತೆ ಎಂದು ಹೇಳಿದ್ದರು. ಆ ಬಳಿಕ ಮಾತಾಡಿದ ಯುವ ಹೊಸಪೇಟೆ ಜನರ ಹರ್ಷವನ್ನು ದುಪ್ಪಟ್ಟು ಮಾಡಿದ್ರು.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲುವುದಕ್ಕೂ ಮುನ್ನವೇ ಹೊಂಬಾಳೆ ಫಿಲ್ಮ್ಸ್‌ಗೆ ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡಿ ಅಂದಿದ್ದರು. ಆಮೇಲೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಂಬಾಳೆಗೆ ಮನವಿ ಮಾಡಿದ್ದರು. ಆ ಎಲ್ಲಾ ಮಾತಗಳನ್ನು ವೇದಿಕೆ ಮೇಲೆ ಯುವ ರಾಜ್‌ಕುಮಾರ್ ನೆನಪಿಸಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ಹೋದಲೆಲ್ಲಾ ಅಪ್ಪು ಮಗ ಬಂದ ಅಂತಾರೆ"
ಯುವ ರಾಜ್‌ಕುಮಾರ್ ಸಿನಿಮಾದಲ್ಲಿ ಇನ್ಮುಂದೆ ಅಪ್ಪು ನೋಡುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗುತ್ತೆ. ಹೀಗಾಗಿ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಯುವ ತನ್ನ ಜರ್ನಿಯನ್ನೇ ತೆರೆದಿಟ್ಟಿದ್ದಾರೆ. "ನಮ್ಮ ತಂದೆನೇ ಹೇಳ್ಬಿಟ್ರು ಅಪ್ಪು ಮಗ ಅಂತ. ಎಲ್ಲಾ ಕಡೆ ನಾನು ಹೋಗುತ್ತಿರುತ್ತೇನೆ. ಎಲ್ಲರೂ ಹೇಳ್ತಿರುತ್ತಾರೆ. ಅಪ್ಪು ಮಗ ಬಂದ. ಅಪ್ಪು ಮಗ ಬಂದ ಅಂತ. ನನಗೆ ಎಷ್ಟು ಸಂತೋಷ ಆಗುತ್ತೆ ಗೊತ್ತಾ? ಅಂದರೆ, ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ. ಅವರು ನನ್ನ ಶಕ್ತಿಯಾಗಿ ನಿಂತಿದ್ದಾರೆ. ಅವರು ನನ್ನ ಕೈ ಹಿಡಿದು ನಡೆಸುತ್ತಿದ್ದಾರೆ. ಇಲ್ಲಿವರೆಗೂ ಕರೆದುಕೊಂಡು ಬಂದು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಇನ್ಮುಂದೆ ನೀವು ಹೇಗೆ ಹೇಳ್ತಿರೋ ಹಂಗೆ." ಎಂದು ಯುವ ವೇದಿಕೆ ಮೇಲೆ ಹೇಳಿದ್ದಾರೆ.
"ರಾಜ್‌ಕುಮಾರ್ ಕುಟುಂಬಕ್ಕೆ ಎಲ್ಲಾ ಸುಲಭ ಅಂತಾರೆ"
"ಸುಮಾರು ಜನ ಹೇಳ್ತಾರೆ. ಏನು ರಾಜ್‌ಕುಮಾರ್ ಕುಟುಂಬ. ಅವರಿಗೇನು ಎಲ್ಲಾ ಸುಲಭ. ಯಾಕೆ ಓದುತ್ತಾರೆ? ಸುಮ್ಮನೆ ಅವರ ತಂದೆ ತಾಯಿ ಹೆಸರು ಕೇಳಿದರೆ ಸಾಕು ಸಿನಿಮಾಗೆ ಬರುತ್ತಾರೆ ಅಂತ. ಆದರೆ, ಅದು ಅಷ್ಟು ಸುಲಭವಾದ ಮಾತಲ್ಲ. ನನ್ನ ಸುಮಾರು ವರ್ಷದ ಕನಸು ನಾನು ಇಲ್ಲಿ ಬಂದು ನಿಲ್ಲಬೇಕು ಅಂತ. ಚಿಕ್ಕ ವಯಸ್ಸಿನಿಂದಲೇ ಎಲ್ಲರೂ ಡಿಸೈಡ್ ಮಾಡ್ಬಿಟ್ರು ನೀನು ಆಕ್ಟರ್ ಆಗ್ತೀಯಾ ಅಂತ. ನನಗೆ ಎಲ್ಲರೂ ನನ್ನ ಫ್ಯೂಚರ್ ಡಿಸೈಡ್ ಮಾಡ್ತಿದ್ದಾರೆ ಅಂದ್ರೆ, ನಾನೇನು ಮಾಡ್ಲಿ. ನನ್ನ ಆಸೆಯೇನು? ಅದಕ್ಕೆ ನಾನು ಸಿನಿಮಾ ಇಂಡಸ್ಟ್ರಿನೇ ಬೇಡ ಅಂದೆ. ಆದರೆ, ನನ್ನ ಮನಸ್ಸಿನಲ್ಲಿ ಸಿನಿ ಇಂಡಸ್ಟ್ರಿಗೆ ಬರಬೇಕು ಅನ್ನೋ ಆಸೆಯಿತ್ತು. " ಎಂದಿದ್ದಾರೆ.

