ಪಕ್ಕದಲ್ಲಿ ಫೆರಾರಿ ಹೋದರೂ ತಲೆಕೆಡಿಸಿಕೊಳ್ಳೊಲ್ಲ: 'ಯುವರತ್ನ'ದ ಹಬ್ಬದ ಪೋಸ್ಟರ್ ರಿಲೀಸ್

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿರುವ 'ಯುವರತ್ನ' ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಎಲ್ಲವೂ ಸರಿಯಾಗಿದ್ದರೆ ಈ ವೇಳೆಗಾಗಲೇ ಪುನೀತ್ ಅಭಿಮಾನಿಗಳು ಬೆಳ್ಳಿ ಪರದೆ ಮೇಲೆ ಸಿನಿಮಾ ವೀಕ್ಷಿಸಿ ಸಂಭ್ರಮಿಸುತ್ತಿರುತ್ತಿದ್ದರು.

ಚಿತ್ರಕ್ಕೆ ಸಂಬಂಧಿಸಿದ ಇನ್ನಷ್ಟು ಕೆಲಸಗಳು ಬಾಕಿ ಇರುವುದರಿಂದ ಸದ್ಯಕ್ಕೆ ಸಿನಿಮಾ ಪೂರ್ಣಗೊಳ್ಳುವುದಿಲ್ಲ. ಚಿತ್ರದ ಹಾಡುಗಳ ಬಿಡುಗಡೆಯೂ ವಿಳಂಬವಾಗುತ್ತಿದೆ. ಈ ಅವಧಿಯಲ್ಲಿ ಅಭಿಮಾನಿಗಳ ಅಸಹನೆ ಶಮನ ಮಾಡಲು 'ಯುವರತ್ನ' ಚಿತ್ರತಂಡ ಪುನೀತ್ ಅವರ ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 'ಯುವರತ್ನ' ಚಿತ್ರತಂಡ ಪುನೀತ್ ಅವರ ಸ್ಟೈಲಿಶ್ ಲುಕ್‌ನ ಪೋಸ್ಟರ್ ಬಿಡುಗಡೆ ಮಾಡಿದೆ. ನೀಲಿ ಬಣ್ಣದ ಹಿನ್ನೆಲೆಯಲ್ಲಿನ ಪೋಸ್ಟರ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಮುಂದೆ ಓದಿ...

ಬೇರೆಯವರ ದಾರಿಯಲ್ಲಿ ಹೋಗೊಲ್ಲ

ಬೇರೆಯವರ ದಾರಿಯಲ್ಲಿ ಹೋಗೊಲ್ಲ

'ನಾವ್ ಯಾವತ್ತೂ ಬೇರೆಯವರ ರೂಟ್‌ನಲ್ಲಿ ಟ್ರಾವೆಲ್ ಆಗಲ್ಲ! ನಮ್ದೇ ದಾರಿ- ನಮ್ದೇ ಸವಾರಿ.. ಪಕ್ಕದಲ್ಲಿ ಫೆರಾರಿ ಹೋದ್ರೂ ತಲೆಕೆಡಿಸಿಕೊಳ್ಳೊಲ್ಲ' ಎಂಬ ಡೈಲಾಗ್ ಈ ಪೋಸ್ಟರ್‌ನಲ್ಲಿದೆ. 'ಯುವರತ್ನ' ಚಿತ್ರತಂಡದಿಂದ ಯಾವುದಾದರೂ ಅಪ್‌ಡೇಟ್ ನೀಡಿ ಎಂದು ಪುನೀತ್ ಅಭಿಮಾನಿಗಳು ಚಿತ್ರತಂಡಕ್ಕೆ ಪದೇ ಪದೇ ಕೇಳುತ್ತಿರುತ್ತಾರೆ. ಅದರ ಅವರ ಬೇಡಿಕೆ ತಣಿಸಲು ಹಬ್ಬದ ದಿನದಂದು ಈ ವಿಶೇಷ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

'ಐ ಲವ್ ಯೂ...' ಹಾಡು

'ಐ ಲವ್ ಯೂ...' ಹಾಡು

ಇತ್ತೀಚೆಗೆ ಪುನೀತ್ 'ಯುವರತ್ನ'ದ ಡಬ್ಬಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ಸಂತೋಷ್ ಆನಂದ್ ರಾಮ್ ಹಂಚಿಕೊಂಡಿದ್ದರು. 'ಓಂ' ಚಿತ್ರದ ಜನಪ್ರಿಯ ಹಾಡು 'ಐ ಲವ್ ಯೂ, ಯೂ ಮಸ್ಟ್ ಲವ್' ಮೀ ಎನ್ನುವ ವಿಡಿಯೋ ವೈರಲ್ ಆಗಿತ್ತು. ಈ ಹಾಡನ್ನು 'ಯುವರತ್ನ'ದ ಸನ್ನಿವೇಶವೊಂದರಲ್ಲಿ ಬಳಸಿಕೊಳ್ಳಲಾಗಿದೆ.

ಇಂಟ್ರೊಡಕ್ಷನ್ ಬೇಡ...

ಇಂಟ್ರೊಡಕ್ಷನ್ ಬೇಡ...

ಜುಲೈ ಆರಂಭದಲ್ಲಿಯೂ 'ಯುವರತ್ನ'ದ ಹೊಸ ಸ್ಟಿಲ್ ಬಿಡುಗಡೆ ಮಾಡಲಾಗಿತ್ತು. 'ಕೆಲವರ ಬಗ್ಗೆ ಇಂಟ್ರೊಡಕ್ಷನ್ ಬೇಡ, ಅವರ ಬಗ್ಗೆ ಇನ್‌ಫಾರ್ಮೇಷನ್ ಕೊಟ್ಟರೆ ಸಾಕು' ಎಂಬ ಶೀರ್ಷಿಕೆ ನೀಡಲಾಗಿತ್ತು. 'ಯುವರತ್ನ- ದಿ ಪವರ್ ಆಫ್ ಯೂತ್' ಈಗಾಗಲೇ ಜನರಲ್ಲಿ ವಿಪರೀತ ನಿರೀಕ್ಷೆಗಳನ್ನು ಮೂಡಿಸಿದೆ.

ಒಂದೇ ಸಿನಿಮಾದಲ್ಲಿ ಪುನೀತ್-ಯಶ್?

ಒಂದೇ ಸಿನಿಮಾದಲ್ಲಿ ಪುನೀತ್-ಯಶ್?

ತಾವು ಮೊದಲು ನಿರ್ದೇಶಿಸಿದ 'ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ' ಚಿತ್ರದ ಆರಂಭ ಮಾಡಿ ಏಳು ವರ್ಷ ತುಂಬಿದ ಸಂದರ್ಭದಲ್ಲಿ ಸಂತೋಷ್ ಅನಂದ್‌ರಾಮ್, ಪುನೀತ್ ರಾಜ್ ಕುಮಾರ್ ಮತ್ತು ಯಶ್ ಅವರನ್ನು ಒಟ್ಟಿಗೆ ತೆರೆಯ ಮೇಲೆ ನೋಡುವ ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಇಬ್ಬರೂ ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ನಟಿಸುವ ನಿರೀಕ್ಷೆಗಳನ್ನು ಅವರು ಹುಟ್ಟುಹಾಕಿದ್ದಾರೆ.

More from Filmibeat

English summary
Puneeth Rajkumar New Poster from Yuvarathnaa movie released on the occasion of Varamahalakshmi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X