ಪುನೀತ್ ರಾಜ್ ಕುಮಾರ್ ಕಾರಿಗೆ ಅಪಘಾತ: ಪ್ರಾಣಾಪಾಯದಿಂದ ಅಪ್ಪು ಪಾರು.!
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರಿಗೆ ಅಪಘಾತವಾಗಿದೆ. 'ನಟ ಸಾರ್ವಭೌಮ' ಚಿತ್ರದ ಶೂಟಿಂಗ್ ಮುಗಿಸಿ ವಾಪಸ್ ಆಗುತ್ತಿದ್ದಾಗ, ಅಪ್ಪು ಕಾರಿಗೆ ಆಕ್ಸಿಡೆಂಟ್ ಆಗಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.
ಪುನೀತ್ ಸೇಫ್, ಅಭಿಮಾನಿಗಳೇ ಗಾಬರಿಯಾಗ್ಬೇಡಿ!
ಪವನ್ ಒಡೆಯರ್ ನಿರ್ದೇಶನದ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣದಲ್ಲಿ ನಟ ಪುನೀತ್ ರಾಜ್ ಕುಮಾರ್ ಭಾಗವಹಿಸಿದ್ದರು. ಕಳೆದ ಐದು ದಿನಗಳಿಂದ ಬಳ್ಳಾರಿಯ ಸ್ಟೀಲ್ ಪ್ಲಾಂಟ್ ಬಳಿ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು.
ಬಳ್ಳಾರಿ ಭಾಗದ ಚಿತ್ರೀಕರಣ ಇಂದು ಸಂಜೆ ವೇಳೆ ಪ್ಯಾಕಪ್ ಆಯ್ತು. ಶೂಟಿಂಗ್ ಮುಗಿಸಿಕೊಂಡು ಮನೆಗೆ ಪುನೀತ್ ರಾಜ್ ಕುಮಾರ್ ಆಂಧ್ರ ಪ್ರದೇಶದ ಅನಂತಪುರ ಮಾರ್ಗವಾಗಿ ಮರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಮುಂದೆ ಓದಿರಿ...

ಅನಂತಪುರದಲ್ಲಿ ಅಪಘಾತ
ಬಳ್ಳಾರಿಯಿಂದ ಬೆಂಗಳೂರಿಗೆ ತುಮಕೂರು ಮಾರ್ಗವಾಗಿ ಪುನೀತ್ ರಾಜ್ ಕುಮಾರ್ ಬರಬೇಕಿತ್ತು. ಆದ್ರೆ, ತುಮಕೂರು ಮಾರ್ಗದಲ್ಲಿ ಟ್ರಾಫಿಕ್ ಹೆಚ್ಚಾಗಿರುವ ಕಾರಣ, ಆಂಧ್ರ ಪ್ರದೇಶದ ಅನಂತಪುರ ಮಾರ್ಗವಾಗಿ ಬೆಂಗಳೂರು ತಲುಪಲು ಪುನೀತ್ ರಾಜ್ ಕುಮಾರ್ ನಿರ್ಧರಿಸಿದರು.

ರೇಂಜ್ ರೋವರ್ ಕಾರ್ ನಲ್ಲಿ ಪ್ರಯಾಣ
ಬಿಳಿ ಬಣ್ಣದ KA 05 MW 144 ರೇಂಜ್ ರೋವರ್ ಕಾರ್ ನಲ್ಲಿ ಪುನೀತ್ ರಾಜ್ ಕುಮಾರ್ ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿದರು. ಅವರೊಂದಿಗೆ ಕಾರ್ ಡ್ರೈವರ್ ಹಾಗೂ ಗನ್ ಮ್ಯಾನ್ ಇದ್ದರು.

ರಾತ್ರಿ ಸುಮಾರು 10 ಗಂಟೆ
ಹೇಳಿ ಕೇಳಿ ರಾತ್ರಿ ಗಂಟೆ ಸಮಯ.. ಕತ್ತಲಲ್ಲಿ ಅನಂತಪುರದ ಬಳಿ ಮೂರು ರಸ್ತೆಗಳ ತಿರುವು ಡ್ರೈವರ್ ಕಣ್ಣಿಗೆ ಕಾಣಲಿಲ್ಲ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ.
ಅದೃಷ್ಟವಶಾತ್ ಪುನೀತ್ ಪ್ರಾಣಾಪಾಯದಿಂದ ಪಾರು
ಅದೃಷ್ಟವಶಾತ್ ಪುನೀತ್ ರಾಜ್ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಕ್ಸಿಡೆಂಟ್ ಆದ ಬಳಿಕ ಸ್ನೇಹಿತರ ಕಾರ್ ನಲ್ಲಿ ಅಪ್ಪು ತೆರಳಿದ್ದಾರೆ. ''ಅಪ್ಪು ಸೇಫ್ ಆಗಿದ್ದಾರೆ. ಅವರಿಗೆ ಏನೂ ಆಗಿಲ್ಲ'' ಎಂದು ಅಪ್ಪು ಆಪ್ತ ಭಾನುಪ್ರಕಾಶ್ ತಿಳಿಸಿದ್ದಾರೆ.


Click it and Unblock the Notifications











