For Quick Alerts
  ALLOW NOTIFICATIONS  
  For Daily Alerts

  ಅಪ್ಪು ಸಿನಿಮಾ 'ಭಕ್ತ ಪ್ರಹ್ಲಾದ' ಹಾಗೂ 'ಲಕ್ಕಿ ಮ್ಯಾನ್‌' ರಿಲೀಸ್ ಡೇಟ್ ಒಂದೇ: ಯಾವುದದು?

  |

  ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾ 'ಲಕ್ಕಿ ಮ್ಯಾನ್' ಬಿಡುಗಡೆ ಸಜ್ಜಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಪ್ಪು ಅಭಿಮಾನಿಗಳು ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಬಹುದು. ಸಿನಿಮಾ ಬಿಡುಗಡೆಗಾಗಿ ಸಾಕಷ್ಟು ಸಿದ್ಧತೆಗಳೂ ಕೂಟ ಆರಂಭ ಆಗಿವೆ.

  'ಲಕ್ಕಿ ಮ್ಯಾನ್' ಪವರ್‌ಸ್ಟಾರ್ ಅಗಲಿದ ನಂತರ ಬಿಡುಗಡೆಯಾಗುತ್ತಿರುವ ಎರಡನೇ ಸಿನಿಮಾ. ಈಗಾಗಲೇ 'ಜೇಮ್ಸ್' ಸಿನಿಮಾವನ್ನು ಅಭಿಮಾನಿಗಳು ನೋಡಿ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸಿನಿಮಾವನ್ನು ಅಭಿಮಾನಿಗಳೇ ಪ್ರಚಾರ ಮಾಡುವುದಕ್ಕೆ ನಿಂತಿದ್ದಾರೆ. ಈ ಗ್ಯಾಪ್‌ನಲ್ಲಿ ಅಭಿಮಾನಿಗಳಿಗೆ ಕಾಕತಾಳೀಯ ಎನ್ನಬಹುದಾದ ಅಂಶವೊಂದು ಗೊತ್ತಾಗಿದೆ.

  ಅಪ್ಪು ಮನೆ ಸಮೀಪ ಎದ್ದು ನಿಂತ 'ಲಕ್ಕಿ ಮ್ಯಾನ್' ಕಟೌಟ್: ಅಭಿಮಾನಿಗಳೇ ಅದೃಷ್ಟವಂತರು!ಅಪ್ಪು ಮನೆ ಸಮೀಪ ಎದ್ದು ನಿಂತ 'ಲಕ್ಕಿ ಮ್ಯಾನ್' ಕಟೌಟ್: ಅಭಿಮಾನಿಗಳೇ ಅದೃಷ್ಟವಂತರು!

  ಪ್ರಭುದೇವ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿರೋ ಈ ಸಿನಿಮಾ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಅಪ್ಪು ಫ್ಯಾನ್ಸ್‌ಗೆ 'ಭಕ್ತ ಪ್ರಹ್ಲಾದ' ಹಾಗೂ 'ಲಕ್ಕಿ ಮ್ಯಾನ್' ಎರಡೂ ಬಿಡುಗಡೆಯಾದ ದಿನ ಹಾಗೂ ತಿಂಗಳು ಒಂದೇ ಅನ್ನೋ ಅಚ್ಚರಿ ಮೂಡಿಸಿದೆ.

   ಲಕ್ಕಿ ಮ್ಯಾನ್ ಥಿಯೇಟರ್‌ ಎಂಟ್ರಿ ಯಾವಾಗ?

  ಲಕ್ಕಿ ಮ್ಯಾನ್ ಥಿಯೇಟರ್‌ ಎಂಟ್ರಿ ಯಾವಾಗ?

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ರಿಲೀಸ್ ಇನ್ನು ಐದು ದಿನ ಮಾತ್ರ ಬಾಕಿ ಉಳಿದಿದೆ. ಅಪ್ಪು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಕೊನೆಯ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ಕೂಡ ಕಾದು ಕೂತಿದ್ದಾರೆ. 'ಲಕ್ಕಿ ಮ್ಯಾನ್' ಸಿನಿಮಾ ಇದೇ ಸೆಪ್ಟೆಂಬರ್ 9ರಂದು ರಾಜ್ಯದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಬಿಡುಗಡೆ ದಿನಕ್ಕೂ ಅಪ್ಪು ಬಾಲನಟನಾಗಿ ನಟಿಸಿದ 'ಭಕ್ತ ಪ್ರಹ್ಲಾದ' ಸಿನಿಮಾ ಬಿಡುಗಡೆಯಾದ ದಿನ ಹಾಗೂ ತಿಂಗಳು ಒಂದೇ.

  ಕನ್ನಡ ಸಿನಿರಸಿಕರಿಗೆ ಮತ್ತೊಂದು ಸಿಹಿಸುದ್ದಿ: 'ಲಕ್ಕಿಮ್ಯಾನ್' ಸ್ವಾಗತಕ್ಕೆ 'ನರ್ತಕಿ' ಸಿದ್ಧ!ಕನ್ನಡ ಸಿನಿರಸಿಕರಿಗೆ ಮತ್ತೊಂದು ಸಿಹಿಸುದ್ದಿ: 'ಲಕ್ಕಿಮ್ಯಾನ್' ಸ್ವಾಗತಕ್ಕೆ 'ನರ್ತಕಿ' ಸಿದ್ಧ!

