ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?

ಕನ್ನಡ ರಾಜ್ಯೋತ್ಸವ ಬಂತು ಅಂದ್ರೆ, ಆ ತಿಂಗಳು ಪೂರ್ತಿ ಕನ್ನಡಿಗರಿಗೆ ಹಬ್ಬ. ಅದರಲ್ಲೂ ಕನ್ನಡ ಚಿತ್ರರಂಗಕ್ಕಂತೂ ದೊಡ್ಡ ಹಬ್ಬವೇ ಸರಿ. ಇಲ್ಲಿಂದ ವರ್ಷ ಮುಗಿಯುವವರೆಗೂ ಕನ್ನಡ ಸಿನಿಮಾಗಳ ಪರ್ವ ಜಾರಿಯಲ್ಲಿ ಇರುತ್ತೆ. ಈ ಬಾರಿ ಕೂಡ ಎರಡು ದೊಡ್ಡ ಸಿನಿಮಾಗಳು ಕನ್ನಡಿಗರ ಸಂಭ್ರಮವನ್ನು ದುಪ್ಪಟ್ಟು ಮಾಡಲಿದೆ.

ಕನ್ನಡ ಭಾಷೆಗೂ ಸಿನಿಮಾಗೂ ಭಾವನಾತ್ಮಕ ಸಂಬಂಧವಿದೆ. ಕನ್ನಡ ಭಾಷಾಭಿಮಾನವನ್ನುಹೊತ್ತ ಅದೆಷ್ಟೋ ಸಿನಿಮಾಗಳು ಬಂದಿವೆ. ಕನ್ನಡ ಭಾಷೆ, ಹೋರಾಟ ಇವೆಲ್ಲವೂ ಅದೆಷ್ಟೋ ಸಿನಿಮಾಗಳ ಕಥೆಯೊಳಗೆ ಸೇರಿಕೊಂಡಿದೆ. ಹೀಗೆ ಕನ್ನಡ ಭಾಷೆಯ ಅಭಿಮಾನವನ್ನು ಸಾರುವ ಸಿನಿಮಾಗಳು ಈ ತಿಂಗಳು ಪೂರ್ತಿ ಬಿಡುಗಡೆಯಾಗುತ್ತೆ. ಈಗ ಇಬ್ಬರು ಸೂಪರ್‌ಸ್ಟಾರ್ ಸಿನಿಮಾಗಳು ಸೇರ್ಪಡೆಯಾಗಲಿವೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ' ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕ್ರಾಂತಿ' ರಾಜ್ಯೋತ್ಸವಕ್ಕೆ ರಿಲೀಸ್ ಆಗೋದು ಬಹುತೇಕ ಕನ್ಫರ್ಮ್ ಆದಂತೆಯೇ. ಹಾಗಿದ್ದರೆ, 'ಗಂಧದ ಗುಡಿ' ಹಾಗೂ 'ಕ್ರಾಂತಿ' ಈ ಎರಡು ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತೆ? ಈ ಸಿನಿಮಾಗಳ ಹಿನ್ನೆಲೆಯೇನು? ರಾಜ್ಯೋತ್ಸವಕ್ಕೆ ಯಾಕೆ ರಿಲೀಸ್ ಆಗುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಗಂಧದ ಗುಡಿ' ಅಕ್ಟೋಬರ್ 28ಕ್ಕೆ

'ಗಂಧದ ಗುಡಿ' ಅಕ್ಟೋಬರ್ 28ಕ್ಕೆ

ಪುನೀತ್ ರಾಜ್‌ಕುಮಾರ್ ಅವರ ವಿಭಿನ್ನ ಸಿನಿಮಾ 'ಗಂಧದ ಗುಡಿ' ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಗಂಧದದ ಗುಡಿ' ಸಿನಿಮಾ ಅಕ್ಟೋಬರ್ 28ಕ್ಕೆ ಬಿಡುಗಡೆಯಾಗುತ್ತಿದೆ ಎಂದು ಅನೌನ್ಸ್ ಮಾಡಿದ್ದಾರೆ. ಕನ್ನಡ ನಾಡು, ನೆಲ, ಜಲ ಹಾಗೂ ಪ್ರಾಕೃತಿಕ ಸಂಪತ್ತಿನ ಅನಾವರಣ ಈ ಸಿನಿಮಾದಲ್ಲಿ ಆಗಲಿದೆ. ಅಮೋಘವರ್ಷ ನಿರ್ದೇಶನದ ಈ ಸಿನಿಮಾವನ್ನು ನೋಡಲು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರೆಲ್ಲರೂ ಕಾದು ಕೂತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ 'ಗಂಧದ ಗುಡಿ' ಟೀಸರ್ ಕಾತುರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಪ್ಪು ಮೊದಲ ಪುಣ್ಯ ಸ್ಮರಣೆಗೂ ಮುನ್ನ ರಿಲೀಸ್