"ಏನೂ ಮಾಡದೇ ಬಂದು ಏನು ಕಿತ್ತಾಕ್ಲಿ?"
"ನಿಮ್ಮ ಮುಂದೆ ಬಂದು ನಿಲ್ಲಬೇಕು ಅಂದರೆ, ಏನಾದ್ರೂ ಒಂದು ಕಾನ್ಫಿಡೆನ್ಸ್ ಇರಬೇಕಲ್ವಾ? ಏನೂ ಮಾಡದೇ ಏನು ಬಂದು ಕಿತ್ತಾಕ್ಲಿ ಇಲ್ಲಿ? ನೀವು ಬಂದು ಕೇಳಲ್ವಾ? ನಿಮಗೆ ಹಕ್ಕಿಲ್ವಾ? ಇವತ್ತು ನಮ್ಮ ಇಡೀ ಮನೆ. ಇಡೀ ಕುಟುಂಬ ನಡೀತಿರೋದೇ ನಿಮ್ಮಿಂದ. ಇದು ಸತ್ಯವಾದ ಮಾತು. ನಿಮ್ಮೆಲ್ಲರಿಗೂ ಗೊತ್ತು, ನನಗೆ ಬೇರೆ ಕೆಲಸ ಇಲ್ಲ. ನಮಗೆ ಗೊತ್ತಿರೋದೇ ಸಿನಿಮಾ. ನಿಮ್ಮೆಲ್ಲರಿಗೆ ಸಂತೋಷ ಹಾಗೂ ಪ್ರೀತಿ ಕೊಡುವುದೇ ಜವಾಬ್ದಾರಿ. ಇಷ್ಟು ವರ್ಷ ಅದನ್ನೇ ಮಾಡಿಕೊಂಡು ಬಂದು ಇಲ್ಲಿ ನಿಂತಿದ್ದೇವೆ." ಎಂದು ಯುವ ಹೇಳಿದ್ದಾರೆ.
ಈ ಸಿನಿಮಾ ಆಗಿದ್ದೇ ನಿಮ್ಮಿಂದ"
"ಸುಮಾರು ವರ್ಷ ಏನೋ ಟ್ರೈ ಮಾಡಿ ಒಂದು ಸಿನಿಮಾ ಆಗ್ಬೇಕಿತ್ತು ಅದು ಆಗಲಿಲ್ಲ. ಮುಂದೆ ಏನು ಮಾಡ್ತೀನಿ ನನಗೆ ಗೊತ್ತಿಲ್ಲ. ಯಾರನ್ನೇ ಕೇಳಿದರೂ, ಎಲ್ಲಾ ನಿರ್ದೇಶಕರು ಬ್ಯುಸಿ. ಯಾರ ಹತ್ರ ಹೋಗಲಿ, ಯಾರ ಹತ್ತಿರ ಮಾತಾಡಲಿ. ಸುಮ್ಮನೆ ಕೂತಿದ್ದೆ. ಯಾರ ಬಳಿ ಚಾನ್ಸ್ ಸಿಗುತ್ತೆ ಅಂತ. ಯಾರು ಅಂದುಕೊಳ್ಳಲ್ಲ ಈ ಮಾತು ನಿಜ ಅಂತ. ನಮ್ಮ ಚಿಕ್ಕಪ್ಪ ಯಾವಾಗಲೋ ಹೇಳಿದ್ರಂತೆ ವಿಜಯ್ ಕಿರಗಂದೂರು ಸರ್‌ಗೆ ನೀವು ಗುರು ಸಿನಿಮಾ ಮಾಡಬೇಕು ಅಂತ. ಆ ಮೇಲೆ ನಮ್ಮ ಆಂಟಿ ಹೇಳಿದ್ರು. ನೀವೇ ಗುರುನಾ ಲಾಂಚ್ ಮಾಡಬೇಕು ಅಂತ. ಆ ಮೇಲೆ ಎಷ್ಟೋ ಜನ ನೀವು ಸಂತೋಷ್ ಸರ್‌ಗೆ ನೀವು ಯುವ ಸಿನಿಮಾ ಮಾಡಿ ಅಂತ. ಅದು ನನಗೆ ಗೊತ್ತು. ಈ ಸಿನಿಮಾ ಆಗಿದ್ದೇ ನಿಮ್ಮಿಂದ. ನೀವೇ ಕರೆದುಕೊಂಡು ಬಂದಿದ್ದೀರ. ನೀವೇ ನಿಲ್ಲಿಸಿದ್ದೀರ."


Click it and Unblock the Notifications











