"64 ವಿದ್ಯೆಗೆಲ್ಲ ಬಾಸು", "ಲೆವೆಲ್ ಅಂದ್ರೆ ದೊಡ್ಮನೆ ಲೆವೆಲ್"; ಟ್ವಿಟರ್‌ನಲ್ಲಿ 'ಜಾಕಿ'ಗೆ ಪ್ರತಿಕ್ರಿಯೆ ಹೇಗಿದೆ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳನ್ನು ಅಗಲಿ ಎರಡೂವರೆ ವರ್ಷವಾಗಿದೆ. ಆದರೂ ಅಭಿಮಾನಿಗಳ ಮನದಲ್ಲಿ ಮಾತ್ರ ಇನ್ನೂ ಜೀವಂತವಾಗಿದ್ದಾರೆ ಅನ್ನುವುದಕ್ಕೆ ಇಂದು (ಮಾರ್ಚ್ 15) ರಿಲೀಸ್ ಆಗಿರುವ 'ಜಾಕಿ' ಸಿನಿಮಾವೇ ಸಾಕ್ಷಿ.
ಥಿಯೇಟರ್‌ಗಳಲ್ಲಿ 'ಜಾಕಿ' ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ಕ್ರೇಜಿಯಾಗಿದೆ. ಬೆಳ್ಳಂಬೆಳಗ್ಗೆ 4.30ಕ್ಕೆ ಮೊದಲ ಶೋ ಆರಂಭ ಆಗಿತ್ತು. ಅದಕ್ಕೆ ಜನರು ಕಿಕ್ಕಿರಿದು ಸೇರಿದ್ದರು. ಇವತ್ತಿನ ಇಡೀ ದಿನದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

14 ವರ್ಷಗಳ ಬಳಿಕ ರೀ ರಿಲೀಸ್ ಆಗುತ್ತಿರುವ ಸಿನಿಮಾಗೆ ಈ ಮಟ್ಟಿಗೆ ಕ್ರೇಜ್ ಸಿಕ್ಕಿದ್ದಕ್ಕೆ ಚಿತ್ರರಂಗವೇ ದಂಗಾಗಿ ಹೋಗಿದೆ. 'ಜಾಕಿ' ಸಿನಿಮಾ ನೋಡಿ ಹೊರಬಂದ ಫ್ಯಾನ್ಸ್ ಎಕ್ಸ್ ಖಾತೆಯಲ್ಲಿ (ಟ್ವಿಟರ್) ಕ್ರೇಜಿ ರೆಸ್ಪಾನ್ಸ್ ಕೊಡುತ್ತಿದ್ದಾರೆ.
"64 ವಿದ್ಯೆಗೆಲ್ಲ ಬಾಸು ನಮ್ ಬಾಸು"
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿದೆ. ಬೆಳಗ್ಗೆ 4.30ರಿಂದಲೇ ಈ ಸಿನಿಮಾ ಶೋಗಳು ಆರಂಭ ಆಗಿವೆ. ಅಪ್ಪು ಅಭಿಮಾನಿಗಳು ಕಿಕ್ಕಿರಿದು ಸಿನಿಮಾ ನೋಡುತ್ತಿದ್ದಾರೆ. ಥಿಯೇಟರ್ ಒಳಗೆ ಆಗುತ್ತಿರುವ ಎಕ್ಸ್‌ಪೀರಿಯನ್ಸ್ ಅನ್ನು ತೆಗೆದು ಟ್ವಿಟರ್‌ಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರು "64 ವಿದ್ಯೆಗೆಲ್ಲ ಇರೋದೋಬ್ರೆ ನಮ್ಮ ಬಾಸು.. " ಎಂದು ಸಿನಿಮಾ ಜೋಷ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“64” ವಿದ್ಯೆಗೆಲ್ಲ ಇರೋದೋಬ್ರೆ ನಮ್ಮ ಬಾಸು.... #JackieReRelease #DrPuneethRajkumar𓃵 pic.twitter.com/KaWvbMWqDR
— 𝐕𝐊 |𝐏𝐎𝐖𝐄𝐑𝐒𝐓𝐀𝐑| 🚩 (@Prk_Vk_1718) March 15, 2024
ಕನ್ನಡ ಚಿತ್ರರಂಗದ ಬ್ರ್ಯಾಂಡ್ ಪುನೀತ್
