James: 'ಜೇಮ್ಸ್' ತೆಗೆದು 'ದಿ ಕಾಶ್ಮೀರ್ ಫೈಲ್ಸ್', RRR ಪ್ರದರ್ಶನ: ಅಪ್ಪು ಫ್ಯಾನ್ಸ್ ವಾರ್ನಿಂಗ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್'. ಕಳೆದ ಒಂದು ವಾರದಿಂದ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸದ್ಯ ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾಗೆ ಉತ್ತಮ ಶೇರ್ ಪಡೆದಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆ ಕಾಣುತ್ತಿದ್ದರೂ, ಸಿನಿಮಾವನ್ನು ಕೈ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

Recommended Video

ಜೇಮ್ಸ್ ವಿಚಾರದಲ್ಲಿ ಬಿಜೆಪಿ ಮಾಡ್ತಾ ಇರೋದು ಸರಿಯಲ್ಲ

ಬಾಲಿವುಡ್ ಸಿನಿಮಾ 'ದಿ ಕಾಶ್ಮೀರ್ ಫೈಲ್' ಹಾಗೂ ಪ್ಯಾನ್ ಇಂಡಿಯಾ ಸಿನಿಮಾ RRR ಗೋಸ್ಕರ 'ಜೇಮ್ಸ್' ಸಿನಿಮಾವನ್ನು ಎತ್ತಂಗಡಿ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. 'ಜೇಮ್ಸ್' ಪ್ರದರ್ಶಿಸುತ್ತಿರುವ ಥಿಯೇಟರ್ ಮಾಲೀಕರು ಹಾಗೂ ಸರ್ಕಾರಕ್ಕೆ ತಮ್ಮದೇ ಶೈಲಿಯಲ್ಲಿ ವಾರ್ನಿಂಗ್ ಕೊಡುತ್ತಿದ್ದಾರೆ.

ಏನಂತಾರೆ 'ಜೇಮ್ಸ್' ನಿರ್ದೇಶಕ?

ಏನಂತಾರೆ 'ಜೇಮ್ಸ್' ನಿರ್ದೇಶಕ?

'ಜೇಮ್ಸ್' ಸಿನಿಮಾ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಕೆಲವು ಕಡೆ ಎರಡು ಸೆಂಟರ್‌ಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಅಲ್ಲಿ ಒಂದು ಸೆಂಟರ್‌ ಅನ್ನು ನಾವೇ ಬಿಟ್ಟು ಕೊಡುತ್ತೇವೆ. ಆದರೆ, ಎಲ್ಲವೂ ನಮಗೆ ಕೊಡಿ ಅಂದರೆ ಹೇಗೆ? ಸಿನಿಮಾದ ಶೇರ್ ಚೆನ್ನಾಗಿ ಬರುತ್ತಿರುವ ಚಿತ್ರಮಂದಿರಗಳೂ 'ಜೇಮ್ಸ್' ತೆಗೆಯುತ್ತೇವೆ ಎನ್ನುತ್ತಿದ್ದಾರೆ. ಇದು ಅಭಿಮಾನಿಗಳ ನೋವಿಗೆ ಕಾರಣವಾಗಿದೆ. ಬ್ಯಾನರ್, ಕಟೌಟ್ ಕಾಣದ ಚಿತ್ರಮಂದಿರಗಳೆಲ್ಲಾ ಈ ಸಿನಿಮಾದಿಂದ ಕಂಡಿವೆ. ಅದಕ್ಕೆ ಅಪ್ಪು ಫ್ಯಾನ್ಸ್ ಬೇಸರಗೊಂಡಿದ್ದಾರೆ." ಅಂತ ಫಿಲ್ಮಿ ಬೀಟ್‌ಗೆ ನಿರ್ದೇಶಕ ಚೇತನ್ ಹೇಳಿದ್ದಾರೆ.

