Appu Re-Release: ಇಲ್ಲಿ ಇರೋದು ಒಬ್ಬರೇ 'ಅಪ್ಪು' ಲೋಕಲ್: ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿದ ಫ್ಯಾನ್ಸ್
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಅಪ್ಪು' ಸಿನಿಮಾ ರಿಲೀಸ್ ಆಗಿದೆ. ಕರ್ನಾಟಕದಾದ್ಯಂತ ಪುನೀತ್ ರಾಜ್‌ಕುಮಾರ್ ಹೀರೋ ಆಗಿ ನಟಿಸಿದ ಚೊಚ್ಚಲ ಸಿನಿಮಾ ಗ್ರ್ಯಾಂಡ್ ರಿಲೀಸ್ ಕಂಡಿದೆ. ಅಪ್ಪು ಅಭಿಮಾನಿಗಳು ಬೆಳ್ಳಬೆಳಗ್ಗೆನೇ ಈ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಮತ್ತೆ ಕೆಲವರು ಭಾವುಕರಾಗಿದ್ದಾರೆ.
2002ರಲ್ಲಿ ತೆರೆಕಂಡಿದ್ದ 'ಅಪ್ಪು' ಸಿನಿಮಾ 23 ವರ್ಷಗಳ ಬಳಿಕ ಮತ್ತೆ ಬಿಡುಗಡೆಯಾಗಿದೆ. ಅಭಿಮಾನಿಗಳಿಗೆಂದೇ ಕರ್ನಾಟಕದ ಹಲವು ಭಾಗಗಳಲ್ಲಿ ಬೆಳ್ಳಂಬೆಳಗ್ಗೆನೇ ಫ್ಯಾನ್ಸ್ ಶೋ ಹಾಕಲಾಗಿದೆ. ಬಹುತೇಕ ಎಲ್ಲಾ ಕಡೆಗಳಲ್ಲೂ ಈ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್ ಒಳಗೆ ಹಾಗೂ ಹೊರಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ತಮ್ಮ ಸಂಭ್ರಮವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

'ಅಪ್ಪು' ಹಾಡುಗಳಿಗೆ, ರೊಮ್ಯಾಂಟಿಕ್ ಸಾಂಗ್‌ಗೆ, ಡೈಲಾಗ್‌ಗಳಿಗೆ, ಇಂಟ್ರುಡಕ್ಷನ್ ಸೀನ್‌ಗೆ ಜನರು ಶಿಳ್ಳೆಗಳನ್ನು ಹಾಕುತ್ತಿದ್ದಾರೆ. ಕೆಲವು ಹಾಡುಗಳು ಹಾಗೂ ಸೀನ್‌ಗಳಿಗೆ ಮೊಬೈಲ್ ಲೈಟ್ ಆನ್ ಮಾಡಿಕೊಂಡು ಗೌರವ ಸೂಚಿಸಿದ್ದಾರೆ. ಅದರಲ್ಲೂ "ತಾಲಿಬಾನ್ ಅಲ್ಲ ಅಲ್ಲ" ಸಾಂಗ್‌ಗಂತೂ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟಿದ್ದಾರೆ. ಹಾಗಿದ್ದರೆ ಟ್ವಿಟರ್ (ಎಕ್ಸ್) ರೆಸ್ಪಾನ್ಸ್ ಹೇಗಿದೆ? ಅನ್ನೋದನ್ನು ನೋಡೋಣ.