ಬೆಂಗಳೂರಿನಲ್ಲಿ ಬೆಳಗ್ಗೆ 4.30ಕ್ಕೆ ಮೊದಲ ಶೋ ಇಡಲಾಗಿತ್ತು.ಅದೂ ಕೂಡ ಕಿಕ್ಕಿರಿದು ಸೇರಿದೆ. ವಿಶೇಷ ಅಂದ್ರೆ, ಈ ಬೆಳಗ್ಗೆ ಶೋ ಮಹಿಳೆಯ ಹಾಗೂ ಕುಟುಂಬದವರು ಕೂಡ ಬಂದು ಶಿಳ್ಳೆ ಹಾಕಿ ಸಂಭ್ರಮಿಸಿರುವ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. "ಮಹಿಳೆಯರು ಹಾಗೂ ಕುಟುಂಬದವರು ಕೂಡ ಬೆಳ್ಳಂಬೆಳಗ್ಗೆ ಶೋಗೆ ಬಂದು ನೋಡ್ತಾರೆ ಅಂದ್ರೆ, ಅದು ಆಗೋದು ಒಬ್ಬರ ಕೈಯಲ್ಲಿ. ಒನ್ ಅಂಡ್ ಒನ್ಲಿ ಕನ್ನಡ ಚಿತ್ರರಂಗದ ಬ್ರ್ಯಾಂಡ್ ಡಾ.ಪುನೀತ್ ರಾಜ್‌ಕುಮಾರ್." ಎಂದು ಅಭಿಮಾನಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
Ladies and family kuda EMS bandu nodtare andre adu agodu obru kaiyalli
— Deepak (@deepak_bill09) March 15, 2024
One and only brand of #KFI #DrPuneethRajkumar𓃵 #JackieReRelease https://t.co/RPf9Iq39BM
ಲೆವೆಲ್ ಅಂದ್ರೆ ಇದು ದೊಡ್ಮನೆ ಲೆವೆಲ್
"ಲೆವೆಲ್ ಅಂದ್ರೆ ಇದು ದೊಡ್ಮನೆ ಲೆವೆಲ್, ತಲ ತಲಾಂತರದಿಂದ ಬಂದಿರೋದು.. ಜೀವಮಾನದಲ್ಲಿಯೇ ಬೆಸ್ಟ್ ಥಿಯೇಟರ್ ಅನುಭವ ಕೊಟ್ಟ ಸಿನಿಮಾವಿದು. ಕ್ರೇಜ್, ಸಂಭ್ರಮ ಆಕಾಶದೆತ್ತರದಲ್ಲಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅನ್ನುವ ಹೆಸರಷ್ಟೇ ಸಾಕು. ಕ್ರೇಜ್ ಅನ್ನುವ ಪದ ಮರುವ್ಯಾಖ್ಯಾನ ಆಗಿದೆ." ಎಂದು ಮತ್ತೊಬ್ಬ ಅಭಿಮಾನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಲೆವೆಲ್ ಅಂದ್ರೆ ಇದು ದೊಡ್ಮನೆ ಲೆವೆಲ್, ತಲತಲಾoತರದಿಂದ ಬಂದಿರೋದು 😎
— Viji Maani (@VijayanandaHeg7) March 15, 2024
Lifetime best theater experience film🙏
Craze, Celebration at its peak🔥
Just the name is enough-Power Star Puneeth Rajkumar ❤️
The word 'Craze' redefined 💥#DrPuneethRajkumar𓃵#JackieReRelease pic.twitter.com/eI1nfrxoWD
"ಬಾಸ್ ಬಂದವ್ರೆ.."
