'ಕೆಲವರ ಬಗ್ಗೆ ಇಂಟ್ರೊಡಕ್ಷನ್ ಬೇಡ, ಇನ್ಫಾರ್ಮೇಷನ್ ಸಾಕು': ಪವರ್ ಸ್ಟಾರ್ ಖದರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ತೀವ್ರ ನಿರೀಕ್ಷೆಗಳನ್ನು ಮೂಡಿಸಿರುವ ಚಿತ್ರಗಳಲ್ಲಿ ಒಂದು. 'ರಾಜಕುಮಾರ' ಚಿತ್ರದ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಜೋಡಿ ಒಂದಾಗಿರುವುದು ಆ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ. ಏಕೆಂದರೆ 'ರಾಜಕುಮಾರ' ಚಿತ್ರ ಅನೇಕ ವರ್ಷಗಳಿಂದ ಸಿನಿಮಾಗಳನ್ನು ನೋಡದ ಕುಟುಂಬಗಳನ್ನು ಚಿತ್ರಮಂದಿರಕ್ಕೆ ಕರೆತರುವಂತೆ ಮಾಡಿತ್ತು.
Recommended Video
ಚಿತ್ರದ ಒಂದು ಟೀಸರ್ ಬಿಡುಗಡೆ ಮಾಡಿ, ಹಾಡನ್ನಾದರೂ ರಿಲೀಸ್ ಮಾಡಿ ಎಂದು ಪುನೀತ್ ಅಭಿಮಾನಿಗಳು ಒಂದಿಲ್ಲೊಂದು ಕೋರಿಕೆಗಳನ್ನು ಮುಂದಿಡುತ್ತಲೇ ಇದ್ದಾರೆ. ಮಾರ್ಚ್‌ನಲ್ಲಿ ಲಾಕ್‌ಡೌನ್‌ಗೂ ಮುನ್ನ ಡೈಲಾಗ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಅದರಿಂದ ರೋಮಾಂಚಿತರಾಗಿದ್ದ ಅಭಿಮಾನಿಗಳು ಚಿತ್ರತಂಡದಿಂದ ಮತ್ತೊಂದು ಖುಷಿ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಪುನೀತ್ ಅವರ ಮತ್ತೊಂದು ವಿಶಿಷ್ಟ ಸ್ಟಿಲ್ ಬಿಡುಗಡೆಯಾಗಿದೆ. ಮುಂದೆ ಓದಿ...

ದಿ ಪವರ್ ಆಫ್ ಯೂತ್
ಕೆಂಬಣ್ಣದ ಚಿತ್ತಾರದ ಹಿನ್ನೆಲೆಯಲ್ಲಿ ಪುನೀತ್ ಖಡಕ್ ಲುಕ್‌ನಲ್ಲಿ ನಂತಿರುವ ಸ್ಟಿಲ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಸಮರಕ್ಕೆ ಹೊರಟ ಭಾವದಲ್ಲಿರುವ ಪುನೀತ್ ಅವರ ಮುಖದ ಒಂದು ಭಾಗದ ಮೇಲೆ ಮಾತ್ರವೇ ಬೆಳಕು ಬೀಳುತ್ತಿದ್ದು, ಈ ಸ್ಟಿಲ್ ಸಕತ್ ವೈರಲ್ ಆಗಿದೆ. 'ಯುವರತ್ನ- ದಿ ಪವರ್ ಆಫ್ ಯೂತ್' ಎಂದು ಪುನೀತ್ ಕ್ಯಾಪ್ಷನ್ ನೀಡಿದ್ದಾರೆ.

ಇಂಟ್ರೊಡಕ್ಷನ್ ಬೇಡ!
ಈ ಸ್ಟಿಲ್‌ಅನ್ನು 'ಯುವರತ್ನ' ಚಿತ್ರತಂಡ ಹಂಚಿಕೊಂಡಿದೆ. ಅದರಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ನೀಡಿರುವ ಕ್ಯಾಪ್ಷನ್ ಗಮನ ಸೆಳೆಯುವಂತಿದೆ. 'ಕೆಲವರಿಗೆ ಇಂಟ್ರೊಡಕ್ಷನ್ ಬೇಡ. ಅವರ ಬಗ್ಗೆ ಇನ್‌ಫಾರ್ಮೇಷನ್ ಕೊಟ್ರೆ ಸಾಕು' ಎಂಬ ಸಂಭಾಷಣೆಯ ಸಾಲನ್ನು ಅವರು ಬರೆದಿದ್ದಾರೆ.

ಯುವರತ್ನದ ಸ್ಟಿಲ್ಸ್ ಲೀಕ್
ಕೆಲವು ದಿನಗಳ ಹಿಂದೆ ಯುವರತ್ನ ಚಿತ್ರದ ಫೋಟೊಗಳು ಲೀಕ್ ಆಗಿ ಕೆಲವರು ಎಲ್ಲೆಡೆ ಶೇರ್ ಮಾಡಿದ್ದರು. ಅದರ ಬಗ್ಗೆ ಟ್ವೀಟ್ ಮಾಡಿದ್ದ ಸಂತೋಷ್ ಆನಂದ್ ರಾಮ್, ಆ ಫೋಟೊಗಳನ್ನು ಶೇರ್ ಮಾಡಬೇಡಿ, ಡಿಲೀಟ್ ಮಾಡಿ ಎಂದು ಮನವಿ ಮಾಡಿದ್ದರು.

ತಮನ್ ಮಾಡಿದ್ದ ಮನವಿ
ಇತ್ತೀಚೆಗೆ ಚಿತ್ರದ ನಿರ್ದೇಶಕ ಎಸ್. ತಮನ್ ಕೂಡ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದರು. ಚೆನ್ನೈನಲ್ಲಿ ಲಾಕ್‌ಡೌನ್‌ನಲ್ಲಿ ಸಿಲುಕಿರುವ ಕಾರಣದಿಂದ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಯುವರತ್ನ ಚಿತ್ರದ ಹಾಡುಗಳು ಹೊರಬರುವುದು ತಡವಾಗಲಿದೆ. ದಯವಿಟ್ಟು ಸಹಕರಿಸಿ ಎಂದು ಹೇಳಿದ್ದರು.


Click it and Unblock the Notifications