ತಾಲಿಬಾನ್ ಹಾಡಿಗೆ ಮಸ್ತ್ ರೆಸ್ಪಾನ್ಸ್
'ಅಪ್ಪು' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಅದು ಗುರುಕಿರಣ್ ಕಂಪೋಸ್ ಮಾಡಿದ ಹಾಡು. ಇದರ ಮೂಲಕವೇ ಪುನೀತ್ ರಾಜ್‌ಕುಮಾರ್ ಮಸ್ತ್ ಡ್ಯಾನ್ಸ್. ಕನ್ನಡ ಚಿತ್ರರಂಗಕ್ಕೆ ಈ ಮೂಲಕ ಅದ್ಭುತ ಡ್ಯಾನ್ಸರ್ ಒಬ್ಬ ಸಿಕ್ಕಿದ್ದರು. ಈ ಹಾಡು ತೆರೆಮೇಲೆ ಬಂದಾಗ ಅಭಿಮಾನಿಗಳು ಮಸ್ತ್ ಆಗಿ ಎಂಜಾಯ್ ಮಾಡಿದ್ದಾರೆ. ಸೀಟ್ ಮೇಲಿಂದ ಎದ್ದು ನಿಂತು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಅಪ್ಪು ಒಬ್ಬರೇ ಲೋಕಲ್
49ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 'ಜಾಕಿ' ರಿ ರೀಲಿಸ್ ಆಗಿ ಯಶಸ್ವಿಯಾಗಿತ್ತು. ಆ ಸಿನಿಮಾಗೂ ಮಸ್ತ್ ರೆಸ್ಪಾನ್ಸ್ ಸಿಕ್ಕಿತ್ತು. ಅಂದೇ 'ಅಪ್ಪು' ಸಿನಿಮಾವನ್ನು ರಿಲೀಸ್ ಮಾಡುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆಯಂತೆ ಇಂದು ರಿ ರಿಲೀಸ್ ಮಾಡಲಾಗಿದೆ. 'ಅಪ್ಪು' ಸಿನಿಮಾದ ಲೋಕಲ್ ಡೈಲಾಗ್‌ಗೆ ಶಿಳ್ಳೆಗಳ ಮೇಲೆ ಶಿಳ್ಳೆಗಳು ಬೀಳುತ್ತಿವೆ. ಅಭಿಮಾನಿಗಳು ಸಿನಿಮಾವನ್ನು ಮಸ್ತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.
ಥಿಯೇಟರ್‌ನಲ್ಲಿ ಫುಲ್ ವೈಬ್ಸ್
'ಅಪ್ಪು' ಸಿನಿಮಾ ರಿಲೀಸ್ ಆಗುತ್ತೆ ಅಂದಾಗಲೇ ವಾರದ ಮುಂಚೆನೇ ಸಂಭ್ರಮ ಮನೆ ಮಾಡಿತ್ತು. ಪುನೀತ್ ರಾಜ್‌ಕುಮಾರ್ ಚೊಚ್ಚಲ ಚಿತ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಸಿನಿಮಾದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲಿಂದ ಆರಂಭವೋ ಹಾಡಿಗೆ ಮೊಬೈಲ್ ಟಾರ್ಚ್ ಬಿಟ್ಟು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ಗೆ ಗೌರವ ಸೂಚಿಸಿದ್ದಾರೆ. ಥಿಯೇಟರ್ ಒಳಗೆ ಫುಲ್ ವೈಬ್ಸ್ ಎದ್ದು ಕಾಣುತ್ತಿದೆ.
ಹೊಸಪೇಟೆಯಲ್ಲೂ ಸಂಭ್ರಮ
ಇನ್ನು ಪುನೀತ್ ರಾಜ್‌ಕುಮಾರ್ ಹೈ ಹಾರ್ಡ ಫ್ಯಾನ್ಸ್ ಇರುವ ಹೊಸಪೇಟೆಯಲ್ಲೂ ಸಂಭ್ರಮ ಜೋರಾಗಿದೆ. 'ಅಪ್ಪು' ಸಿನಿಮಾಗೆ ಗ್ರ್ಯಾಂಡ್ ಓಪನಿಂಗ್ ಕೊಟ್ಟಿದ್ದಾರೆ. ಬೆಳ್ಳಂಬೆಳಗ್ಗೆ ಫ್ಯಾನ್ ಶೋನಲ್ಲಿ ಅಪ್ಪು ಸಿನಿಮಾ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಸ್ಕ್ರೀನ್ ಮುಂದೆ ಹೋಗಿ ಸಂಭ್ರಮಿಸಿದ್ದಾರೆ. ಶಿಳ್ಳೆಗಳನ್ನು ಹಾಕಿ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಜಾಲಿ ಗೋ ಜಾಲಿ ಗೋ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.
ಅಪ್ಪು ಸಿನಿಮಾ ಕರ್ನಾಟಕದಾದ್ಯಂತ ಸುಮಾರು 153 ಸ್ಕ್ರೀನ್‌ಗಳಲ್ಲಿ ರಿ ರಿಲೀಸ್ ಆಗಿದೆ. ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್‌ನಿಂದಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇಂದಿನಿಂದ ಅಪ್ಪು ಹುಟ್ಟುಹಬ್ಬದವರೆಗೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತೆ ಅಂತ ನಿರೀಕ್ಷೆ ಮಾಡಲಾಗಿದೆ. ಪುನೀತ್ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