ಇನ್ನು ಕೆಲವು ಅಭಿಮಾನಿಗಳು ಜಾಕಿ ಸಿನಿಮಾ ರಿಲೀಸ್ ಆಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ಭಾವುಕರಾಗಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. "ಈಗಲೇ ಕಣ್ಣ ತುಂಬಾ ನಮ್ ದೇವ್ರನ್ನ ನೋಡಿಕೊಳ್ಳಿ. ಯಾಕಂದ್ರೆ ಮತ್ತೆ ಬೆಳ್ಳೆ ಪರದೆಯ ಮೇಲೆ ನೋಡುವುದಕ್ಕೆ ಒಂದು ವರ್ಷ ಕಾಯಬೇಕು." ಎಂದು ಫ್ಯಾನ್ಸ್ ಒಬ್ಬ ಭಾವುಕರಾಗಿದ್ದಾರೆ.
ಬಾಸ್ ಬಂದವರೇ 🥺🙏🏻❤️#DrPuneethRajkumar𓃵 #JackieReRelease pic.twitter.com/GJ6wF5aJ9W
— PRK INSPIRATIONS (@PrkInspirations) March 15, 2024
ನೆಲದ ಮೇಲೆ ಕೂತು ಸಿನಿಮಾ ನೋಡಿದ್ರು
"ಬೆಳಗ್ಗೆ 4.30ರ ಶೋ ಹೌಸ್‌ಫುಲ್ ಆಗಿತ್ತು. ಜನರು ನೆಲದ ಮೇಲೆ ಕೂತು ಸಿನಿಮಾ ನೋಡುತ್ತಿದ್ದಾರೆ. ಎನರ್ಜಿ ಅದ್ಭುತವಾಗಿತ್ತು. ಇದೊಂತರ ಹೌಸ್‌ಫುಲ್ ಮ್ಯಾಡ್‌ನೆಸ್. ಜನರನ್ನು ಥಿಯೇಟರ್‌ಗೆ ಕರೆದುಕೊಂಡು ಬರುವ ದಿ ಲೆಜೆಂಡ್ ಡಾ.ಪುನೀತ್ ರಾಜ್‌ಕುಮಾರ್" ಎಂದ ಮತ್ತೊಬ್ಬ ಅಭಿಮಾನಿ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Picture this: A packed house at 4:30 in the morning, with people sitting on the floor, captivated by Housefull Power packed. The energy was electric! ✨ #HousefullMadness
— Ujwal (@ujwalk11) March 15, 2024
👑Mass Crowd Puller The Man The Legend #DrPuneethRajkumar𓃵 ❤️#JackieReRelease #Jackie #JackieKannadaMovie pic.twitter.com/oymKJHTqYr
"ಜಾಕಿ ಜ್ವರ ಶುರು"
"ಜಾನಕಿ ರಾಮ ಕೇವಲ ಬಾಕ್ಸಾಫೀಸ್‌ನಲ್ಲಿ ಕಿಡಿ ಹೊತ್ತಿಸಿಲ್ಲ. ವಿರೋಧಿಗಳಿಗೂ ಕಿಡಿ ಹಚ್ಚಿದೆ. ಪುನೀತ್ ರಾಜ್‌ಕುಮಾರ್ ಅವಾಗಲೂ ಕಿಂಗ್ ಆಗಿದ್ದರು. ಈಗಲೂ ಇದ್ದಾರೆ. ಮುಂದೆನೂ ಇದ್ದಾರೆ. ಜಾಕಿ ಜ್ವರ ಶುರುವಾಗಿದ್ದಾರೆ." ಎಂದು ಫ್ಯಾನ್ಸ್ ಖುಷಿ ಕೊಟ್ಟಿದ್ದಾರೆ.
JANAKI RAMA didn't set only box office on fire, but also on back of his haters 💥
— ಪರಮಾತ್ಮ (@Paramathma_Appu) March 15, 2024
KING then, now, forever 🙇♂️
JACKIE FEVER BEGINS#JackieReRelease #DrPuneethRajkumar𓃵 👑 pic.twitter.com/dQiAbEQH7X


Click it and Unblock the Notifications











