'ಜೇಮ್ಸ್' ಸಿನಿಮಾಗೆ ಬುಕಿಂಗ್ ಆರಂಭ: ಸದ್ಯಕ್ಕೆ ಇಲ್ಲಿ ಮಾತ್ರ ಸಿಗುತ್ತೆ ಟಿಕೆಟ್

ಪವರ್‌ಸ್ಟಾರ್ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿದೆ. ಅಪ್ಪು ಕೊನೆ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ಜೇಮ್ಸ್ ಸಿನಿಮಾವನ್ನು ಹಿಂದೆಂದೂ ಯಾವುದೇ ಸಿನಿಮಾ ತೆರೆಕಾಣದಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಒಂದು ಅಂದಾಜಿನ ಪ್ರಕಾರ, ವಿಶ್ವದಾದ್ಯಂತ ಸುಮಾರು 4 ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಅಪ್ಪು ಅಭಿಮಾನಿಗಳಿಗೆ ಖುಷಿ ವಿಷಯ ಏನೆಂದರೆ, ಈಗಾಗಲೇ 'ಜೇಮ್ಸ್' ಸಿನಿಮಾಗೆ ಟಿಕೆಟ್ ನೀಡಲಾಗುತ್ತಿದೆ.

ಪುನೀತ್ ಫ್ಯಾನ್ಸ್‌ 'ಜೇಮ್ಸ್' ಜಾತ್ರೆ ಮಾಡಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಈ ಮಧ್ಯೆ ಚಿತ್ರತಂಡ ಕೂಡ ಅಭಿಮಾನಿಗಳಿಗಾಗಿ ಅದ್ದೂರಿಯಾಗಿ ಇವೆಂಟ್ ಮಾಡಲು ಸಜ್ಜಾಗಿ ನಿಂತಿದೆ. ಸಿನಿಮಾ ಬಿಡುಗಡೆ ಇನ್ನು ಕೇವಲ ಎಂಟು ದಿನಗಳಿರುವಾಗಲೇ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಪುನೀತ್ ಅಭಿಮಾನಿಗಳು ಕೂಡ ಈಗಾಗಲೇ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಹಾಗಿದ್ದರೆ 'ಜೇಮ್ಸ್' ಸಿನಿಮಾ ಟಿಕೆಟ್ ಎಲ್ಲೆಲ್ಲಿ ಲಭ್ಯವಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

 'ಜೇಮ್ಸ್' ಟಿಕೆಟ್ ವಿತರಣೆ ಆರಂಭ

'ಜೇಮ್ಸ್' ಟಿಕೆಟ್ ವಿತರಣೆ ಆರಂಭ

'ಜೇಮ್ಸ್' ಸಿನಿಮಾದ ಮೊದಲ ಹಂತದ ಥಿಯೇಟರ್‌ಗಳ ಲಿಸ್ಟ್ ರಿಲೀಸ್ ಮಾಡಲಾಗಿದೆ ಅಷ್ಟೆ. ಇನ್ನೂ ಹಲವೆಡೆ ಸಿನಿಮಾ ರಿಲೀಸ್ ಆಗಲಿದ್ದು, ಎರಡನೇ ಹಂತದ ಪಟ್ಟಿಯನ್ನು ಬಿಡುಗಡೆಯಾಗಬೇಕಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಮಾತ್ರ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಬೆಂಗಳೂರಿನ ಗೋಪಾಲನ್ ಮಾಲ್‌ಗಳಲ್ಲಿ ಮಾತ್ರ 'ಜೇಮ್ಸ್' ಸಿನಿಮಾ ನೋಡಲು ಒಂದು ವಾರ ಮುನ್ನವೇ ಟಿಕೆಟ್ ನೀಡಲಾಗುತ್ತಿದೆ.

 5 ಮಾಲ್‌ಗಳಲ್ಲಿ ಜೇಮ್ಸ್ ಟಿಕೆಟ್

5 ಮಾಲ್‌ಗಳಲ್ಲಿ ಜೇಮ್ಸ್ ಟಿಕೆಟ್

ಆರಂಭಿಕ ಹಂತದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾದ ಟಿಕೆಟ್ ಅನ್ನು ಅನ್‌ಲೈನ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿರುವ 5 ಗೋಪಾಲನ್ ಮಾಲ್‌ಗಳಲ್ಲಿ ಜೇಮ್ಸ್ ಸಿನಿಮಾ ಬುಕಿಂಗ್ ಮಾಡಬಹುದಾಗಿದೆ. ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೇಡ್‌, ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್, ಸಿರ್ಸಿ ಸರ್ಕಲ್‌ನಲ್ಲಿರುವ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿಪ್ಲೆಕ್ಸ್‌ನಲ್ಲಿ 'ಜೇಮ್ಸ್' ಚಿತ್ರದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ವಿತರಣೆಯಾಗುತ್ತಿದೆ.

 'ಜೇಮ್ಸ್' ಜಾತ್ರೆಗೆ ಫ್ಯಾನ್ಸ್ ಸಜ್ಜು

'ಜೇಮ್ಸ್' ಜಾತ್ರೆಗೆ ಫ್ಯಾನ್ಸ್ ಸಜ್ಜು

'ಜೇಮ್ಸ್' ಸಿನಿಮಾ ಟಿಕೆಟ್‌ಗಳನ್ನು ಸಿಂಗಲ್ ಸ್ಕ್ರೀನ್‌ಗಳಲ್ಲಿ ವಿತರಣೆ ಮಾಡಲಾಗುತ್ತಿಲ್ಲ. ಕರ್ನಾಟಕದಲ್ಲಿ 'ಜೇಮ್ಸ್' ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಸಂಖ್ಯೆ ಫೈನಲ್ ಆದ ಬಳಿಕ ಟಿಕೆಟ್ ವಿತರಣೆ ಆರಂಭ ಆಗುವ ಸಾಧ್ಯತೆಯಿದೆ. ಆದರೆ, ಅಪ್ಪು ಅಭಿಮಾನಿಗಳ ಗಮನವೀಗ 'ಜೇಮ್ಸ್' ಬಿಡುಗಡೆ ದಿನ ಜಾತ್ರೆ ಮಾಡುವ ಕಡೆ ನೆಟ್ಟಿದೆ. ಎಲ್ಲಾ ಚಿತ್ರಮಂದಿರಗಳಲ್ಲೂ 'ಜೇಮ್ಸ್' ಜಾತ್ರೆ ಮಾಡಲು ಅಭಿಮಾನಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ಪ್ರಮುಖ ಚಿತ್ರಮಂದಿರಗಳ ಮುಂದೆ ಕಟೌಟ್‌ಗಳು ಬಂದಿಳಿದಿವೆ.

 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್?

400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್?

ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಎರಡನೇ ಹಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿಯೇ ಸುಮಾರು 400 ಸಿಂಗಲ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಇನ್ನು ಮಲ್ಟಿಪ್ಲೆಕ್ಸ್‌ನಲ್ಲೂ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಕೊನೆಯ ದಿನವೇ ಥಿಯೇಟರ್‌ಗಳ ಸಂಖ್ಯೆ ಹೊರಬೀಳಲಿದೆ.

More from Filmibeat

English summary
Puneeth Rajkumar Last movie James ticket booking open in Goplan Mall. Already all Gopalan Mall filling fast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X