  'ಭಕ್ತ ಪ್ರಹ್ಲಾದ', 'ಲಕ್ಕಿ ಮ್ಯಾನ್' ನಂಟೇನು?

  'ಭಕ್ತ ಪ್ರಹ್ಲಾದ', 'ಲಕ್ಕಿ ಮ್ಯಾನ್' ನಂಟೇನು?

  'ಲಕ್ಕಿ ಮ್ಯಾನ್' ಸಿನಿಮಾ ಇನ್ನು ಐದು ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಇನ್ನೊಂದು ಕಡೆ ಪುನೀತ್ ರಾಜ್‌ಕುಮಾರ್ ಬಾಲನಟನಾಗಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ್ದ 'ಭಕ್ತ ಪ್ರಹಾದ' ಕೂಡ ಇದೇ ದಿನ ಹಾಗೂ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಹೌದು, 'ಭಕ್ತ ಪ್ರಹ್ಲಾದ' 1983ರಲ್ಲಿ ಸೆಪ್ಟೆಂಬರ್ 9ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಸುಮಾರು 39 ವರ್ಷಗಳ ಬಳಿಕ ಪುನೀತ್ ರಾಜ್‌ಕುಮಾರ್ ಅಭಿನಯ ಅದೇ ದಿನ ಹಾಗೂ ತಿಂಗಳಂದು ಬಿಡುಗಡೆಯಾಗುತ್ತಿದೆ. ಇದು ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.

  ಇದು ಕಾಕತಾಳೀಯವೇ?

  ಇದು ಕಾಕತಾಳೀಯವೇ?

  ಪವರ್‌ಸ್ಟಾರ್ ಅಭಿನಯದ ಎರಡೂ ಸಿನಿಮಾಗಳು ವಿಚಿತ್ರ ನಂಟಿಗೆ ಅಭಿಮಾನಿಗಳೇ ಭಾವುಕರಾಗಿದ್ದಾರೆ. ಅವರೇ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಷಯವನ್ನು ವೈರಲ್ ಮಾಡುತ್ತಿದ್ದಾರೆ. ಆದರೆ, 'ಲಕ್ಕಿ ಮ್ಯಾನ್' ರಿಲೀಸ್ ಕಾಕತಾಳಿಯವೋ ಅಥವಾ ಇದೇ ದಿನ, ತಿಂಗಳು ರಿಲೀಸ್ ಮಾಡೋಕೆ ಮೊದಲೇ ನಿರ್ಧರಿಸಿದ್ದರೋ? ಅನ್ನೋದು ಮಾತ್ರ ಇನ್ನೂ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

  ಫ್ಯಾನ್ಸ್ ಪಾಲಿಗೆ ಅಪ್ಪು ದೇವರು

  ಫ್ಯಾನ್ಸ್ ಪಾಲಿಗೆ ಅಪ್ಪು ದೇವರು

  'ಲಕ್ಕಿಮ್ಯಾನ್' ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ರಿಯಲ್‌ ಲೈಫ್‌ನಲ್ಲೂ ಪವರ್‌ಸ್ಟಾರ್ ಹಲವರ ಪಾಲಿಗೆ ದೇವರಾಗಿದ್ದಾರೆ. ನಟನೆಯಷ್ಟೇ ಅಲ್ಲ. ಯಾರಿಗೂ ಗೊತ್ತಿಲ್ಲದಂತೆಯೇ ಪುನೀತ್ ರಾಜ್‌ಕುಮಾರ್ ಅದೆಷ್ಟೋ ಮಂದಿ ಸಹಾಯಹಸ್ತ ಚಾಚಿದ್ದರು. ಅವರ ಅಭಿಮಾನಿಗಳಿಗಷ್ಟೇ ಅಲ್ಲ. ಎಲ್ಲರಿಗೂ ಮಾದರಿಯಾಗಿ ಹೊರಟು ಹೋಗಿದ್ದಾರೆ. ಈ ಕಾರಣಕ್ಕೆ ಪವರ್‌ಸ್ಟಾರ್ ಕೇವಲ ಸಿನಿಮಾದಲ್ಲಷ್ಟೇ ಅಲ್ಲ. ನಿಜ ಜೀವನದಲ್ಲೂ ಅದೆಷ್ಟೋ ಮಂದಿಗೆ ದೇವರೇ ಆಗಿದ್ದಾರೆ.

  Recommended Video

  Draling Krishna | Lucky Man | ನಾನು ಈ ಸಿನಿಮಾ ಒಪ್ಕೊಂಡಿದ್ದೇ ಬೇರೆ ಕಾರಣಕ್ಕೆ | Filmibeat Kannada
  English summary
  Puneeth Rajkumar Movie Lucky Man And Bhakta Prahlada Release date Are Same, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X