ಈ ವಿಚಾರದಲ್ಲಿ ಯಶ್ ನಂಬರ್ 1, ಎರಡನೆಯ ಸ್ಥಾನದಲ್ಲಿ ಪುನೀತ್ ರಾಜ್ ಕುಮಾರ್!
ಯಾವ ನಟನ ಸಿನಿಮಾ ಈ ವರ್ಷ ಎಷ್ಟು ಬಿಡುಗಡೆಯಾದವು? ಬಿಡುಗಡೆಯಾದ ಸಿನಿಮಾಗಳು ಎಷ್ಟು ಗಳಿಕೆ ಕಂಡಿತು? ಆ ನಟನ ಸಂಭಾವನೆ ಎಷ್ಟು ಮುಂತಾದ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ನಂಬರ್ ಒನ್ ಹೀರೋ ಯಾರು ಎಂಬ ವಾದ ಮುಂದಿಡಲಾಗುತ್ತದೆ. ಅಂದಹಾಗೆ ಈ ನಂಬರ್ ಒನ್ ಸ್ಥಾನಗಳು ಅವರ ಅಭಿಮಾನಿಗಳ ವಲಯದಲ್ಲಿ ಸದಾ ಚರ್ಚೆಯಾಗುತ್ತಿರುತ್ತದೆ.
ಆದರೆ ಯಾವ ಅಂಕಿ ಅಂಶಗಳ ಆಧಾರದಲ್ಲಿಯೂ ಈ ನಟ ನಂಬರ್ ಒನ್ ಎಂದು ತೀರ್ಮಾನಿಸುವುದು ಕಷ್ಟ. ಏಕೆಂದರೆ ಪ್ರತಿಯೊಬ್ಬ ನಟರೂ ತಮ್ಮದೇ ಮಿತಿ ಹೊಂದಿರುತ್ತಾರೆ. ಹಾಗೆಯೇ ಅವರ ಅಭಿಮಾನಿಗಳ ಪಾಲಿಗೆ ಅವರೇ ನಂಬರ್ ಒನ್ ಆಗಿರುತ್ತಾರೆ. ಈ ಲೆಕ್ಕಾಚಾರಗಳ ಸಾಲಿಗೆ ಸಾಮಾಜಿಕ ಜಾಲತಾಣಗಳ ಫಾಲೋವರ್‌ಗಳ ಸಂಖ್ಯೆಯೂ ಸೇರಿಕೊಂಡಿದೆ.
ಇತ್ತೀಚೆಗೆ ಸೆಲೆಬ್ರಿಟಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಮಾಧ್ಯಮವೆಂದರೆ ಇನ್‌ಸ್ಟಾಗ್ರಾಂ. ಅದರಲ್ಲಿ ಮೊದಲ ಬಾರಿಗೆ ಒಂದು ಮಿಲಿಯನ್ (10 ಲಕ್ಷ) ಹಿಂಬಾಲಕರನ್ನು ಪಡೆದ ಕನ್ನಡದ ನಟನೆಂದರೆ ಯಶ್. ಮುಂದೆ ಓದಿ..

3 ಮಿಲಿಯನ್‌ನತ್ತ ಯಶ್
ಯಶ್ 'ರಾಕಿಂಗ್ ಸ್ಟಾರ್' ಎಂಬ ಬಿರುದಿನೊಂದಿಗೆ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಆದರೆ ಅವರ ಜನಪ್ರಿಯತೆ ಇಡೀ ದೇಶಕ್ಕೆ ಪರಿಚಯವಾಗಿದ್ದು ಕೆಜಿಎಫ್ ಚಿತ್ರದ ಮೂಲಕ. ಇದರಿಂದ ಸಹಜವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಅವರು 2.9 ಮಿಲಿಯನ್ (29 ಲಕ್ಷ) ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ಮೂಲಕ ಕನ್ನಡದ ನಟರಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಕೂಡ 1.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಮಿಲಿಯನ್ ಕ್ಲಬ್‌ಗೆ ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಇತ್ತೀಚೆಗೆ 1 ಮಿಲಿಯನ್ ಕ್ಲಬ್ ಸೇರಿದ್ದಾರೆ. ಈ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಹತ್ತು ಲಕ್ಷ ಫಾಲೋವರ್‌ಗಳನ್ನು ಪಡೆದ ಕನ್ನಡದ ಎರಡನೆಯ ನಟ ಎನಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಸುದೀಪ್ ಮುಂದೆ
ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಕನ್ನಡದ ನಟರೆಂದರೆ ಕಿಚ್ಚ ಸುದೀಪ್. ಟ್ವಿಟ್ಟರ್‌ನಲ್ಲಿ ಸುದಫ್ 2.3 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಕನ್ನಡದ ಬೇರೆ ಯಾವ ಜನಪ್ರಿಯ ನಟರೂ ಇಲ್ಲಿ ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದಿಲ್ಲ. ಸುದೀಪ್ ಇನ್‌ಸ್ಟಾಗ್ರಾಂನಲ್ಲಿ 6.8 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಇತರೆ ನಟರ ಫಾಲೋವರ್ಸ್
ಇನ್ನು ಹೆಚ್ಚಿನ ಫಾಲೋವರ್‌ಗಳಿರುವುದು ಗಾಯಕ ಚಂದನ್ ಶೆಟ್ಟಿಗೆ ಎನ್ನುವುದು ವಿಶೇಷ. ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ 9.5 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದು, ಮಿಲಿಯನ್ ಸನಿಹದಲ್ಲಿದ್ದಾರೆ. ಶ್ರೀಮುರಳಿ 7.9 ಲಕ್ಷ, ರಕ್ಷಿತ್ ಶೆಟ್ಟಿ 6.4ಲಕ್ಷ, ಗಣೇಶ್ 5.4 ಲಕ್ಷ, ದರ್ಶನ್ 4.5 ಲಕ್ಷ, ಧ್ರುವ ಸರ್ಜಾ 3.3 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ.


Click it and Unblock the Notifications











