ಮಹಿಳಾ ದಿನಾಚರಣೆ ವೇಳೆ ಮತ್ತೊಂದು ಮನಮುಟ್ಟುವ ಸಂದೇಶ ನೀಡಿದ ಪುನೀತ್

ಮಹಿಳಾ ದಿನಾಚರಣೆಯಂದು ಮಹಿಳೆಯರ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬಿಎಂಟಿಸಿ ಸಂದೇಶದಾಯಕ ವಿಡಿಯೋವನ್ನು ಹಂಚಿಕೊಂಡಿದೆ. ಶೋಷಣೆ, ಬೆದರಿಕೆಗೆ ಒಳಗಾಗುವ ಮಹಿಳೆಯೊಂದಿಗೆ ನಾವೆಲ್ಲರೂ ಇದ್ದೇವೆ ಎಂಬ ಸಂದೇಶ ನೀಡುವ ಈ ವಿಡಿಯೋದಲ್ಲಿ ಬಿಎಂಟಿಸಿ ರಾಯಭಾರಿ ಪುನೀತ್ ರಾಜ್‌ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ.

'ಕೆಲವೊಮ್ಮೆ, ಸಮಾಜವನ್ನು ಉತ್ತಮಗೊಳಿಸಲು ಬೇಕಾಗಿರುವುದು ಒಗ್ಗಟ್ಟು..!! ಈ ಮಹಿಳಾ ದಿನದಂದು ನಮ್ಮಲ್ಲಿರುವ ಏಕತೆಯನ್ನು ಕಂಡು ಕೊಳ್ಳೋಣ ಹಾಗೂ ಮಹಿಳೆಯರಿಗಾಗಿ ಎಲ್ಲೆಡೆ ಒಟ್ಟಾಗಿ ನಿಲ್ಲೋಣ' ಎಂದು ಬಿಎಂಟಿಸಿ ಕರೆ ನೀಡಿದೆ.

ರಸ್ತೆಯಲ್ಲಿ ಓಡಾಡುವ ಯುವತಿಯರನ್ನು ಚುಡಾಯಿಸುವ ಪೋಲಿಗಳಿಗೆ ತಮ್ಮ ತಪ್ಪಿನ ಅರಿವು ಮೂಡಿಸುವಂತೆ ಯುವತಿಯರ ಜತೆಗೆ ನಾವೂ ಇದ್ದೇವೆ ಎಂದು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪುಂಡರಿಗೆ ಬುದ್ಧಿ ಕಲಿಸುವ ವಿಡಿಯೋ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

 Puneeth Rajkumar BMTC Video On Womens Day Message

'ನೀವೂ ಬರ್ತೀರಾ? ಎಲ್ಲರೂ ಸೇರಿ ನಿರ್ಭಯ ಸಮಾಜ ಕಟ್ಟೋಣ' ಎಂದು ಪುನೀತ್ ರಾಜ್‌ಕುಮಾರ್, ಈ 2.01 ನಿಮಿಷದ ಅಚ್ಚುಕಟ್ಟಾದ ವಿಡಿಯೋದಲ್ಲಿ ಜನರಲ್ಲಿ ಸಾಮಾಜಿಕ ಪ್ರಜ್ಞೆ ಹಾಗೂ ಮಹಿಳಾ ಸುರಕ್ಷತೆಯ ಕುರಿತಾದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಬಿಎಂಟಿಸಿ ಬೆಂಗಳೂರಿನ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸುವುದರ ಜತೆಗೆ ಮಹಿಳೆಯರಿಗೆ ಸುರಕ್ಷತೆಯನ್ನು ನೀಡುತ್ತಿದೆ. ಬೆಂಗಳೂರನ್ನು ಮತ್ತಷ್ಟು ಸುರಕ್ಷಿತವಾಗಿಸೋಣ ಎಂದು ಸಂಸ್ಥೆ ಹೇಳಿದೆ. ಫೇಸ್‌ಬುಕ್, ಟ್ವಿಟ್ಟರ್ ಮುಂತಾದೆಡೆ ಬಿಎಂಟಿಸಿ ಈ ವಿಡಿಯೋ ಹಂಚಿಕೊಂಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಫೇಸ್‌ಬುಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

More from Filmibeat

English summary
BMTC has shared a powerful video message on Women's day. Puneeth Rajkumar calls for women safety in this video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X