ಅಪ್ಪು ಮೊದಲ ಪುಣ್ಯ ಸ್ಮರಣೆಗೂ ಮುನ್ನ ರಿಲೀಸ್

ಅಕ್ಟೋಬರ್ 28ಕ್ಕೆ ಸಿನಿಮಾ ಬಿಡುಗಡೆ ಮಾಡಲು ಎರಡು ಕಾರಣವಿದೆ. ಅಕ್ಟೋಬರ್ 29ಕ್ಕೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ್ನೂ ಅಗಲಿ ಒಂದು ವರ್ಷ ಆಗಲಿದೆ. ಹಾಗಾಗಿ ಅವರ ಮೊದಲ ಪುಣ್ಯ ಸ್ಮರಣೆಗೂ ಒಂದು ದಿನ ಮುನ್ನವೇ 'ಗಂಧದ ಗುಡಿ' ಸಿನಿಮಾ ಬಿಡುಗಡೆಯಾಗಲಿದೆ. ಇದರ ಜೊತೆನೇ ಅಪ್ಪುಗೆ ಈ ಸಿನಿಮಾವನ್ನು ಕನ್ನಡ ರಾಜ್ಯೋತ್ಸವದಂದೇ ಕನ್ನಡಿಗರಿಗೆ ತೋರಿಸಬೇಕು ಅನ್ನೋ ಆಸೆಯಿತ್ತು. ಅಲ್ಲದೆ ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಸಿನಿಮಾ ಆಗಿದ್ದರಿಂದ ರಾಜ್ಯೋತ್ಸವ ಆರಂಭಕ್ಕೂ ಮುನ್ನವೇ 'ಗಂಧದ ಗುಡಿ' ಬಿಡುಗಡೆಯಾಗುತ್ತಿದೆ.

ರಾಜ್ಯೋತ್ಸವಕ್ಕೆ ದರ್ಶನ್ ಅಕ್ಷರ 'ಕ್ರಾಂತಿ'

ರಾಜ್ಯೋತ್ಸವಕ್ಕೆ ದರ್ಶನ್ ಅಕ್ಷರ 'ಕ್ರಾಂತಿ'

ಕನ್ನಡ ರಾಜ್ಯೋತ್ಸವಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಬಿಡುಗಡೆ ತಯಾರಿ ನಡೆದಿದೆ. ಈಗಾಗಲೇ ಬಹುತೇಕ ಸಿನಿಮಾ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನವೆಂಬರ್‌ನಲ್ಲಿಯೇ ಈ ಸಿನಿಮಾ ಬಿಡುಗಡೆ ಮಾಡೋಕೆ ಚಿತ್ರತಂಡ ಮುಂದಾಗಿದೆ. ಮೂಲಗಳ ಪ್ರಕಾರ, 'ಕ್ರಾಂತಿ' ಸಿನಿಮಾ ನವೆಂಬರ್ ಮೊದಲ ವಾರ ಅಥವಾ ಎರಡನೇ ವಾರ ಥಿಯೇಟರ್‌ಗೆ ಲಗ್ಗೆ ಇಡಲಿದೆ. ಹೀಗಾಗಿ ಕನ್ನಡ ಕಹಳೆ ಊದುವ ಎರಡು ಸಿನಿಮಾಗಳು ರಾಜ್ಯೋತ್ಸವದಲ್ಲಿ ಅಬ್ಬರಿಸಲಿದೆ.

ಕನ್ನಡಿಗರಿಗೆ ಎರಡೂ ಸಿನಿಮಾ ನೋಡುವ ಭಾಗ್ಯ!

ಕನ್ನಡಿಗರಿಗೆ ಎರಡೂ ಸಿನಿಮಾ ನೋಡುವ ಭಾಗ್ಯ!

ದರ್ಶನ್ 'ಕ್ರಾಂತಿ' ಸಿನಿಮಾ ಕೂಡ ಕನ್ನಡ ಭಾಷೆ, ಶಾಲೆ ಹಾಗೂ ಶಿಕ್ಷಣ ಮಾಫಿಯಾದ ಸುತ್ತ ಸಾಗುವ ಸಿನಿಮಾ ಎನ್ನಲಾಗಿದೆ. ಹೀಗಾಗಿ ನವೆಂಬರ್ ಸೂಕ್ತ ಸಮಯ ಎಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಮಧ್ಯೆ ಎರಡು ದೊಡ್ಡ ಸಿನಿಮಾಗಳು ಹಿಂದೆ-ಮುಂದೆ ರಿಲೀಸ್ ಆದರೆ ಹೇಗೆ ಎನ್ನ ಆತಂಕ ಕೂಡ ಇದೆ. ಆದರೆ, ಪವರ್‌ಸ್ಟಾರ್ ಸಿನಿಮಾ 'ಗಂಧದ ಗುಡಿ'ಯೇ ಬೇರೆ. ದರ್ಶನ್ 'ಕ್ರಾಂತಿ'ಯೇ ಬೇರೆ. ಹೀಗಾಗಿ ಪ್ರೇಕ್ಷಕರು ಎರಡೂ ಸಿನಿಮಾವನ್ನು ನೋಡುತ್ತಾರೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಒಂದ್ಕಡೆ ದೃಶ್ಯ ವೈಭವ. ಇನ್ನೊಂದ್ಕಡೆ ಶಿಕ್ಷಣ ಸಮರ. ಎರಡೂ ನೋಡುಗರಿಗೆ ವಿಭಿನ್ನ ಅನುಭವ ನೀಡಲಿದೆ.

More from Filmibeat

English summary
Puneeth Rajkumar Gandhada Gudi And Darshan Kranti Movie Back To Back Release, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X