'ಜೇಮ್ಸ್' ಸಿನಿಮಾ ತೆಗೆಯಬೇಡಿ

'ಜೇಮ್ಸ್' ಸಿನಿಮಾ ತೆಗೆಯಬೇಡಿ

"ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ 'ಜೇಮ್ಸ್' ಅತ್ಯದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ತೆಲುಗಿನ RRR ಹಾಗೂ ಹಿಂದಿಯ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ 'ಜೇಮ್ಸ್;' ಚಿತ್ರ ಎಲ್ಲೆಲ್ಲಿ ಪ್ರದರ್ಶನ ಕಾಣುತ್ತದೆಯೋ ಅಲ್ಲೆಲ್ಲಾ ತೆಗೆದು ಹಾಕಿ, ಆ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದಾರೆ. ಸಮಸ್ತ ಅಪ್ಪು ಅಭಿಮಾನಿಗಳ ಪರವಾಗಿ, ನಾವು ಮನವಿ ಮಾಡಿಕೊಳ್ಳುವುದು ಏನೆಂದರೆ, ಯಾವುದೇ ಕಾರಣಕ್ಕೂ ಎಲ್ಲಿ 'ಜೇಮ್ಸ್' ಸಿನಿಮಾ ಪ್ರದರ್ಶನ ಕಾಣುತ್ತಿದೆಯೋ ಅಲ್ಲಿ RRR ಆಗಲಿ, 'ದಿ ಕಾಶ್ಮೀರ್ ಫೈಲ್ಸ್' ಆಗಲಿ ಬಿಡುಗಡೆ ಆಗದಂತೆ ವಿನಂತಿ ಮಾಡಿಕೊಳ್ಳುತ್ತೇವೆ. ಇದು ನಮ್ಮ ಮನವಿ ಕೂಡ ವಿನಂತಿ ಕೂಡ." ಎಂದು ಅಪ್ಪು ಅಭಿಮಾನಿ ಕೇಳಿಕೊಂಡಿದ್ದಾರೆ.

ದೇವರ ಜೊತೆ ಆಟ ಆಡಬೇಡಿ

ದೇವರ ಜೊತೆ ಆಟ ಆಡಬೇಡಿ

"ಏನಿದು ಬಿಜೆಪಿ ಸರ್ಕಾರ ಮಾಡುತ್ತಿರುವುದು. ಯಾವುದೋ ಪರಭಾಷಾ ಚಿತ್ರಕ್ಕೊಸ್ಕರ 'ಜೇಮ್ಸ್' ಸಿನಿಮಾ ಮತ್ತು ಜೇಮ್ಸ್ ಚಿತ್ರತಂಡವನ್ನು ಕೊಲ್ಲುತ್ತಿದ್ದಾರೆ. ಈ ಬಿಜೆಪಿ ಸರ್ಕಾರದವರು ಮುಂಚೆನೂ ಇದೇ ರೀತಿ ಮಾಡಿದರು. ಈ 'ಜೇಮ್ಸ್'ಗೂ ಹಾಗೇ ಮಾಡುತ್ತಿದ್ದಾರೆ. ಮುಂಚೆ ಒಬ್ಬ ಮನುಷ್ಯನ ಜೊತೆ ಆಟ ಆಡಿದರು. ಈಗ ಒಬ್ಬ ಮನುಷ್ಯನ ಜೊತೆ ಆಟ ಆಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಟ್ಟೆ ಕೊಡುತ್ತೇವೆ. ಎಲ್ಲಿ ಹೋದರು ಸಿನಿಮಾ ಹೌಸ್‌ಫುಲ್ ಬೋರ್ಡ್ ಕಾಣಿಸುತ್ತಿದೆ. ಇಂತಹ ಸಮಯದಲ್ಲಿ ತೆಗೆದರೆ ಸರಿ ಇರಲ್ಲ." ಎಂದು ಅಪ್ಪು ಅಭಿಮಾನಿ ವಾರ್ನಿಂಗ್ ಕೊಟ್ಟಿದ್ದಾರೆ.

ಬೇರೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ

" ಜೇಮ್ಸ್ ಸಿನಿಮಾ ಕುಟುಂಬ ಸಮೇತರಾಗಿ ಬಂದು ನೋಡುತ್ತಿದ್ದಾರೆ. ಅವರೆಲ್ಲರಿಗೂ ಅವಕಾಶ ಸಿಗಬೇಕು. ಹಾಗಾಗಿ RRR ಹಾಗೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಎಲ್ಲಿ ಥಿಯೇಟರ್‌ಗಳು ಖಾಲಿ ಇವೆಯೋ ಅಲ್ಲಿ ಬಿಡುಗಡೆ ಮಾಡಲಿ. ನಮ್ಮ ಯಾವುದೇ ಅಭ್ಯಂತರವೂ ಇಲ್ಲ." ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

More from Filmibeat

English summary
Puneeth Rajkumar Fans warning for theater owners and govenment for removing James. Here is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X