'ಜೇಮ್ಸ್' ಮತ್ತೊಂದು ಸಾಂಗ್ ರಿಲೀಸ್: ಹೆಂಗೈತೆ ಸಲಾಂ ಸೋಲ್ಜರ್?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್' ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದ್ಕಡೆ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟುತ್ತಿದ್ದರೆ, ಇನ್ನೊಂದು ಕಡೆ ಬಿಡುಗಡೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ಅಪ್ಪು ಅಭಿಮಾನಿಗಳು ಕೊನೆಯ ಬಾರಿ ತಮ್ಮ ನೆಚ್ಚಿನ ನಟ ಅಭಿನಯದ ಕೊನೆಯ ಚಿತ್ರಕ್ಕೆ ಗೌರವ ಅರ್ಪಿಸಲು ಸಜ್ಜಾಗಿದ್ದಾರೆ. ಈ ನಡುವೆ 'ಜೇಮ್ಸ್' ತಂಡ ಮತ್ತೊಂದು ಸಾಂಗ್ ಅನ್ನು ರಿಲೀಸ್ ಮಾಡಿದೆ.
ಈಗಾಗಲೇ 'ಜೇಮ್ಸ್' ಅಭಿಮಾನಿಗಳ ಖುಷಿಯಾಗಿ ಪ್ರಮೋಷನಲ್ ಸಾಂಗ್ ಒಂದನ್ನು ರಿಲೀಸ್ ಮಾಡಿದೆ. ಆ ಹಾಡಿದೆ ಸಿನಿಪ್ರಿಯರು ಖುಷಿ ವ್ಯಕ್ತಪಡಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದ 'ಟ್ರೇಡ್‌ಮಾರ್ಕ್' ಸಾಂಗ್ ದಾಖಲೆ ಮಟ್ಟದಲ್ಲಿ ವೀವ್ಸ್ ಪಡೆದುಕೊಂಡಿದೆ. ಈಗ ಎರಡನೇ ಸಾಂಗ್ 'ಸಲಾಂ ಸೋಲ್ಜರ್' ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ರನ್ನು ಸೋಲ್ಜರ್ ಗೆಟಪ್‌ನಲ್ಲಿ ಕಣ್ತುಂಬಿಕೊಳ್ಳಬಹುದು.

'ಜೇಮ್ಸ್' ಸಲಾಂ ಸೋಲ್ಜರ್ ರಿಲೀಸ್
'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನುಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರೊಂದಿಗೆ ಸಿನಿಮಾದ ಹಾಡುಗಳು ಕೂಡ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಎರಡನೇ ಸಾಂಗ್‌ನಲ್ಲಿ ಅಪ್ಪು ಸೋಲ್ಜರ್ ಅವತಾರವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಪುನೀತ್ ರಾಜ್‌ಕುಮಾರ್ ಹಿಂದೆಂದೂ ಇಂತಹದ್ದೊಂದು ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಅಪ್ಪು ಯೋಧನಾಗಿ ಕಾಣಿಸಿಕೊಳ್ಳುತ್ತಿದ್ದು, ಸಿನಿಪ್ರಿಯರು ಇಷ್ಟಪಡುವುದು ಗ್ಯಾರಂಟಿ.

'ಸಲಾಂ ಸೋಲ್ಜರ್' ಹಾಡು ಹೇಗಿದೆ?
"ರಣ ರಣ ರಣಕಲಿಯೋ.. ಯುದ್ಧ ಭುಮಿಗೇನೇ ಇವ ಕಲಿಯೋ.. ಇಡೀ ದೇಶವೇ ನಿನ್ನ ಮನೆಯೋ.. ಧಡ ಧಡ ಧಡ ನಡೆಯೋ.. ನಿನ್ನ ತ್ಯಾಗಕ್ಕೆಂದು ನಾನು ಋಣಿಯೋ.. ಸಲಾಂ ಸೋಲ್ಜರ್.. ನೀ ದೇಶಕೆನೇ ಪವರ್" ಎಂಬ ಸಾಹಿತ್ಯವಿರುವ ಹಾಡು ಇದು. ಈ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಭಾರತೀಯ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಮೇಕಿಂಗ್ ದೃಶ್ಯಗಳನ್ನು ರಿಲೀಸ್ ಮಾಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ರಾಜ್‌ಕುಮಾರ್ ಸ್ಟಂಟ್ಸ್ ಕೂಡ ನೋಡಬಹುದು. ಜೊತೆಗೆ ಕಾಶ್ಮೀರದ ಸುಂದರತಾಣಗಳನ್ನೂ ಈ ಹಾಡಿನಲ್ಲಿ ಕಾಣಬಹುದಾಗಿದೆ.

ಸೈನಿಕರಿಗೆ 'ಜೇಮ್ಸ್' ಅರ್ಪಣೆ
ಸಲಾಂ ಸೋಲ್ಜರ್ ಚಿತ್ರದ ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಸಂಜಿತ್ ಹೆಗ್ಡೆ ಹಾಗೂ ಚರಣ್ ರಾಜ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಸಿನಿಮಾದ ಹಾಡನ್ನು ಬಹುತೇಕ ಕಾಶ್ಮೀರ ಹಾಗೂ ಅದರ ಸುತ್ತಮುತ್ತವೇ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾದ ಪೂರ್ತಿ ಹಾಡಿನಲ್ಲಿ ಪವರ್‌ಸ್ಟಾರ್ ಅನ್ನು ಸೋಲ್ಜರ್ ಆಗಿ ನೋಡಬಹುದು. ಇನ್ನು 'ಜೇಮ್ಸ್' ಸಿನಿಮಾ ಮೊದಲನೇ ಹಾಡು 'ಟ್ರೇಡ್‌ಮಾರ್ಕ್' ಕೂಡ ಹಿಟ್ ಆಗಿದ್ದು, ಸುಮಾರು 11 ಮಿಲಿಯನ್ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.
5 ಮಾಲ್‌ಗಳಲ್ಲಿ 'ಜೇಮ್ಸ್' ಟಿಕೆಟ್ ವಿತರಣೆ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾದ ಟಿಕೆಟ್‌ಗಳನ್ನು ಈಗಾಗಲೇ ವಿತರಣೆ ಮಾಡಲಾಗುತ್ತಿದೆ. ಒಂದು ವಾರ ಮುನ್ನವೇ ಕೇವಲ ಆಯ್ದ ಥಿಯೇಟರ್‌ಗಳಲ್ಲಿ 'ಜೇಮ್ಸ್' ಟಿಕೆಟ್ ಬುಕ್ ಮಾಡಬಹುದಾಗಿದೆ. ಬೆಂಗಳೂರಿನಲ್ಲಿರುವ 5 ಗೋಪಾಲ್ ಮಾಲ್‌ಗಳಲ್ಲಿ 'ಜೇಮ್ಸ್' ಸಿನಿಮಾ ವೀಕ್ಷಿಸಲಿ ಆನ್‌ಲೈನ್ ಬುಕ್ಕಿಂಗ್ ಆರಂಭ ಆಗಿದೆ. ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್, ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್, ಸಿರ್ಸಿ ಸರ್ಕಲ್‌ನಲ್ಲಿರುವ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿಪ್ಲೆಕ್ಸ್‌ನಲ್ಲಿ 'ಜೇಮ್ಸ್' ಚಿತ್ರದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದೆ.


Click it and Unblock the Notifications











