ಪುನೀತ್ ಹಣೆಯ ಮೇಲೂ UI : ಮುಹೂರ್ತದಲ್ಲಿ ಅಪ್ಪು ಫೋಟೊ ತೋರಿಸಿದ್ದೇಕೆ ಉಪ್ಪಿ?

ರಿಯಲ್‌ಸ್ಟಾರ್ ಉಪೇಂದ್ರ ನಿರ್ದೇಶನ ಮಾಡುತ್ತಾರೆ ಅಂದರೆ, ಉಪ್ಪಿ ಅಭಿಮಾನಿಗಳ ಕಣ್ಣು ಒಮ್ಮೆ ನೆಟ್ಟಗಾಗುತ್ತೆ. ರಿಯಲ್ ಸ್ಟಾರ್ ಮತ್ತೆ ಇನ್ಯಾವ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾರೋ? ಸಿನಿಮಾದಲ್ಲಿ ಏನು ವಿಶೇಷ ಇರುತ್ತೋ? ತಲೆ ಹುಳ ಬಿಡುತ್ತಾರಾ? ಅನ್ನುವ ನೂರೆಂಟು ಪ್ರಶ್ನೆಗಳು ಓಡಾಡುತ್ತಲೇ ಇರುತ್ತೆ.

ಕೆಲವು ದಿನಗಳಿಂದ ರಿಯಲ್‌ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ 'UI' ಬಗ್ಗೆನೇ ಚರ್ಚೆಯಾಗುತ್ತಿತ್ತು. ಕೆಲವರು ಉಪ್ಪಿ ಹೊಸ ಸಿನಿಮಾದ ಟೈಟಲ್ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಮತ್ತೆ ಕೆಲವರು ರಿಯಲ್‌ ಸ್ಟಾರ್ ಸಿನಿಮಾದ ಹೊಸ ಪೋಸ್ಟರ್ ನೋಡಿ ತಲೆ ಕೆಡಿಸಿಕೊಂಡಿದ್ದರು.

ಮತ್ತೆ ಮತ್ತೆ ತಲೆಗೆ ಹುಳ ಬಿಟ್ಟು ಸಿನಿಮಾ ಮುಹೂರ್ತ ಮಾಡಿರುವ ರಿಯಲ್ ಸ್ಟಾರ್, ಮನೆಯಿಂದ ಹೊರಟಾಗಲೇ ಹಣೆ ಮೇಲೆ ಟೈಟಲ್ ಇಟ್ಟುಕೊಂಡೇ ಹೊರಟಿದ್ದರು. ಅಂದ್ಹಾಗೆ ಕೇವಲ ಉಪ್ಪಿ ಅಷ್ಟೇ ಅಲ್ಲ. ನಿರ್ಮಾಪಕ ಶ್ರೀಕಾಂತ್, ಜಿ. ಮನೋಹರನ್ ಕೂಡ ಹಣೆ ಮೇಲೆ ಟೈಟಲ್ ಇಟ್ಟುಕೊಂಡೇ ಮನೆ ಬಿಟ್ಟಿದ್ದರು. ಇದೊಂದು ಕಡೆ ಚರ್ಚೆಯಾಗುತ್ತಿದ್ದರೆ, ಇನ್ನೊಂದು ಕಡೆ ಸಿನಿಮಾ ಮುಹೂರ್ತದಲ್ಲಿ ಪವರ್‌ಸ್ಟಾರ್ ಬಾಲ್ಯದ ಪೋಟೊ ತೋರಿಸಿ ಅಚ್ಚರಿ ಮೂಡಿಸಿದ್ದಾರೆ.

ಉಪ್ಪಿ 'UI' ಮುಹೂರ್ತದಲ್ಲಿ ಅಪ್ಪು ಪೋಟೊ

ಉಪ್ಪಿ 'UI' ಮುಹೂರ್ತದಲ್ಲಿ ಅಪ್ಪು ಪೋಟೊ

ರಿಯಲ್‌ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ 'UI' ಮುಹೂರ್ತ ನಡೆದಿದೆ. ಬೆಂಗಳೂರಿನ ದೇವಸ್ಥಾನದಲ್ಲಿ ಸಿನಿಮಾಗೆ ಚಾಲನೆ ನೀಡಲಾಗಿದೆ. ಈ ವೇಳೆ ರಿಯಲ್ ಸ್ಟಾರ್, ಅಪ್ಪು ಬಾಲ್ಯದ ಫೋಟೊ ಒಂದನ್ನು ತೋರಿಸಿದ್ದರು. ಅಸಲಿಗೆ ಈ ಫೋಟೊವನ್ನು ನೀವು ಕೂಡ ನೋಡಿರುತ್ತೀರಿ. ಪುನೀತ್ ಬಾಲ್ಯದ ಫೋಟೊದಲ್ಲಿ ನಾಮ ಇಟ್ಟುಕೊಂಡಿದ್ದು ಈ ಹಿಂದೆನೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಉಪ್ಪಿ 'UI' ಸಿನಿಮಾದ ಮುಹೂರ್ತದಲ್ಲೂ ಅದೇ ಫೋಟೊ ಬೇಜಾನ್ ಸದ್ದು ಮಾಡಿದೆ. ಅಸಲಿಗೆ ಈ ಉಪ್ಪಿ ಫೋಟೊ ತೋರಿಸಿದ್ದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'UI' ಮುಹೂರ್ತದಲ್ಲಿ ಫೋಟೊ ಬಂದಿದ್ದೇಕೆ?

'UI' ಮುಹೂರ್ತದಲ್ಲಿ ಫೋಟೊ ಬಂದಿದ್ದೇಕೆ?

ಅಸಲಿಗೆ ಆಗಿದ್ದಿಷ್ಟು.. 'UI' ಮುಹೂರ್ತದ ಬಳಿಕ ಉಪೇಂದ್ರ ಹಾಗೂ ನಿರ್ಮಾಪಕರು ಮಾಧ್ಯಮಗಳೊಂದಿಗೆ ಮಾತಾಡುತ್ತಿದ್ದರು. ಈ ವೇಳೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಪತ್ನಿ ಅವರ ಮೊಬೈಲ್‌ಗೆ ಅಪ್ಪು ಬಾಲ್ಯದ ಫೋಟೊವನ್ನು ವಾಟ್ಸಾಪ್ ಮಾಡಿದ್ದರು. ಈ ಫೋಟೊವನ್ನು ಕೆ ಪಿ ಶ್ರೀಕಾಂತ್, ಉಪೇಂದ್ರ ಅವರಿಗೆ ತೋರಿಸಿದ್ದರು. ಬಳಿಕ ಉಪೇಂದ್ರ ಆ ಫೋಟೊವನ್ನು ಹಿಡಿದು ಅಪ್ಪು ಕೂಡ ನಮ್ಮೊಂದಿಗೆ ಇದ್ದಾರೆ ಎಂದು ಪವರ್‌ಸ್ಟಾರ್ ಅನ್ನು ನೆನಪಿಸಿಕೊಂಡರು. ಅದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

'UI' ಸಿನಿಮಾದಲ್ಲಿ ಪುನೀತ್ ಇರುತ್ತಾರಾ?

'UI' ಸಿನಿಮಾದಲ್ಲಿ ಪುನೀತ್ ಇರುತ್ತಾರಾ?

" ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ 'UI' ಸಿನಿಮಾಗೂ, ಪುನೀತ್ ರಾಜ್‌ಕುಮಾರ್ ಅವರಿಗೂ ಸಂಬಂಧವಿಲ್ಲ. ನನ್ನ ಪತ್ನಿ ಅಪ್ಪು ಅವರ ಬಾಲ್ಯ ಫೋಟೊ ಕಳಿಸಿದ್ದರು ಅನ್ನೇ ಉಪೇಂದ್ರ ಅವರು ತೋರಿಸಿದ್ದಾರೆ. ಆ ಸಂದರ್ಭದಲ್ಲಿ ಬಂದ ಫೋಟೊವನ್ನು ತೋರಿಸಿದ್ದು ಬಿಟ್ಟರೆ, ಅಪ್ಪು ಬಗ್ಗೆ ಈ ಸಿನಿಮಾದಲ್ಲಿ ಏನೂ ಇರುವುದಿಲ್ಲ. ಆದರೆ, ಅವರು ನಮ್ಮೊಂದಿಗೆ ಸದಾ ಇರುತ್ತಾರೆ." ಎಂದು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಫಿಲ್ಮಿ ಬೀಟ್‌ ಜೊತೆ ಮಾತಾಡುವಾಗ ಸ್ಪಷ್ಟಪಡಿಸಿದ್ದಾರೆ.

ಅಪ್ಪುಗೆ ಉಪ್ಪಿಯೊಂದು ಸಿನಿಮಾ ಮಾಡ್ಬೇಕಿತ್ತು

ಅಪ್ಪುಗೆ ಉಪ್ಪಿಯೊಂದು ಸಿನಿಮಾ ಮಾಡ್ಬೇಕಿತ್ತು

ರಿಯಲ್ ಸ್ಟಾರ್ ನಿರ್ದೇಶನದ ಸಿನಿಮಾಗಳನ್ನು ಪುನೀತ್‌ ರಾಜ್‌ಕುಮಾರ್‌ ತುಂಬಾನೇ ಇಷ್ಟ ಪಡುತ್ತಿದ್ದರು. ಉಪ್ಪಿ ಕೂಡ ಪುನೀತ್ ರಾಜ್‌ಕುಮಾರ್‌ಗಾಗಿ ಒಂದು ಸಿನಿಮಾವನ್ನು ಮಾಡಬೇಕಿತ್ತು. ಆದರೆ, 'ಓಂ' ಸಿನಿಮಾಗಿಂತಲೂ ಅದ್ಭುತ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ ಎಂದು ಪುನೀತ್ ಅಗಲಿದ ವೇಳೆ ಉಪ್ಪಿ ಹೇಳಿದ್ದರು.

More from Filmibeat

English summary
Puneeth Rajkumar Photo was Main Attraction In Upendra Directorial UI New movie lanuch, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X